ಶೀರೂರು ಮಠಾಧೀಶರಾಗಿ ಶ್ರೀವೇದವರ್ಧನ ತೀರ್ಥರ ನೇಮಕ
Team Udayavani, May 14, 2021, 10:23 PM IST
ಉಡುಪಿ: ಅಕ್ಷಯತೃತೀಯಾ ಶುಭದಿನದಂದು ಶೀರೂರು ಮಠದ ಉತ್ತರಾಧಿಕಾರಿಗಳಾಗಿ ಶ್ರೀವೇದವರ್ಧನತೀರ್ಥ ಶ್ರೀಪಾದರನ್ನು ದ್ವಂದ್ವ ಮಠವಾದ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ ನೇಮಿಸಿದರು.
ಗುರುವಾರ ಅನಿರುದ್ಧ ಸರಳತ್ತಾಯರಿಗೆ ಸನ್ಯಾಸಾಶ್ರಮವನ್ನು ನೀಡಿದ್ದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಶುಕ್ರವಾರ ಶ್ರೀವೇದವರ್ಧನತೀರ್ಥರೆಂದು ನಾಮಕರಣ ಮಾಡಿ ಶೀರೂರು ಮಠದ ಉತ್ತರಾಧಿಕಾರಿಗಳಾಗಿ ಪಟ್ಟಾಭಿಷೇಕ ಮಾಡಿದರು. ಪಟ್ಟಾಭಿಷೇಕದ ಅಂಗವಾಗಿ ಶೀರೂರು ಮಠದ ದೇವರನ್ನು ಹರಿವಾಣದಲ್ಲಿಟ್ಟು ಹರಿವಾಣವನ್ನು ಶಿರದ ಮೇಲಿರಿಸಿ ಅಭಿಷೇಕ ಮಾಡಿದರು. ಇದೇ ಸಂದರ್ಭ ಪ್ರವಣ ಮಂತ್ರ ಮತ್ತಿತರ ಮಂತ್ರೋಪದೇಶ ನೀಡಿ ಹರಸಿದರು. ಪಟ್ಟಾಭಿಷೇಕದ ಸ್ಮರಣಾರ್ಥ ಉಭಯ ಶ್ರೀಗಳು ಎರಡು ಅಶ್ವತ್ಥದ ಸಸಿಗಳನ್ನು ನೆಟ್ಟರು.
ಸಂಜೆ ಶ್ರೀಕೃಷ್ಣಮಠಕ್ಕೆ ಆಗಮಿಸಿ ಅನಂತೇಶ್ವರ, ಚಂದ್ರೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನವನ್ನು ಮಾಡಿದರು. ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ದೀಕ್ಷೆ ನೀಡಿದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು, ನೂತನ ಯತಿ ಶ್ರೀವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ನೂತನ ಯತಿಗಳಿಂದ ಪರ್ಯಾಯ ಮಠಾಧೀಶರಿಗೆ, ಪರ್ಯಾಯ ಮಠಾಧೀಶರು ನೂತನ ಯತಿಗಳಿಗೆ ಗೌರವಾರ್ಪಿಸಿದರು.
ನಮ್ಮ ಪಾಲಿನ ಕರ್ಮ ಅಗತ್ಯ
ಮಧ್ವಾಚಾರ್ಯರು ಜಗತ್ತಿಗೆ ನೀಡಿದ ಸಂದೇಶವೆಂದರೆ ನಮ್ಮ ಪಾಲಿನ ಕರ್ಮವನ್ನು ಮಾಡಬೇಕು, ಅದರಿಂದ ಬಂದ ಫಲವನ್ನು ಅನುಭವಿಸಬೇಕು. ಭಗವಂತ ಶ್ರೀಹರಿ ಗುರುವೂ ಹೌದು, ತಂದೆ ತಾಯಿಗಳ ಸ್ಥಾನದಲ್ಲಿದ್ದು ಜಗತ್ತನ್ನು ಸಂರಕ್ಷಿಸುತ್ತಿದ್ದಾನೆ. ಇಡೀ ವಿಶ್ವಕ್ಕೇ ಶ್ರೀಕೃಷ್ಣಮುಖ್ಯಪ್ರಾಣ ದೇವರು ಅನುಗ್ರಹಿಸಬೇಕು ಎಂದು ಶ್ರೀವೇದವರ್ಧನತೀರ್ಥರು ಪ್ರಾರ್ಥಿಸಿದರು.
