ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ 2,100 ಕೋ. ರೂ. ದೇಣಿಗೆ ಸಂಗ್ರಹ : ಪೇಜಾವರ ಶ್ರೀ
ರಾಜ್ಯದಲ್ಲಿ 150 ಕೋಟಿ ರೂ. ನಿಧಿ ಸಂಗ್ರಹ
Team Udayavani, Feb 28, 2021, 7:30 AM IST
ಬೆಂಗಳೂರು/ಉಡುಪಿ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಈವರೆಗೆ 2,100 ಕೋಟಿ ರೂ. ದೇಣಿಗೆ ಸಂಗ್ರಹವಾಗಿರುವ ಅಂದಾಜು ವ್ಯಕ್ತವಾಗಿದೆ.
ಬೆಂಗಳೂರಿನ ಲಾಲ್‌ಬಾಗ್ ಪಶ್ಚಿಮ ದ್ವಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರೂ ಆಗಿರುವ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಈ ಮಾಹಿತಿ ನೀಡಿದ್ದಾರೆ. ಮಂದಿರ ನಿರ್ಮಾಣಕ್ಕೆ ಜನಸಾಮಾನ್ಯರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದ್ದು, ಈವರೆಗೆ 2,100 ಕೋಟಿ ರೂ. ಸಂಗ್ರಹವಾಗಿರುವ ಅಂದಾಜು ಲೆಕ್ಕ ಸಿಕ್ಕಿದೆ ಎಂದಿದ್ದಾರೆ.
1,500 ಕೋಟಿ ರೂ. ಸಂಗ್ರಹವಾಗಬಹುದು ಎಂಬ ಅಂದಾಜು ಮಾಡಿದ್ದೆವು. ಈಗಿನ ಮಾಹಿತಿ ಪ್ರಕಾರ ಸುಮಾರು 2,100 ಕೋಟಿ ರೂ. ಸಂಗ್ರಹವಾಗಿದೆ. ಪೂರ್ಣ ಮಾಹಿತಿ ಇನ್ನೂ ಬರಬೇಕಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 150 ಕೋಟಿ ರೂ.
ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣ ಅಭಿಯಾನ ಶನಿವಾರ ಪೂರ್ಣಗೊಂಡಿದ್ದು, ಅಂದಾಜು 150 ಕೋ.ರೂ. ಸಂಗ್ರಹವಾಗಿದೆ ಎಂದು ವಿಹಿಂಪದ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದ್ದಾರೆ.
ದೇಶಾದ್ಯಂತ ಜ. 15ರಿಂದ ನಿಧಿ ಸಮರ್ಪಣ ಅಭಿಯಾನ ಆರಂಭವಾಗಿತ್ತು. ವಿಹಿಂಪ ಇದರ ಉಸ್ತುವಾರಿ ವಹಿಸಿತ್ತು. ರಾಜ್ಯದಲ್ಲಿ ಮನೆ ಮನೆ ಸಂಪರ್ಕ ಫೆಬ್ರವರಿ ಎರಡನೇ ವಾರದಲ್ಲೇ ಬಹುತೇಕ ಪೂರ್ಣಗೊಂಡಿತ್ತಾದರೂ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸೂಚನೆಯಂತೆ ಫೆ. 27ರ ವರೆಗೂ ನಿಧಿ ಸಮರ್ಪಣೆ ನಡೆದಿದೆ. ಅಂದಾಜು 150 ಕೋಟಿ ರೂ. ಸಂಗ್ರಹವಾಗಿದೆ. ನಿರ್ದಿಷ್ಟ ಅಂಕಿಅಂಶಗಳು ಇನ್ನಷ್ಟೇ ಬರಬೇಕಿದೆ ಎಂದರು.
