ಎಟಿಎಂನಲ್ಲಿ ಹೊಗೆ;ಕೆಲ ಕಾಲ ಆತಂಕ
Team Udayavani, Sep 26, 2021, 6:57 PM IST
ಭಟ್ಕಳ: ಇಲ್ಲಿನ ರಂಗೀಕಟ್ಟೆಯಲ್ಲಿರುವ ಖಾಸಗಿ ಬ್ಯಾಂಕೊಂದರ ಎಟಿಎಂನಲ್ಲಿ ಹೊಗೆ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಬ್ಯಾಂಕ್ ನ ಎಟಿಎಂ ಕೋಣೆಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಗ್ರಾಹಕರೋರ್ವರು ಅಗ್ನಿ ಶಾಮಕ ದಳಕ್ಕೆ ಸುದ್ದಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ತಂಡ ಎಟಿಎಂ ಒಳಗೆ ಇರುವ ಬ್ಯಾಟರಿ ರೂಮಿನಿಂದ ಹೊಗೆ ಬರುವುದನ್ನು ಗಮನಿಸಿ ಬಾಗಿಲನ್ನು ಒಡೆದು ಅಗ್ನಿ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಎಟಿಎಂ ನಲ್ಲಿ ಅಳವಡಿಸಲಾಗಿದ್ದ ಮೂರು ಬ್ಯಾಟರಿಗಳು, ಯು.ಪಿ.ಎಸ್.ಗೆ ಹಾನಿಯಾಗಿದೆ . ತಕ್ಷಣ ಹಾನಿಯಾದ ವಸ್ತುಗಳನ್ನು ಹೊರ ಹಾಕಿದ್ದರಿಂದ ಬೆಂಕಿ ಅನಾಹುತ ತಪ್ಪಿಸಲು ಸಾಧ್ಯವಾಗಿದೆ . ಒಟ್ಟೂ ಹಾನಿಯನ್ನು ಇನ್ನಷ್ಟೇ ಅಂದಾಜಿಸ ಬೇಕಿದೆ.
ನಿರ್ಲಕ್ಷ
ಶನಿವಾರ ಸಂಜೆಯೇ ರೂಮಿನಲ್ಲಿರುವ ಬ್ಯಾಟರಿಗಳಿಂದ ಸುಟ್ಟ ವಾಸನೆ ಬರುತ್ತಿರುವ ಕುರಿತು ಎಟಿಎಂ. ನಿರ್ವಾಹಕ ಎಜೆನ್ಸಿಗೆ ಹೇಳಲಾಗಿದ್ದರೂ ಸಹ ಅವರು ಬಂದು ಬ್ಯಾಟರಿಗಳನ್ನು ಪರೀಕ್ಷಿಸದೇ ಇರುವುದು ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಅಲ್ಲದೇ ಬ್ಯಾಟರಿಗಳನ್ನು ಬಂದ್ ಮಾಡಿದ್ದ ರೂಮಿನಲ್ಲಿಟ್ಟಿದ್ದ ಕಾರಣ ಬಿಸಿಯಾಗಿ ಅಗ್ನಿ ಅನಾಹುತ ಸಂಭವಿಸಿದೆ ಎಂದೂ ಹೇಳಲಾಗಿದೆ.
ಮಾಹಿತಿ ಅಲಭ್ಯ
ಎಟಿಎಂ. ರೂಮಿನಲ್ಲಿ ಅವಘಡ ಸಂಭವಿಸಿದರೆ ಮಾಹಿತಿ ನೀಡುವ ಕುರಿತು ಯಾವುದೇ ಸೂಚನಾ ಫಲಕವಿಲ್ಲ, ಕನಿಷ್ಟ ತುರ್ತು ಪೊಲೀಸ್, ಅಗ್ನಿಶಾಮಕ ಹಾಗೂ ಸಂಪರ್ಕ ಮಾಡಬೇಕಾಗ ಅಧಿಕಾರಿಗಳ ಇಲ್ಲವೇ ಏಜೆನ್ಸಿಯ ದೂರವಾಣಿ ಸಂಖ್ಯೆ ಸಹ ಇಲ್ಲ ಎನ್ನಲಾಗಿದೆ.
ಅಗ್ನಿಶಾಮಕ ದಳದ ಅಧಿಕಾರಿಗಳು ಈ ಕುರಿತು ಸೂಕ್ತ ಮಾಹಿತಿಯನ್ನು ಎಟಿಎಂ ಒಳಗಡೆಯಲ್ಲಿ ಒದಗಿಸುವಂತೆ ಎಲ್ಲಾ ಎಟಿಎಂ ನಿರ್ವಾಹಕರಿಗೆ ತಿಳಿಸುವುದಾಗಿ ಹೇಳಿದ್ದು, ಕನಿಷ್ಟ ಸಂಪರ್ಕಿಸಬೇಕಾದ ತುರ್ತು ಸಂಖ್ಯೆ ಗಳನ್ನು ನಮೂದಿಸುವುದು ಅಗತ್ಯ ಎಂದಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.