ನೈಋತ್ಯ ರೈಲ್ವೇ ಬೆಂಗಳೂರು ವಿಭಾಗ : ಗಾಜಿನ ಛಾವಣಿಯ ವಿಸಾxಡೋಮ್ ಬೋಗಿ ಸೇರ್ಪಡೆ
Team Udayavani, Feb 24, 2021, 6:00 AM IST
ಮಂಗಳೂರು: ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸಾxಡೋಮ್ ಬೋಗಿ ನೈಋತ್ಯ ರೈಲ್ವೇಗೆ ಸೇರ್ಪಡೆಗೊಂಡಿದ್ದು ಇದನ್ನು ಮಂಗಳೂರು – ಬೆಂಗಳೂರು ನಡುವೆ ಸಂಚಾರ ನಡೆಸುವ ರೈಲುಗಾಡಿಗೆ ಜೋಡಿ ಸುವ ಸಾಧ್ಯತೆಗಳಿವೆ.
ಭಾರತೀಯ ರೈಲ್ವೇಯಿಂದ ಮಂಜೂ ರಾಗಿರುವ ವಿಸಾxಡೋನ್ ಬೋಗಿ ಎರಡು ದಿನಗಳ ಹಿಂದೆ ನೈಋತ್ಯ ರೈಲ್ವೇಯ ಬೆಂಗಳೂರು ವಿಭಾಗಕ್ಕೆ ಬಂದಿದೆ. ಅದು ಮಾರ್ಚ್ 15ರ ವೇಳೆಗೆ ರೈಲು ಗಾಡಿಗೆ ಸೇರ್ಪಡೆಗೊಂಡು ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆ ಇದೆ. ನಿರ್ದಿಷ್ಟವಾಗಿ ಯಾವ ಮಾರ್ಗದ ರೈಲಿಗೆ ಇದನ್ನು ಜೋಡಿಸುವುದೆಂಬ ಬಗ್ಗೆ ಸದ್ಯ ನಿರ್ಧಾರವಾಗಿಲ್ಲ ಎಂದು ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ. ವಿಜಯ ಉದಯವಾಣಿಗೆ ತಿಳಿಸಿದ್ದಾರೆ.
ಬೋಗಿಯ ವೈಶಿಷ್ಟ್ಯಗಳು
ವಿಸಾxಡೋಮ್ ಬೋಗಿ 40 ಸುಖಾ ಸೀನ ಹಾಗೂ 360 ಡಿಗ್ರಿ ತಿರುಗುವ ಕುರ್ಚಿ ಗಳನ್ನು ಹೊಂದಿರುತ್ತದೆ. ಇದು ಹಗಲಿನ ವೇಳೆಯ ಸಂಚಾರದಲ್ಲಿ ಪ್ರಕೃತಿಯ ವಿಹಂಗಮ ನೋಟವನ್ನು ಸವಿಯಲು ಹೆಚ್ಚು ಪೂರಕವಾಗಿದೆ.
ಮಂಗಳೂರು-ಬೆಂಗಳೂರು ರೈಲು
ಮಾರ್ಗದ ಸುಬ್ರಹ್ಮಣ್ಯ ರೋಡ್- ಸಕಲೇಶಪುರ ನಡುವಣ 55 ಕಿ.ಮೀ. ಮಾರ್ಗ ಘಾಟಿ, ದಟ್ಟ ಅರಣ್ಯ, ಜಲಪಾತಗಳು, ಗಿರಿಗಳ ವಿಹಂಗಮ ನೋಟವಿದೆ. ಅದು ದರಿಂದ ಮಂಗಳೂರು-ಬೆಂಗಳೂರು ಹಗಲು ರೈಲಿಗೆ ಇದನ್ನು ಜೋಡಿಸುವ ಸಾಧ್ಯತೆ ಹೆಚ್ಚು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.