ನಾಲ್ವರು ಕನ್ನಡಿಗರ ಸೇವೆ
ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ರಾಜ್ಯದ ನಾಲ್ವರು ತೊಡಗಿಸಿಕೊಂಡಿದ್ದಾರೆ. ಪೇಜಾವರ ಶ್ರೀಗಳು ಟ್ರಸ್ಟ್‌ನಲ್ಲಿದ್ದರೆ,
ಕೋಟೇಶ್ವರದ ರಥ ಶಿಲ್ಪಿಗಳು ರಥ ನಿರ್ಮಾಣ ಮಾಡಿಕೊಡಲಿದ್ದಾರೆ. ಹಾಗೆಯೇ ಕನ್ನಡಿಗ, ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತ ಗೋಪಾಲ ನಾಗರಕಟ್ಟೆ ಅವರು ದೇಗುಲ ನಿರ್ಮಾಣದ ಉಸ್ತುವಾರಿ ಹೊತ್ತಿದ್ದಾರೆ. ಐಐಎಸ್‌ಸಿ ವಿಜ್ಞಾನಿ ಇ.ಜಿ.ಸೀತಾರಾಮ್ ಅವರು ಮಂದಿರ ಕಟ್ಟಡದ ಗುಣಮಟ್ಟವನ್ನು ಪರಿಶೀಲನೆ ನಡೆಸಲಿದ್ದಾರೆ.
ಕೋಟೇಶ್ವರ ಶಿಲ್ಪಿಗಳಿಂದ ರಥ
ಮಂದಿರದ ರಥ ನಿರ್ಮಾಣವು ಕುಂದಾಪುರ ತಾಲೂಕಿನ ಕೋಟೇಶ್ವರದ ಶಿಲ್ಪಿಗಳಿಂದ ನಡೆಯಲಿದೆ. ರಥ ನಿರ್ಮಾಣದ ರೂಪ ರೇಷೆಗಳ ಬಗ್ಗೆ ಈಗಾಗಲೇ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಚರ್ಚೆ ನಡೆದಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಮತ್ತು ಅವರ ಪುತ್ರ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ಈ ಕಾರ್ಯಕ್ಕಾಗಿ ಈಗಾಗಲೇ ಕೋಟೇಶ್ವರ ಸಮೀಪದಲ್ಲಿ ಒಂದು ಎಕರೆ ಜಾಗವನ್ನು ಕಾದಿರಿಸಲಾಗಿದೆ. ಮೇ 14ರಿಂದ ರಥದ ಕೆಲಸ ಆರಂಭವಾಗಲಿದೆ. ಅಲ್ಲದೆ ಭದ್ರತ ವ್ಯವಸ್ಥೆ ಕಲ್ಪಿಸುವ ಕಾರ್ಯ ಆರಂಭಗೊಂಡಿದೆ.
ಪೇಜಾವರ ಶ್ರೀಗಳು ಟ್ರಸ್ಟಿ
ರಾಮಮಂದಿರ ನಿರ್ಮಾಣದಲ್ಲಿ ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಜವಾಬ್ದಾರಿ ಹೊಂದಿದೆ. ಟ್ರಸ್ಟ್ ಪ್ರತ್ಯೇಕ ಮಂದಿರ ನಿರ್ಮಾಣ ಸಮಿತಿಯನ್ನು ರಚಿಸಿ ಅದಕ್ಕೆ ನಿರ್ಮಾಣದ ಕೆಲಸವನ್ನು ವಹಿಸಿದೆ. 15 ಜನ ಟ್ರಸ್ಟಿಗಳಿದ್ದು, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಒಬ್ಬರಾಗಿದ್ದಾರೆ. ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳಿಗೆ ನಿರ್ದಿಷ್ಟ ಕೆಲಸ ನಿಗದಿಪಡಿಸಿಲ್ಲ. “ನಮಗೆ ದ. ಭಾರತದ ಜವಾಬ್ದಾರಿ ಎಂದೂ ಇಲ್ಲ. ನಾವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಿದ್ದೇವೆ. ಎಲ್ಲರೂ ಜತೆಗೂಡಿ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಪೇಜಾವರ ಸ್ವಾಮೀಜಿ ತಿಳಿಸಿದ್ದಾರೆ. ಇದುವರೆಗೆ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸ್ವಾಮೀಜಿ ಮಹಾರಾಷ್ಟ್ರ, ಆಂಧ್ರ, ತ.ನಾಡು, ಕೇರಳ, ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.