ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯ ಬಿರುಸು
Team Udayavani, May 31, 2021, 10:22 PM IST
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸೋಮವಾರ ಟ್ವೀಟ್ ಮಾಡಿದೆ.
ಮಂದಿರ ನಿರ್ಮಾಣಕ್ಕೆ ಅಗತ್ಯವಾಗಿರುವ ತಳಹದಿಯನ್ನು “ರೋಲರ್ ಕಾಂಪಾಕ್ಟೆಡ್ ಕಾಂಕ್ರಿಟ್ ಟೆಕ್ನಿಕ್’ ಅನ್ನು ಉಪಯೋಗಿಸಿಕೊಂಡು ಸಿದ್ಧಪಡಿಸಲಾಗುತ್ತಿದೆ. 1,20,000 ಕ್ಯೂಬಿಕ್ ಮೀಟರ್‌ಗಳಷ್ಟು ಅವಶೇಷಗಳನ್ನು ತೆರವುಗೊಳಿಸಲಾಗಿದೆ.
4-5 ದಿನಗಳ ಒಳಗಾಗಿ ಒಂದು ಹಂತದ ಕಾಂಕ್ರೀಟ್ ಹಾಕಲು ಸಮಯ ಬೇಕಾಗಲಿದೆ ಎಂದು ಹೇಳಿದ್ದಾರೆ. 40-45 ಹಂತಗಳಷ್ಟು ಕಾಂಕ್ರೀಟ್ ಹಂತಗಳನ್ನು ಹಾಕಿ ತಳಹದಿ ಸಿದ್ಧಗೊಳಿಸಲಾಗುತ್ತದೆ. ಇದರ ಜತೆಗೆ, ಸ್ಥಳದಲ್ಲಿ ಕೆಲಸ ಮಾಡುವವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ. ಸೋಂಕು ನಿಯಂತ್ರಣ ಕ್ರಮಗಳನ್ನು ಪಾಲನೆ ಮಾಡಲಾಗುತ್ತಿದೆ ಟ್ರಸ್ಟ್ ಹೇಳಿದೆ.
ಇದನ್ನೂ ಓದಿ :ಕೋವಿಡ್ 19 : ಸೋಂಕು ನಿವಾರಣೆಗೆ ಏಳು ದಿನ ಲಕ್ಷದ್ವೀಪದಲ್ಲಿ ಲಾಕ್ ಡೌನ್ ವಿಸ್ತರಣೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.