ಸದನ ಹೆಚ್ಚು ಕಾಲ ನಡೆಯಲು ಕಾಲ ಕೂಡಿಬರಬೇಕು: ಸ್ಪೀಕರ್ ಕಾಗೇರಿ
Team Udayavani, Dec 24, 2021, 3:58 PM IST
ಸುವರ್ಣ ಸೌಧ : ಸದನ ಹೆಚ್ಚು ಕಾಲ ನಡೆಯಬೇಕು ಎಂಬುದು ಎಲ್ಲರ ಅಪೇಕ್ಷೆ,ಆದರೆ ಅದಕ್ಕೆ ತಕ್ಕುದಾದ ಕಾಲ ಕೂಡಿಬರಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್, ಯಶಸ್ವಿ ಅಧಿವೇಶನ ನಡೆದಿದೆ,ಈ ವರ್ಷ ಒಟ್ಟು 40 ದಿನ ಅಧಿವೇಶನ ಮಡಿಸಿದಂತೆ ಆಗಿದೆ.
ಸದನದಲ್ಲಿ 150 ಸ್ಟಾರ್ಡ್ ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ. ಸದನವನ್ನು ಚೆನ್ನಾಗಿ ನಡೆಸುವ ಉದ್ದೇಶದಿಂದ ಭಾಗವಹಿಸಿದ್ದಾರೆ. ಸದನವನ್ನು ಹೆಚ್ಚು ಕಾಲ ನಡೆಸಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ ಎಂದರು.
ಈ ಸದನದಲ್ಲಿ ಕೇವಲ 8 ಸದಸ್ಯರು ಮಾತ್ರ ಬಂದಿಲ್ಲ. ಅವರು ನನ್ನ ಅನುಮತಿ ಪಡಿದಿದ್ದರು. ಒಟ್ಟು ಹಾಜರಾತಿ 73% ಇತ್ತು. ಸದಸ್ಯರ ಉತ್ಸಾಹ ಈ ಅಂಕಿ ಅಂಶ ತೋರಿಸುತ್ತದೆ. 5,000 ಜನ ಪ್ರೇಕ್ಷಕರ ಗ್ಯಾಲರಿಯಲ್ಲಿ ಬಂದು ಕುಳಿತಿದ್ದಾರೆ. ಈ ಅಧಿವೇಶನದ ಕಲಾಪ ಚೆನ್ನಾಗಿ ನಡೆದಿದೆ ಎಂದರು.
ಸ್ಪೀಕರ್ ಆಗಿ ನನಗೆ ಬೆಳಗಾವಿ ಅಧಿವೇಶನ ನನ್ನ ಮೊದಲ ಅಧಿವೇಶನ. ವ್ಯವಸ್ಥಿತವಾಗಿ ಅಧಿವೇಶನ ನಡೆಸಿದ್ದಾರೆ. ಆಹಾರ ವ್ಯವಸ್ಥೆಯೂ ಚೆನ್ನಾಗಿತ್ತು. ಯಶಸ್ಸಿಗೆ ಬೆಳಗಾವಿ ಜನರ ಪಾತ್ರ ದೊಡ್ಡದು ಅವರು ಸಹಕಾರ ನೀಡಿದ್ದಾರೆ. ಇಲ್ಲಿನ ಅಪೇಕ್ಷೆಗಳು ಸರ್ಕಾರಕ್ಕೆ ಗೊತ್ತಿದೆ ಎಂದರು.
ಸದನ 52 ಗಂಟೆ ಕಾಲ ನಡೆದಿದೆ. ಹೆಚ್ಚು ಸಮಯ ಕಲಾಪ ನಡೆದಾಗ ಸದಸ್ಯರಿಗೆ ಹೆಚ್ಚು ಕಾಲ ಮಾತನಾಡಲು ಆಗುತ್ತದೆ.
ಶಾಸಕರ ಭವನ ಆಗಬೇಕು ಎಂಬ ಅಪೇಕ್ಷೆ ಇದೆ. ಅದರ ಅಗತ್ಯವೂ ಇದೆ. ಬಿಎಸಿಯಲ್ಲೂ ಇದು ಚರ್ಚೆ ಆಗಿದೆ. ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಲುವ ಭರವಸೆ ನೀಡಿದ್ದಾರೆ ಎಂದರು.
