ಲಡಾಖ್ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್ ವಶಕ್ಕೆ: ವಿಪಕ್ಷಗಳ ಆಕ್ರೋಶ
ರಾಜ್ಯ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಟ್ಟು ಕಳೆದ ನಾಲ್ಕು ವರ್ಷಗಳಿಂದ ಪ್ರತಿಭಟನೆ
Team Udayavani, Oct 1, 2024, 1:30 PM IST
ಲಡಾಖ್/ನವದೆಹಲಿ: ಲಡಾಖ್ ನಿಂದ ದೆಹಲಿ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದ ಸಂಶೋಧಕ, ಶಿಕ್ಷಣ ಸುಧಾರಕ ಸೋನಮ್ ವಾಂಗ್ಚುಕ್ ಹಾಗೂ ಸುಮಾರು 120 ಜನರನ್ನು ದೆಹಲಿ ಗಡಿಯಲ್ಲಿ ಮಂಗಳವಾರ (ಅ.01) ಬಂಧಿಸಿದ್ದು, ಇದು ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ.
ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಗೆ ಸಂವಿಧಾನದ 6ನೇ ಪರಿಚ್ಛೇದದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಸೋನಮ್ ವಾಂಗ್ಚುಕ್ ಹಾಗೂ 100ಕ್ಕೂ ಅಧಿಕ ಮಂದಿ ದೆಹಲಿ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದರು. ಲಡಾಖ್ ನಿಂದ ಹೊರಟ ಪಾದಯಾತ್ರಿಗಳನ್ನು ದೆಹಲಿ ಪೊಲೀಸರು ಗಡಿಯಲ್ಲೇ ತಡೆದು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಕಾರ್ಗಿಲ್ ಡೆಮೋಕ್ರಟಿಕ್ ಅಲೈಯನ್ಸ್ ಜತೆಗೂಡಿ ಲೇಹ್ ಅಪೆಕ್ಸ್ ಮಂಡಳಿ ಈ ಪಾದಯಾತ್ರೆಯನ್ನು ಆಯೋಜಿಸಿತ್ತು. ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಟ್ಟು ಕಳೆದ ನಾಲ್ಕು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿತ್ತು.
ವಾಂಗ್ಚುಕ್ ಬಂಧನಕ್ಕೆ ಕಾಂಗ್ರೆಸ್ ಆಕ್ರೋಶ:
ಸೋನಮ್ ವಾಂಗ್ಚುಕ್ ಹಾಗೂ ನೂರಾರು ಲಡಾಖಿಗಳ ಶಾಂತಿಯುತ ಪಾದಯಾತ್ರೆ ಅವರ ಸಾಂವಿಧಾನಿಕ ಹಕ್ಕು. ಅವರನ್ನು ಗಡಿಯಲ್ಲಿ ಬಂಧಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ದೆಹಲಿ ಗಡಿಯಲ್ಲಿ ಹಿರಿಯ ನಾಗರಿಕರನ್ನು ಬಂಧಿಸಿದ್ದೇಕೆ? ಇದೇನಾ ಲಡಾಖ್ ಭವಿಷ್ಯ? ಇದು ಕೂಡಾ ರೈತರಿಗೆ ಹೆಣೆದ ಚಕ್ರವ್ಯೂಹದಂತಿದೆ..ಮೋದಿಜೀ ನೀವು ಲಡಾಖ್ ನಿವಾಸಿಗಳ ನೋವನ್ನು ಆಲಿಸಿ ಎಂದು ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
The detention of Sonam Wangchuk ji and hundreds of Ladakhis peacefully marching for environmental and constitutional rights is unacceptable.
Why are elderly citizens being detained at Delhi’s border for standing up for Ladakh’s future?
Modi ji, like with the farmers, this…
— Rahul Gandhi (@RahulGandhi) September 30, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.