ಅಧಿಕಾರಿಗೆ ಎಲ್ಲರೆದುರೇ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡ ಸ್ಪೀಕರ್ ಕಾಗೇರಿ


Team Udayavani, Dec 30, 2021, 5:25 PM IST

1-ddsa

ಶಿರಸಿ: ಸಹಕಾರಿ‌ ಇಲಾಖೆಯ ಅಧಿಕಾರಿಯೋರ್ವರಿಗೆ ಇತರ ಅಧಿಕಾರಿಗಳೆಲ್ಲರ ಎದುರೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗಂಭೀರವಾಗಿ ಕ್ಲಾಸ್ ‌ತೆಗೆದುಕೊಂಡ ಪ್ರಸಂಗ‌ ಗುರುವಾರ ನಡೆಯಿತು.

ನಗರದ ಮಿನಿ ವಿಧಾ‌ನ ಸೌಧದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ವೇಳೆ ಸಹಕಾರಿ‌ ಇಲಾಖೆಯ ಅಧಿಕಾರಿ‌ ಲಿಂಗರಾಜು ಅವರ ಬಗ್ಗೆ ದೂರುಗಳಿವೆ ಎಂದು ಪ್ರಸ್ತಾಪಿಸಿ ಖಡಕ್ ಎಚ್ಚರಿಕೆ ಕೂಡ ನೀಡಿದರು.

ಶಿರಸಿ ಸಿದ್ದಾಪುರ ನನ್ನ‌ ಕ್ಷೇತ್ರ. ನಿಮ್ಮ ವರ್ತನೆ, ನಡುವಳಿಕೆ ಚೆನ್ನಾಗಿದ್ದರೆ ನನಗೂ‌ ಖುಷಿ. ಆದರೆ, ತಪ್ಪಾಗಿ ನಡೆದರೆ ಶಾಸನ ಸಭೆಯಲ್ಲೇ ನೇರವಾಗಿ ಇಲಾಖೆಯ‌ ಮುಖ್ಯಸ್ಥರ ಗಮನಕ್ಕೆ ತರುವದಾಗಿ ಹೇಳಿದರು. ಮಾರ್ಚ್ ಕೊನೆಯೊಳಗೆ ಎಲ್ಲ ಇಲಾಖೆ ಕಾರ್ಯ ಮುಗಿಸಬೇಕು. ಲೊಕೋಪಯೋಗಿ ಇಲಾಖೆ, ಪಂಚಾಯತ ರಾಜ್, ಪಿಎಂಜಿಎಸ್ ವೈ ಸೇರಿದಂತೆ‌ ಎಲ್ಲರೂ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಣ ವಾಪಸ್ ಹೋಗಬಾರದು ಎಂದರು.

ಅತಿವೃಷ್ಟಿ, ಕೋವಿಡ್ ಗೆ ಜನರಿಗೆ‌ ಪರಿಹಾರ ನೀಡಿದ್ದೇವೆ. 12.5 ಕೋಟಿ‌ ರೂ. ಲೊಕೋಪಯೋಗಿ, 15  ಕೋಟಿ ಜಿಲ್ಲಾ ಪಂಚಾಯತಿಗೆ ಅನುದಾನ ಬಂದಿದೆ. ಬೇರೆ ಬೇರೆ ಅನುದಾನ ಕೂಡ ಬಂದಿದೆ. ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣ ಆಗಬೇಕು ಎಂದರು.

ಶಿರಸಿ ಜಾತ್ರೆಗೆ ಸಿದ್ದತೆ‌ ಮಾಡಿಕೊಳ್ಳಬೇಕು. ಮಾರಿಕಾಂಬಾ ದೇವಸ್ಥಾನ, ಬಾಬುದಾರರ ಜೊತೆಗೂ ಜಾತ್ರೆ ಸಿದ್ದತೆ ಕೂಡ ಮಾಡಿಕೊಳ್ಳಬೇಕು ಎಂದು ಶೀಘ್ರವಾಗಿ ಸಭೆ ನಡೆಸುತ್ತೇವೆ. ಕೋವಿಡ್ ಆತಂಕ ಕೂಡ ಇದೆ ಎಂದ ಕಾಗೇರಿ, ಕರೋನಾ‌ ಮೂರನೆ ಅಲೆಗೆ ತಡೆ ನೀಡಲು ಹಾಗೂ ಆಸ್ಪತ್ರೆ ಸಿದ್ದತೆ ಕುರಿತೂ ಸಮಾಲೋಚನೆ ಮಾಡಿದ್ದೇವೆ. ಎರಡನೇ ಹಂತದ ಲಸಿಕೆ ಶೇ.೭ ಪ್ರಮಾಣ ಬಾಕಿ ಇದೆ. ಜನರಲ್ಲಿ‌ ಜಾಗೃತಿ‌ ಕೂಡ ಮೂಡಿಸಿಕೊಳ್ಳಬೇಕು. ಕೊರೋನಾ ಮೂರನೇ ಅಲೆ ತಡೆಯಲು ಎಚ್ಚರಿಕೆ ಬೇಕಾಗಿದೆ ಎಂದೂ ಹೇಳಿದರು.

ರಾಷ್ಟ್ರೀಯ ಸಾಗಾರ ಮಾಲಾ ಯೋಜನೆಯಲ್ಲಿ ಕುಮಟಾ‌ ರಸ್ತೆ ಅಭಿವೃದ್ದಿಗಾಗಿ 300 ೦ ಜನ ಕೆಲಸ ಮಾಡುತ್ತಿದ್ದಾರೆ. ಇನ್ನೂ ವೇಗ ಆಗಬೇಕು. ಬೆಳಗಾವಿಯಲ್ಲಿ ನಿತಿನ್ ಗಡ್ಕರಿ ಅವರು ಶಿರಸಿ ಹಾವೇರಿ ರಸ್ತೆಯ ಭೂಮಿ‌ ಪೂಜೆ ಕೂಡ ಮಾಡಲಿದ್ದಾರೆ. ಶಿರಸಿ ಬಿಸಲಕೊಪ್ಪ ಹಾವೇರಿ ತನಕ ಒಟ್ಟೂ 75 ಕಿಮಿಗೆ 287 ಕೋಟಿ ರೂ. ಹಣ ಮಂಜೂರಿ ಆಗಿದೆ. 174 ಕೋಟಿಗೆ ಟೆಂಡರ್ ಆಗಿದೆ‌. ಶಿರಸಿ ಬೈಪಾಸ್ ಪ್ರಸ್ತಾವ ಕೂಡ ಇದೆ ಎಂದರು. ಲವ್ ಜಿಹಾದ್, ಹೆಣ್ಮಕ್ಕಳ ನಾಪತ್ತೆ ಪ್ರಕರಣವನ್ನು‌ ಪೊಲೀಸ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಲು ಸೂಚಿಸಿದ್ದೇವೆ‌. ಪೊಲೀಸ ಇಲಾಖೆ ಸಡಿಲವಾಗಿದೆ ಎಂಬ ಸಂದೇಶ ಹೋಗಬಾರದು ಎಂದೂ ಹೇಳಿದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಆಯುಕ್ತೆ ಆಕೃತಿ ಬನ್ಸಾಲ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ತೋಟಗಾರಿಕಾ ಅಧಿಕಾರಿ ಬಿ.ಪಿ.ಸತೀಶ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.