ಆದಷ್ಟು ಬೇಗ ಮೇಕೆದಾಟು ವಿಚಾರ ಬಗೆಹರಿಯುತ್ತದೆ : ಸಿಎಂ ಬೊಮ್ಮಾಯಿ
ನ್ಯಾಯ ಸಮ್ಮತ ತೀರ್ಮಾನ ಆಗಬೇಕಾಗುತ್ತದೆ..
Team Udayavani, Nov 15, 2021, 12:58 PM IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿರುಮಲದಲ್ಲಿ ನಿರ್ಮಿಸಲಾ ಗುತ್ತಿರುವ ಕರ್ನಾಟಕ ಭವನ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ತಿರುಪತಿ: ಆದಷ್ಟು ಬೇಗ ಮೇಕೆದಾಟು ವಿಚಾರ ಬಗೆಹರಿಯುತ್ತದೆ ಎಂದು ಸೋಮವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ತಿರುಪತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ದಕ್ಷಿಣ ರಾಜ್ಯಗಳ ಸಿಎಂಗಳ ಸಭೆಯಲ್ಲಿ, ಕೃಷ್ಣಾ ನದಿ ನೀರಿನ ಹಂಚಿಕೆ ವಿಚಾರ ಚರ್ಚೆ ಆಯಿತು. ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ನೊಟಿಫಿಕೇಷನ್ ಆಗಬೇಕು. ಆದಷ್ಟು ಬೇಗ ಕೇಂದ್ರ ಸರ್ಕಾರ ನೊಟಿಫಿಕೇಷನ್ ಹೊರಡಿಸುವಂತೆ ಒತ್ತಾಯ ಮಾಡಿದ್ದೇನೆ ಎಂದರು.
ಮೇಕೆದಾಟು ವಿಚಾರವನ್ನು ನಾನು ಸಭೆಯಲ್ಲಿ ಪ್ರಸ್ತಾಪ ಮಾಡಿದೆ,ಆದರೆ ತಮಿಳುನಾಡು ಸಿಎಂ ಸಭೆಗೆ ಬಂದಿರಲಿಲ್ಲ. ಕೇಂದ್ರದ ಜಲಶಕ್ತಿ ಮಂತ್ರಾಲಯದ ಜತೆ ಸಂಪರ್ಕದಲ್ಲಿದ್ದೇವೆ,ದೆಹಲಿಯಲ್ಲಿ ವಕೀಲರ ಜತೆಗೂ ಚರ್ಚಿಸಿದ್ದೇನೆ, ಆದಷ್ಟು ಬೇಗ ಮೇಕೆದಾಟು ವಿಚಾರ ಬಗೆಹರಿಯುತ್ತದೆ ಎಂದರು.
ರಾಜ್ಯದ ಯಾವುದೇ ಯೋಜನೆಗಳಿಗೂ ತಮಿಳುನಾಡು ಮೊದಲಿಂದಲೂ ವಿರೋಧಿಸುತ್ತಾ ಬಂದಿದೆ, ಈಗ ತಮಿಳುನಾಡು ಕೆಳಹಂತದಲ್ಲಿ ಮಾಡುತ್ತಿರುವ ಯೋಜನೆಗಳಿಗೆ ನಾವು ಆಕ್ಷೇಪ ಮಾಡಿದ್ದೇವೆ. ನಮ್ಮ ಮೇಕೆದಾಟು ಯೋಜನೆಗೆ ತಮಿಳುನಾಡು ಆಕ್ಷೇಪಿಸಿದೆ. ಇದಕ್ಕೆ ಒಂದು ನ್ಯಾಯ ಸಮ್ಮತ ತೀರ್ಮಾನ ಆಗಬೇಕಾಗುತ್ತದೆ. ಆದಷ್ಟು ಬೇಗ ಆ ಕೆಲಸ ಆಗುವ ಭರವಸೆ ಇದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.