ಶರದ್ ಪವಾರ್ ನಿವಾಸದೆದುರು ಪ್ರತಿಭಟನೆ : ಸುಪ್ರಿಯಾ ಸುಳೆ ಭದ್ರತೆ ಹೆಚ್ಚಳ
ಪ್ರತಿಭಟನೆ ಒಂದು ಪಿತೂರಿಯಾಗಿದೆ : ಸಂಜಯ್ ರಾವತ್
Team Udayavani, Apr 9, 2022, 4:27 PM IST
ಮುಂಬಯಿ : ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ನಿವಾಸದ ಮುಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದ ನಂತರ ಮಹಾರಾಷ್ಟ್ರ ಗೃಹ ಇಲಾಖೆ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರ ಭದ್ರತೆಯನ್ನು ಹೆಚ್ಚಿಸಿದೆ.
ಇದೆ ವೇಳೆ ಪ್ರತಿಭಟನೆ ಒಂದು ಪಿತೂರಿಯಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಶೀಘ್ರವೇ ಬಹಿರಂಗವಾಗಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಶರದ್ ಪವಾರ್ ಗೂ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರಕ್ಕೂ ಯಾವುದೇ ಸಂಬಂಧವಿಲ್ಲ. ಯಾರೋ ಮಹಾರಾಷ್ಟ್ರದ ರಾಜಕೀಯ ಮತ್ತು ಸಾಮಾಜಿಕ ವಾತಾವರಣವನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯಕರ್ತರು ಶುಕ್ರವಾರ ಪವಾರ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿ ಕಲ್ಲುಗಳು, ಚಪ್ಪಲಿಗಳನ್ನು ಕಾಂಪೌಂಡ್ ನ ಒಳಗೆ ತೂರಿದ್ದರು. ಪ್ರತಿಭಟನೆ ನಡೆಸಿದ ನೂರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.