ಸಹಾಯಕ್ಕೆ ಬಂದಾಗ ಗೊತ್ತಾಯಿತು ಕಿತ್ತುಹೋದ ಚಪ್ಪಲಿಯ ಅಸಲಿಯತ್ತು!
Team Udayavani, Dec 4, 2020, 6:40 AM IST
ಚೆನ್ನೈ: “ಅಯ್ಯೋ ಪಾಪ ಕಷ್ಟದಲ್ಲಿದ್ದಾರೆ’ ಎಂದು ಸಹಾಯಕ್ಕೆ ಹೋದಾಗಲೇ, ಆ “ಕಷ್ಟ’ದಲ್ಲಿದ್ದವನ ನೈಜ ಮುಖ ಬಹಿರಂಗವಾಗಿದೆ!
ಚೆನ್ನೈ ಏರ್‌ಪೋರ್ಟ್‌ನಲ್ಲಿ ನಡೆದ ಘಟನೆಯಿದು. ವ್ಯಕ್ತಿಯೊಬ್ಬನ ಚಪ್ಪಲಿ ಕಿತ್ತುಹೋಯಿತು ಎಂದು ಅವನಿಗೆ ಸಹಾಯ ಮಾಡಲು ಮುಂದಾದ ಕಸ್ಟಮ್ಸ್ ಇಲಾಖೆಯ ಸಿಬಂದಿಗೆ, ಆ ಚಪ್ಪಲಿಯೊಳಗೆ 12 ಲಕ್ಷ ರೂ. ಮೌಲ್ಯ ದ 239 ಗ್ರಾಂ ಚಿನ್ನ ಸಿಕ್ಕಿದೆ! ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲಾಗಿದೆ.
ತಮಿಳುನಾಡಿನ ರಾಮನಾಥಪುರಂನ ಮೊಹಮ್ಮದ್ ಹಾಸಿಂ ಅಲಿ (21) ದುಬಾೖಯಿಂದ ಚೆನ್ನೈಗೆ ಆಗಮಿಸಿದ್ದ. ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವಂತೆಯೇ ಆತ ಧರಿಸಿದ ಚರ್ಮದ ಚಪ್ಪಲಿ ತುಂಡಾಗಿ ಹೋಯಿತು. ಗೇಟ್ ಬಳಿಯೇ ಇದ್ದ ಕಸ್ಟಮ್ಸ್ ಇಲಾಖೆ ಸಿಬಂದಿ, ಅದನ್ನು ಆತನಿಗೆ ಹಿಂದಿರುಗಿಸಲು ಮುಂದಾದರು. ಆಗ ಚಪ್ಪಲಿ ಸಾಮಾನ್ಯಕ್ಕಿಂತ ಭಿನ್ನವಾಗಿರುವುದು ಅವರ ಗಮನಕ್ಕೆ ಬಂತು. ಸಾಮಾನ್ಯ ಚಪ್ಪಲಿಗೆ ಅಗಲವಾದ ಪಟ್ಟಿ ಇರುತ್ತದೆ. ಆದರೆ ಆ ಚಪ್ಪಲಿ ಕೊಂಚ ಭಿನ್ನವಾಗಿತ್ತು ಮಾತ್ರವಲ್ಲ ಭಾರವೂ ಇತ್ತು. ಕುತೂಹಲಗೊಂಡ ಅಧಿಕಾರಿಗಳು ಪರಿಶೀಲಿಸಿದಾಗ, ಚಪ್ಪಲಿಯ ಪಟ್ಟಿಯಲ್ಲಿಯೇ ಸಣ್ಣ ರಂಧ್ರ ಕೊರೆದು ಕೆಂಪು ರ್ಯಾಪರ್‌ನಲ್ಲಿ ದ್ರವೀಕೃತ ಚಿನ್ನವನ್ನು ಸುತ್ತಿಟ್ಟಿದ್ದು ಪತ್ತೆಯಾಯಿತು. ಈ ಹಿಂದೆಯೂ 14.12 ಲಕ್ಷ ರೂ. ಮೌಲ್ಯದ ಚಿನ್ನವನ್ನು ಈತ ಸಾಗಿಸಿದ್ದ ಎಂಬ ವಿಚಾರವೂ ಈಗ ಬಹಿರಂಗವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.