ಐಸಿಸ್, ಅಲ್‌ಖೈದಾ ಸೇರಿ 11 ಸಂಘಟನೆಗಳಿಗೆ ಲಂಕಾ ನಿಷೇಧ
Team Udayavani, Apr 14, 2021, 7:10 PM IST
ಕೊಲಂಬೊ: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಮತ್ತು ಅಲ್‌ಖೈದಾ ಸೇರಿದಂತೆ ಒಟ್ಟು 11 ಇಸ್ಲಾಮಿಕ್ ತೀವ್ರಗಾಮಿ ಸಂಘಟನೆಗಳಿಗೆ ಶ್ರೀಲಂಕಾ ಸರ್ಕಾರ ನಿಷೇಧ ಹೇರಿದೆ.
ಭಯೋತ್ಪಾದನೆ ತಡೆ (ತಾತ್ಕಾಲಿಕ ನಿರ್ಬಂಧ) ಕಾಯ್ದೆ ಅನ್ವಯ ಅಧ್ಯಕ್ಷ ಗೊಟಾಬಾಯ ರಾಜಪಕ್ಸೆ ಈ ಕುರಿತು ಮಂಗಳವಾರ ಆದೇಶ ಪ್ರಕಟಿಸಿದ್ದಾರೆ. ಇಂಥ ಸಂಘಟನೆಗಳಲ್ಲಿ ತೊಡಗಿಕೊಳ್ಳುವ ವ್ಯಕ್ತಿಗಳಿಗೆ ಕಾಯ್ದೆ ಅನ್ವಯ 10- 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದೂ ಕಟ್ಟಾಜ್ಞೆ ಹೊರಡಿಸಿದ್ದಾರೆ.
ಶ್ರೀಲಂಕಾ ಇಸ್ಲಾಮಿಕ್ ಸ್ಟೂಡೆಂಟ್ಸ್ ಮೂವ್‌ಮೆಂಟ್ ಸೇರಿದಂತೆ ಕೆಲವು ಸ್ಥಳೀಯ ಮುಸ್ಲಿಮ್ ಸಂಘಟನೆಗಳಿಗೂ ನಿರ್ಬಂಧ ಹೇರಲಾಗಿದೆ. 2019ರಲ್ಲಿ ಕೊಲಂಬೊದಲ್ಲಿ ಈಸ್ಟರ್ ಸಂಡೇ ಆಚರಣೆ ವೇಳೆ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಸರ್ಕಾರ ಈ ಕ್ರಮ ಜಾರಿಗೊಳಿಸಲು ಯೋಜಿಸಿತ್ತು.
ಇದನ್ನೂ ಓದಿ :ಮುಸ್ಲಿಂ ಯುವಕನಿಂದ ಕಾಳಿ ಮಾತೆಯ ಆರಾಧನೆ : ಸಾಮರಸ್ಯ ಸಾರುತ್ತಿದ್ದಾನೆ ರಮ್ಲಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.