ಒಂದು ಅಪರೂಪದ ಸಂದರ್ಶನ; ಯುವ ಧೋನಿ ವರ್ಸಸ್ ನಿವೃತ್ತ ಧೋನಿ!
Team Udayavani, Apr 3, 2021, 8:00 AM IST
ಹೊಸದಿಲ್ಲಿ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದ 10ನೇ ವರ್ಷಾಚರಣೆ ದೇಶಾದ್ಯಂತ ನಡೆಯುತ್ತಿದೆ. ಆದರೆ ಧೋನಿ ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನಾಗಲಿ, ಹೇಳಿಕೆಯನ್ನಾಗಲಿ ನೀಡಿಲ್ಲ ಏಕೆ ಎಂಬ ಕುತೂಹಲವಿತ್ತು. ಇದನ್ನೀಗ ಅಪರೂಪದ ವೀಡಿಯೋ ಸಂದರ್ಶನದ ಮೂಲಕ ಧೋನಿ ತಣಿಸುವ ಪ್ರಯತ್ನ ಮಾಡಿದ್ದಾರೆ.
ಅಂದಹಾಗೆ ಇಲ್ಲಿ ಧೋನಿ ಅವರ ಸಂದರ್ಶನ ನಡೆಸಿದ್ದು ಬೇರೆ ಯಾರೂ ಅಲ್ಲ, ಸ್ವತಃ ಧೋನಿ!
ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟ ದಿನದ ಉದ್ದ ಕೂದಲಿನ ಯುವ ಧೋನಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಹಿರಿಯ ಧೋನಿ ಇಲ್ಲಿ ಪರಸ್ಪರ ಎದುರು ಕುಳಿತು ಮಾತಾಡಿದ ವಿಶಿಷ್ಟ ದೃಶ್ಯಾವಳಿ ಇದಾಗಿದೆ.
ನೆಚ್ಚಿನ ಇನ್ನಿಂಗ್ಸ್ ಯಾವುದು?
ನಿಮ್ಮ ಫೇವರಿಟ್ ಇನ್ನಿಂಗ್ಸ್ ಯಾವುದು ಎಂಬ ಕಿರಿಯ ಧೋನಿಯ ಪ್ರಶ್ನೆಗೆ ಸೀನಿಯರ್ ಧೋನಿ ಸ್ವಲ್ಪವೂ ಯೋಚಿಸದೆ “2011ರ ವಿಶ್ವಕಪ್ ಫೈನಲ್‌ನಲ್ಲಿ ಸಿಡಿಸಿದ ಸಿಕ್ಸರ್’ ಎಂದು ಉತ್ತರಿಸುತ್ತಾರೆ. ವಿಶ್ವಕಪ್‌ನಂಥ ಪಂದ್ಯವನ್ನು ಗೆಲುವಿನ ಹೊಡೆತದೊಂದಿಗೆ ಮುಗಿಸುವುದಕ್ಕಿಂತ ಮಿಗಿಲಾದುದಿಲ್ಲ ಎಂದಿದ್ದಾರೆ.
ಮಿಡ್ಲ್ ಆರ್ಡರ್ ಆಯ್ದದ್ದೇಕೆ?
ಅಂತಾರಾಷ್ಟ್ರೀಯ ಕ್ರಿಕೆಟಿನ ಆರಂಭದ ದಿನಗಳಲ್ಲಿ 3ನೇ ಕ್ರಮಾಂಕದಲ್ಲಿ ಯಶಸ್ಸು ಕೈ ಹಿಡಿದರೂ ಬಳಿಕ ಮಿಡ್ಲ್ ಆರ್ಡರ್‌ನಲ್ಲಿ ಆಡಿ ಯಶಸ್ಸು ಸಾಧಿಸಿದ್ದರ ರಹಸ್ಯ ವೇನು ಎಂಬ ಪ್ರಶ್ನೆಗೂ ಸೀನಿಯರ್ ಧೋನಿ ಸ್ವಾರಸ್ಯಕರ ಉತ್ತರ ನೀಡಿದ್ದಾರೆ.
“ಅನುಭವದಿಂದ ಹಲವು ಸಂಗತಿಗಳು ಸುಲಭವಾಗುತ್ತವೆ. ಹಾಗೆಯೇ ಹೊಸ ಹೊಸ ಸವಾಲುಗಳಿಗೆ ನಾವು ಒಡ್ಡಿಕೊಳ್ಳಬೇಕಾಗುತ್ತದೆ. ನೀವು ಹೆಚ್ಚೆಚ್ಚು ಪಂದ್ಯ ಆಡಿದಂತೆಲ್ಲ ಎದುರಾಳಿ ತಂಡದವರು ನಮ್ಮ ಆಟವನ್ನು ನಿಯಂತ್ರಿಸಲು ಹೆಚ್ಚೆಚ್ಚು ಸಿದ್ಧತೆ ಮಾಡಿಕೊಳ್ಳುತ್ತಾರೆ. ಹೀಗಾಗಿ ನೀವೂ ನಿಮ್ಮ ಆಟದ ಗುಣ ಮಟ್ಟವನ್ನು ಸುಧಾರಿಸುತ್ತ ಹೋಗಬೇಕಾದುದು ಅನಿವಾರ್ಯ. ನೀವು ಇಂದು 3ನೇ ಕ್ರಮಾಂಕದಲ್ಲಿ ಆಡುತ್ತಿರಬಹುದು. ನಾಳೆ ಕೆಳ ಸರದಿಯಲ್ಲಿ ಆಡತೊಡಗಿದರೆ ಪರಿಸ್ಥಿತಿ ಭಿನ್ನವಾಗಿರುತ್ತದೆ. ಇದಕ್ಕೆ ಮಾನಸಿಕ ಸಿದ್ಧತೆ ಅತೀ ಮುಖ್ಯ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.