ಕೊನೇ ಕ್ಷಣದಲ್ಲಿ ಎಸ್‌ಪಿಗೆ ಕೈಕೊಟ್ಟ 7ಶಾಸಕರು, ಯುಪಿಯಲ್ಲಿ ಎಸ್ಪಿ ಮುಖ್ಯ ಸಚೇತಕ ರಾಜೀನಾಮೆ
Team Udayavani, Feb 28, 2024, 9:21 AM IST
ಲಕ್ನೋ: ರಾಜ್ಯಸಭೆ ಚುನಾವಣೆಯ ದಿನವಾದ ಮಂಗಳವಾರ ಬೆಳಗ್ಗೆಯೇ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ದೊಡ್ಡ ಶಾಕ್ ಎದುರಾಯಿತು. ಈ ಆಘಾತದ ಪರಿಣಾಮವು ರಾತ್ರಿ ಪ್ರಕಟವಾದ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಹೌದು, ರಾಜ್ಯಸಭೆಯ 10 ಸ್ಥಾನಗಳಿಗೆ ನಡೆದ ಚುನಾವಣೆ ವೇಳೆ ಎಸ್‌ಪಿಯ 7 ಶಾಸಕರು ಬಿಜೆಪಿ ಪರ ಅಡ್ಡಮತದಾನ ಮಾಡಿದರು. ಬೆಳಗ್ಗೆ ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಅವರು ಕರೆದಿದ್ದ ಸಭೆಗೆ 9 ಶಾಸಕರು ಗೈರಾಗಿದ್ದರು. ಆಗಲೇ “ಅಡ್ಡ ಮತದಾನದ’ ವಾಸನೆ ಬಡಿಯತೊಡಗಿತ್ತು. ಈ ವೇಳೆ ಮಾತನಾಡಿದ್ದ ಅಖೀಲೇಶ್, “ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರವು ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಮತ್ತು ಯಾರು ಬಂಡಾಯದ ಬಾವುಟ ಹಾರಿಸುತ್ತಾರೆ ಎಂಬುದರ ಪರೀಕ್ಷೆಯಾಗಿದೆ’ ಎಂದಿದ್ದರು. ಅದರಂತೆಯೇ, ಚುನಾವಣೆ ವೇಳೆ ಸಮಾಜವಾದಿ ಪಕ್ಷದ 7 ಶಾಸಕರು ಬಿಜೆಪಿಯ ಕೈಹಿಡಿದರು.
ಯಾರು ಈ ಪರಿಸ್ಥಿತಿಯಲ್ಲಿ “ಲಾಭ’ ಪಡೆಯಲು ಉದ್ದೇಶಿಸಿದ್ದಾರೋ, ಅವರೆಲ್ಲರೂ ಬಿಟ್ಟು ಹೋಗಲಿ, ಚಿಂತೆಯಿಲ್ಲ ಎಂದು ಅಖೀಲೇಶ್ ಹೇಳಿದರು.
ಮುಖ್ಯ ಸಚೇತಕ ರಾಜೀನಾಮೆ: ವಿಶೇಷವೆಂದರೆ, ಮಂಗಳವಾರ ಬೆಳಗ್ಗೆ ಮುಖ್ಯ ಸಚೇತಕರೂ ಆಗಿದ್ದ ಎಸ್‌ಪಿ ಶಾಸಕ ಮನೋಜ್ ಕುಮಾರ್ ಪಾಂಡೆಯವರು ರಾಜೀನಾಮೆ ನೀಡಿದರು. “ನೀವು ಸಮಾಜವಾದಿ ಪಕ್ಷದ ಮುಖ್ಯ ಸಚೇತಕರಾಗಿ ನನ್ನನ್ನು ನೇಮಕ ಮಾಡಿದ್ದೀರಿ. ಆಧರೆ, ನಾನು ಈ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ, ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿ’ ಎಂದು ಅಖೀಲೇಶ್‌ಗೆ ಪತ್ರ ಬರೆದರು. ಇದರ ಬೆನ್ನಲ್ಲೇ, ಚುನಾವಣೆಯಲ್ಲೂ ಎಸ್‌ಪಿಗೆ ಆಘಾತ ಎದುರಾಯಿತು.
ಇದನ್ನೂ ಓದಿ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಕಬ್ಬಿನ ಲಾರಿ ಡಿಕ್ಕಿ… 13 ಕಾರ್ಮಿಕರಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.