ಹೆಸರಿನ ಮರ್ಮ
ಸನಾತನ ಧರ್ಮ, ಶಾಸ್ತ್ರ ಪುರಾಣಗಳಿಗೆ ವೇದಗಳೇ ಆಧಾರ. ನೂತನ ಯತಿಗಳಿಗೆ ಶ್ರೀವೇದವರ್ಧನತೀರ್ಥರೆಂದು ಹೆಸರು ಇರಿಸಿದ್ದೇವೆ. ಅದರಂತೆ ಯತಿಗಳು ಧರ್ಮಸಂರಕ್ಷಣೆಯ ಕೆಲಸವನ್ನು ಸದಾ ಕಾಲ ಮಾಡುವಂತಾಗಬೇಕು. ನಮ್ಮ ಪರ್ಯಾಯದ ಅವಧಿಯಲ್ಲಿ ಡಾ|ಉದಯಕುಮಾರ ಸರಳತ್ತಾಯರು ಎರಡು ವರ್ಷ ಪುರಾಣ ಪ್ರವಚನ ಮಾಡಿದರು. ಈಗ ಅದರ ಫಲವೋ ಎಂಬಂತೆ ಅವರ ಮಗನನ್ನು ನಾವು ಕೇಳಿದಾಗ ಶೀರೂರು ಮಠಕ್ಕೆ ನೀಡಲು ಒಪ್ಪಿದರು ಎಂದು ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದರು.
ವಿಗ್ರಹದ ಆಗಮನ-ನಿರ್ಗಮನ
ಕರ್ಮ ತ್ಯಾಗ ಮಾಡಲಾಗದು, ಕೇವಲ ಕರ್ಮದ ಫಲ ತ್ಯಾಗ ಮಾಡಬೇಕು. ಸಂಪತ್ತು, ದಾನ, ಪೂಜೆ ಇತ್ಯಾದಿ ಕರ್ಮಗಳನ್ನೂ ನಾನು ಮಾಡುವುದಲ್ಲ, ಭಗವಂತನೇ ಮಾಡಿಸಿಕೊಳ್ಳುತ್ತಿದ್ದಾನೆ ಎಂಬ ಅನುಸಂಧಾನ ಅಗತ್ಯ. ಪಲಿಮಾರು ಮಠಾಧೀಶರ ಪರ್ಯಾಯ ಸಂದರ್ಭ ಶೀರೂರು ಸ್ವಾಮೀಜಿಯವರಿಗೆ ಆರೋಗ್ಯ ಸರಿ ಇಲ್ಲ, ತುರ್ತಾಗಿ ದೇವರ ಪೂಜೆ ಮಾಡಬೇಕೆಂಬ ಕರೆ ಬಂತು. ನಾವು ಹೋಗಿ ಪೂಜೆ ಸಲ್ಲಿಸಿ, ದೇವರನ್ನು ಶ್ರೀಕೃಷ್ಣಮಠದಲ್ಲಿರಿಸಿದೆವು. ಈಗ ಶೀರೂರು ಮಠಾಧೀಶರು ಆಗಮಿಸಿದ್ದಾರೆ. ದೇವರನ್ನು ಮತ್ತೆ ಹಿಂದಿರುಗಿಸುತ್ತಿದ್ದೇವೆ ಎಂದು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಶೀರೂರು ಮಠವನ್ನು ಪ್ರವೇಶಿಸಿದ ಬಳಿಕ ಇತರ ಮಠಗಳಿಗೂ ತೆರಳಿ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಿದರು. ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್ ವಶ
Manipal: ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ; ಪ್ರಕರಣ ದಾಖಲು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.