ಪಂಜಾಬ್ ಕಿಂಗ್ಸ್ ವೈಫಲ್ಯ : ಸನ್‌ರೈಸರ್ಸ್ ಗೆ ನಾಲ್ಕನೇ ನೇರ ಗೆಲುವು
Team Udayavani, Apr 17, 2022, 8:00 PM IST
ನವಿ ಮುಂಬೈ: ಇಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಏಳು ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತು.
ಮೊದಲು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ 151 ರನ್‌ಗಳಿಗೆ ಆಲೌಟ್ ಆಗಿತ್ತು. ಪಂಜಾಬ್ ಪರ ಲಿಯಾಮ್ ಲಿವಿಂಗ್‌ಸ್ಟೋನ್ 33 ಎಸೆತಗಳಲ್ಲಿ 60 ರನ್ ಗಳಿಸಿದರು. ಭುವನೇಶ್ವರ್ ಕುಮಾರ್ (3/22) ಮತ್ತು ಉಮ್ರಾನ್ ಮಲಿಕ್ (4/28) ಹೈದರಾಬಾದ್ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದರು.
ಮಲಿಕ್ ಮೂರು ವಿಕೆಟುಗಳನ್ನು ಕಬಳಿಸಿದರು ಮತ್ತು 20 ನೇ ಓವರ್‌ನಲ್ಲಿ ಒಂದು ರನ್ ಔಟ್ ಕೂಡ ಆಯಿತು, ಅದು ಮೇಡನ್ ಆಗಿ ಕೊನೆಗೊಂಡಿತು.
ಗುರಿ ಬೆನ್ನಟ್ಟಿದ ಹೈದರಾಬಾದ್ 18.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ನಾಲ್ಕನೇ ಗೆಲುವನ್ನು ತನ್ನದಾಗಿಸಿಕೊಂಡಿತು.
ಉಮ್ರಾನ್ ಮಲಿಕ್ ಮಿಂಚಿನ ದಾಳಿ
ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಮಿಂಚಿನ ಬೌಲಿಂಗ್ ಮೂಲಕ ಗಮನ ಸೆಳೆದರು. ಅವರೆಸೆದ ಕೊನೆಯ ಓವರ್‌ನಲ್ಲಿ ಪಂಜಾಬ್‌ನ 4 ವಿಕೆಟ್ ಬಿತ್ತು. ಇದರಲ್ಲಿ 3 ಮಲಿಕ್ ಪಾಲಾದರೆ, ಒಂದು ರನೌಟ್ ಆಗಿತ್ತು. ಜತೆಗೆ ಪಂದ್ಯದ 20ನೇ ಓವರನ್ನು ಮೇಡನ್ ಮಾಡಿದ ಹಿರಿಮೆಯೂ ಮಲಿಕ್ ಅವರದಾಯಿತು.
ಮೊದಲ ಎಸೆತ ಡಾಟ್ ಬಾಲ್ ಆಗಿತ್ತು. 2ನೇ ಎಸೆತದಲ್ಲಿ ಸ್ಮಿತ್ ಕಾಟ್ ಆ್ಯಂಡ್ ಬೌಲ್ಡ್ ಆದರು. ಮುಂದಿನದು ಮತ್ತೆ ಡಾಟ್ ಬಾಲ್. 4ನೇ ಹಾಗೂ 5ನೇ ಎಸೆತಗಳಲ್ಲಿ ಚಹರ್ ಮತ್ತು ಅರೋರ ಕ್ಲೀನ್ ಬೌಲ್ಡ್. ಉಮ್ರಾನ್ ಹ್ಯಾಟ್ರಿಕ್ ಹಾದಿಯಲ್ಲಿದ್ದರು. ಕೊನೆಯ ಎಸೆತದಲ್ಲಿ ಆರ್ಷದೀಪ್ ಔಟ್ ಆದರಾದರೂ ಅದು ರನೌಟ್ ಆಗಿತ್ತು.
ಉಮ್ರಾನ್ ಮಲಿಕ್ ಇನ್ನಿಂಗ್ಸ್‌ನ ಅಂತಿಮ ಓವರನ್ನು ಮೇಡನ್ ಮಾಡಿದ ಕೇವಲ 4ನೇ ಬೌಲರ್. ಉಳಿದವರೆಂದರೆ ಇರ್ಫಾನ್ ಪಠಾಣ್ (ಪಂಜಾಬ್-ಮುಂಬೈ, 2008), ಲಸಿತ ಮಾಲಿಂಗ (ಮುಂಬೈ-ಡೆಕ್ಕನ್, 2009) ಮತ್ತು ಜೈದೇವ್ ಉನಾದ್ಕತ್ (ಪುಣೆ-ಹೈದರಾಬಾದ್, 2017).
