Space: ಯುರೇನಸ್ ಪರಿವಾರ ಸೆರೆಹಿಡಿದ ಜೇಮ್ಸ್‌ವೆಬ್
Team Udayavani, Apr 8, 2023, 7:07 AM IST
ನವದೆಹಲಿ: ಬಾಹ್ಯಾಕಾಶ ಚಿತ್ರಣ ಸೆರೆಹಿಡಿಯುವಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಜೇಮ್ಸ್‌ವೆಬ್ ಬಾಹ್ಯಾಕಾಶ ದೂರದರ್ಶಕ ತನ್ನ ಸಾಮರ್ಥ್ಯವನ್ನು ಮತ್ತೆ ಪ್ರದರ್ಶಿಸಿದ್ದು, ಸೌರವ್ಯೂಹದ ವಿಶಿಷ್ಟಗ್ರಹ ಯುರೇನಸ್‌ನ ಪರಿವಾರದ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ.
ಕ್ರಿಯಾತ್ಮಕ ವಾತಾವರಣದಲ್ಲಿ ಉಂಗುರ ಸ್ವರೂಪದಿಂದ ಆವೃತಗೊಂಡಿರುವ ಯುರೇನಸ್‌ನ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತಿದೆ ಮಾತ್ರವಲ್ಲದೇ, ಉಪಗ್ರಹದ ವಸ್ತುಸ್ಥಿತಿ ಅರ್ಥೈಸಿಕೊಳ್ಳಲು ವಿಜ್ಞಾನಿಗಳ ಅಧ್ಯಯನಕ್ಕೂ ಸಹಕಾರಿಯಾಗಿದೆ. ಯುರೇನಸ್,ಉಂಗುರ ವ್ಯವಸ್ಥೆಯಿಂದ ಆವೃತಗೊಂಡಿರುವ ಉಪಗ್ರಹವಾಗಿದ್ದು, ಗ್ರಹದ ಸುತ್ತಲಿನ ಈ ರಚನೆಯನ್ನು ಸೆರೆ ಹಿಡಿದಿದ್ದು ಮಾತ್ರ ಅಪರೂಪ. 1986ರಲ್ಲಿ ವಾಯೇಜರ್2 ಬಾಹ್ಯಾಕಾಶ ನೌಕೆ ಅಂಥ ಉಂಗುರ ವ್ಯವಸ್ಥೆಯ ಚಿತ್ರಣವನ್ನು ಸೆರೆ ಹಿಡಿದಿತ್ತು.
ಆ ಬಳಿಕ ಈಗ ಜೇಮ್ಸ್‌ವೆನ್ ಯುರೇನಸ್‌ನ ಉಂಗುರ ವ್ಯವಸ್ಥೆಯನ್ನು ಅತ್ಯಂತ ಅದ್ಭುತವಾಗಿ ಸೆರೆ ಹಿಡಿದಿದ್ದು, ಉಪಗ್ರಹದ ಸುತ್ತಲೂ ರಚನೆಗೊಂಡಿರುವ 13 ಉಂಗುರಗಳ ಪೈಕಿ, 11 ಉಂಗುರಗಳ ಸ್ಪಷ್ಟ ಚಿತ್ರಣವನ್ನು ಗಮನಿಸಬಹುದಾಗಿದೆ. ಇದಲ್ಲದೇ,ಉಪಗ್ರಹದ ಸುತ್ತಲೂ ಸುತ್ತುವ 27 ಚಂದ್ರರ ಪೈಕಿ, 6 ಚಂದ್ರರು ಹಾಗೂ ಪೋಲಾರ್ ಕ್ಯಾಪ್ (ಸೂರ್ಯನಿಗೆ ಎದುರಾಗಿರುವ ಯುರೇನಸ್‌ನ ಧ್ರುವ)ನ ಬೆಳಕಿನ ವೈಶಿಷ್ಟ್ಯ , ಮೋಡದ ಚಿತ್ರಣವನ್ನು ಸೆರೆಹಿಡಿಯಲಾಗಿದೆ. ಈ ಅದ್ಭುತ ಚಿತ್ರಣವನ್ನು ಸರೆ ಹಿಡಿಯಲು ಜೇಮ್ಸ್‌ವೆನ್ 12 ನಿಮಿಷಗಳ ದೀರ್ಘ ವೀಕ್ಷಣೆ ನಡೆಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.