ಕದ್ದುಮುಚ್ಚಿ ಮಸೂದೆ ಮಂಡನೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಸೂದೆ ಮಂಡನೆಯಾಗುವ ಮುಂಚಿನ ದಿನ ನಾನು ಕಾರ್ಯಕಲಾಪದ ನಿರ್ಣಯ ಮಾಡುತ್ತೇನೆ. ನಾನು ಅಜೆಂಡಾ ಸಿದ್ದಪಡಿಸುವಾಗ ಆ ಬಿಲ್ ಕಾಪಿ ಬಂದಿರಲಿಲ್ಲ. ಹೀಗಾಗಿ ನಾನು ಅಜೆಂಡಾದಲ್ಲಿ ಅದನ್ನು ಹಾಕಲಿಲ್ಲ. ಊಹೆ ಮೇರೆಗೆ ಅದನ್ನು ಹಾಕಲು ಸಾಧ್ಯವಿಲ್ಲ. ಮರುದಿನ ಬಿಲ್ ಕಾಪಿ ಬಂದಿದೆ. ಆ ಮೇಲೆ ಪೂರಕ ಅಜೆಂಡಾ ಹಾಕಿದ್ದೇನೆ. ಅದಕ್ಕೆ ನಿಯಮಾವಳಿಯಲ್ಲಿ ಅವಕಾಶ ಇದೆ. ಸದನದಲ್ಲಿ ಕೋರಂ ಆದ ಬಳಿಕ ಸದನದಲ್ಲಿ ಬಿಲ್ ಮಂಡಿಸುವ ಪ್ರಕ್ರಿಯೆ ಮಾಡಿದ್ದೇನೆ. ಆದರೂ ಈ ಆರೋಪ ಬಗ್ಗೆ ಏನು ಹೇಳ ಬೇಕು ಎಂದು ಅರ್ಥ ಆಗುತ್ತಿಲ್ಲ. ಅಂದು ಮಧ್ಯಾಹ್ನ ಊಟಕ್ಕೆ ಮುಂದೂಡುವ ಮುನ್ನ ವಿಪ್ ನ ಕರೆಸಿ ಮಧ್ಯಾಹ್ನ ಮಸೂದೆ ಮಂಡಿಸುತ್ತೇನೆ ಎಂದು ಹೇಳಿದ್ದೆ. ಅಂದು ಪ್ರತಿಪಕ್ಷ ನಾಯಕರು ಸದನದ ಒಳಗೆ ಬರಲು ತಡ ಮಾಡಿದರು. ಆದರೂ ಈ ರೀತಿ ಆರೋಪ ಮಾಡಿದರೆ ಯಾರು ಪ್ರಬುದ್ಧರು ಎಂದು ಪ್ರಶ್ನೆ ಮಾಡಬೇಕು. ಸದನದಲ್ಲಿ ನಿಯಮಾವಳಿ ಪ್ರಕಾರ ಎಲ್ಲವೂ ಪ್ರಕ್ರಿಯೆ ಆಗಿದೆ ಎಂದರು.
ಸಮಯದ ಇತಿಮಿತಿಯಲ್ಲಿ ಎಲ್ಲವೂ ಆಗಬೇಕು. ಹೆಚ್ಚಿನ ಕಲಾಪ ನಡೆದಿದ್ದರೆ ಚರ್ಚೆ ಆಗುತ್ತಿತ್ತು. ಸಮಯ ಹೆಚ್ಚು ಕೊಡಬೇಕಾಗಿತ್ತು.
ಸಿದ್ದರಾಮಯ್ಯಗೆ ಚರ್ಚೆಗೆ ಒಂದು ತಾಸು ಕೊಟ್ಟಿದ್ದೇನೆ. ಅತಿವೃಷ್ಟಿ ಬಗ್ಗೆ ಅವರಿಗೆ ಹೆಚ್ಚು ಅವಕಾಶ ಕೊಟ್ಟಿದ್ದೇನೆ. ಸಮಯ ಇದ್ದಿದ್ದರೆ ಇನ್ನೂ ಸಮಯಾವಕಾಶ ಕೊಡುತ್ತಿದ್ದೆ. ಯಡಿಯೂರಪ್ಪ ಅವರು ಹೇಳಿದ ಮಾತನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಅವರ ಸಲಹೆ ಸೂಚನೆಗಳನ್ನು ಜಾರಿಗೊಳಿಸಲು ಯತ್ನಿಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.