ಸ್ಕೋರ್‌ಪಟ್ಟಿ
ಪಂಜಾಬ್ ಕಿಂಗ್ಸ್
ಶಿಖರ್ ಧವನ್ ಸಿ ಜಾನ್ಸೆನ್ ಬಿ ಭುವನೇಶ್ವರ್ 8
ಪ್ರಭ್‌ಸಿಮ್ರಾನ್ ಸಿ ಪೂರಣ್ ಬಿ ನಟರಾಜನ್ 14
ಜಾನಿ ಬೇರ್‌ಸ್ಟೊ ಎಲ್‌ಬಿಡಬ್ಲ್ಯು ಸುಚಿತ್ 12
ಲಿವಿಂಗ್‌ಸ್ಟೋನ್ ಸಿ ವಿಲಿಯಮ್ಸನ್ ಬಿ ಭುವನೇಶ್ವರ್ 60
ಜಿತೇಶ್ ಶರ್ಮ ಸಿ ಮತ್ತು ಬಿ ಮಲಿಕ್ 11
ಶಾರೂಖ್ ಖಾನ್ ಸಿ ವಿಲಿಯಮ್ಸನ್ ಬಿ ಭುವನೇಶ್ವರ್ 26
ಒಡೀನ್ ಸ್ಮಿತ್ ಸಿ ಮತ್ತು ಬಿ ಮಲಿಕ್ 13
ಕಾಗಿಸೊ ರಬಾಡ ಔಟಾಗದೆ 0
ರಾಹುಲ್ ಚಹರ್ ಬಿ ಮಲಿಕ್ 0
ವೈಭವ್ ಅರೋರ ಬಿ ಮಲಿಕ್ 0
ಆರ್ಷದೀಪ್ ಸಿಂಗ್ ರನೌಟ್ 0
ಇತರ 7
ಒಟ್ಟು (20 ಓವರ್‌ಗಳಲ್ಲಿ ಆಲೌಟ್) 151
ವಿಕೆಟ್ ಪತನ: 1-10, 2-33, 3-48, 4-61, 5-132, 6-151, 7-151, 8-151, 9-151.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-22-3
ಮಾರ್ಕೊ ಜಾನ್ಸೆನ್ 4-0-35-0
ಟಿ. ನಟರಾಜನ್ 4-0-38-1
ಜಗದೀಶ್ ಸುಚಿತ್ 4-0-28-1
ಉಮ್ರಾನ್ ಮಲಿಕ್ 4-1-28-4
ಸನ್‌ರೈಸರ್ ಹೈದರಾಬಾದ್
ಅಭಿಷೇಕ್ ಶರ್ಮ ಸಿ ಶಾರುಖ್ ಬಿ ಚಹರ್ 31
ಕೇನ್ ವಿಲಿಯಮ್ಸನ್ ಸಿ ಧವನ್ ಬಿ ರಬಾಡ 3
ರಾಹುಲ್ ತ್ರಿಪಾಠಿ ಸಿ ಶಾರೂಖ್ ಬಿ ಚಹರ್ 34
ಐಡನ್ ಮಾರ್ಕ್‌ರಮ್ ಔಟಾಗದೆ 41
ನಿಕೋಲಸ್ ಪೂರಣ್ ಔಟಾಗದೆ 35
ಇತರ 8
ಒಟ್ಟು (18.5 ಓವರ್‌ಗಳಲ್ಲಿ 3 ವಿಕೆಟಿಗೆ) 152
ವಿಕೆಟ್ ಪತನ: 1-14, 2-62, 3-77.
ಬೌಲಿಂಗ್:
ವೈಭವ್ ಆರೋರ 3.5-0-35-0
ಕಾಗಿಸೊ ರಬಾಡ 4-0-29-1
ಆರ್ಷದೀಪ್ ಸಿಂಗ್ 4-0-32-0
ರಾಹುಲ್ ಚಹರ್ 4-0-28-2
ಒಡೀನ್ ಸ್ಮಿತ್ 1-0-8-0
ಲಿಯಮ್ ಲಿವಿಂಗ್‌ಸ್ಟೋನ್ 2-0-19-0
ಪಂದ್ಯಶ್ರೇಷ್ಠ: ಉಮ್ರಾನ್ ಮಲಿಕ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.