ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಸ್ಫುಟ್ನಿಕ್ ಲಸಿಕೆ ಲಭ್ಯ: ಡಾ.ವಿಕೆ ಪೌಲ್
ರಷ್ಯಾದ ಸ್ಫುಟ್ನಿಕ್ v ಲಸಿಕೆ ತುರ್ತು ಬಳಕೆಗೆ ಈಗಾಗಲೇ ಔಷಧ ನಿಯಂತ್ರಕ ಮಂಡಳಿ ಅನುಮತಿ ನೀಡಿದೆ.
Team Udayavani, May 13, 2021, 5:29 PM IST
ನವದೆಹಲಿ: ರಷ್ಯಾದ ಕೋವಿಡ್ ಲಸಿಕೆ ಸ್ಫುಟ್ನಿಕ್ v ಭಾರತಕ್ಕೆ ತಲುಪಿದ್ದು, ಮುಂದಿನ ವಾರದಿಂದ ಈ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಗುರುವಾರ(ಮೇ 13) ತಿಳಿಸಿದ್ದಾರೆ. ಈಗಾಗಲೇ ಭಾರತಕ್ಕೆ ಮೊದಲ ಹಂತದ ಸ್ಫುಟ್ನಿಕ್ ಲಸಿಕೆ ಬಂದಿದ್ದು, ಇನ್ನಷ್ಟು ಲಸಿಕೆ ರಷ್ಯಾದಿಂದ ಬರಲಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಪಾಸಿಟಿವ್ ಬಂದ 1 ಗಂಟೆಯೊಳಗೆ ಹೋಂ ಐಸೊಲೇಷನ್ ಆದವರಿಗೆ ಮೆಡಿಕಲ್ ಕಿಟ್ : ಅಶ್ವತ್ಥನಾರಾಯಣ
ಜುಲೈನಿಂದ ಭಾರತದಲ್ಲಿಯೇ ಸ್ಫುಟ್ನಿಕ್ v ಲಸಿಕೆ ಉತ್ಪಾದನೆಯಾಗಲಿದೆ. ಭಾರತ 15.6 ಕೋಟಿ ಡೋಸ್ ಗಳಷ್ಟು ಸ್ಫುಟ್ನಿಕ್ ಲಸಿಕೆ ಉತ್ಪಾದಿಸುವ ಗುರಿ ಹೊಂದಿದೆ. ರಷ್ಯಾದ ಸ್ಫುಟ್ನಿಕ್ ಲಸಿಕೆಗೆ ಡಾ.ರೆಡ್ಡೀಸ್ ಲ್ಯಾಬೋರೇಟರಿ ಭಾರತದ ಪಾಲುದಾರ ಸಂಸ್ಥೆಯಾಗಿದೆ.
ನಾವು ಮುಂದಿನ ಐದು ತಿಂಗಳಲ್ಲಿ 2 ಬಿಲಿಯನ್ ಡೋಸ್ ಸ್ಫುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ತಯಾರಿಸಲಿದ್ದೇವೆ ಎಂದು ಡಾ.ವಿ.ಕೆ.ಪೌಲ್ ವಿಶ್ವಾಸವ್ಯಕ್ತಪಡಿಸಿದ್ದಾರೆ. ರಷ್ಯಾದ ಸ್ಫುಟ್ನಿಕ್ v ಲಸಿಕೆ ತುರ್ತು ಬಳಕೆಗೆ ಈಗಾಗಲೇ ಔಷಧ ನಿಯಂತ್ರಕ ಮಂಡಳಿ ಅನುಮತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.