Stock Market: ಕೇಂದ್ರ ಬಜೆಟ್ ಮಂಡನೆ- ಷೇರುಪೇಟೆ ಸೂಚ್ಯಂಕ, ನಿಫ್ಟಿ ಭಾರೀ ಕುಸಿತ
ಬಂಡವಾಳ ಲಾಭದ (Capital Gains Taxes)ಮೇಲಿನ ತೆರಿಗೆ ಘೋಷಣೆ
Team Udayavani, Jul 23, 2024, 1:17 PM IST
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23) ಲೋಕಸಭೆಯಲ್ಲಿ ಮಂಡಿಸಿದ್ದ 2024-2025ನೇ ಸಾಲಿನ ಮುಂಗಡ ಪತ್ರದಲ್ಲಿ ಬಂಡವಾಳ ಲಾಭದ (Capital Gains Taxes)ಮೇಲಿನ ತೆರಿಗೆಗಳನ್ನು ಘೋಷಿಸಿದ ಬೆನ್ನಲ್ಲೇ ಬಾಂಬೆ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕಗಳ ಕುಸಿತ ಕಂಡಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 510 ಅಂಕಗಳಷ್ಟು ಕುಸಿತ ಕಂಡಿದ್ದು, 80,056.53 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಎನ್ ಎಸ್ ಇ ನಿಫ್ಟಿ ಕೂಡಾ ಇಳಿಕೆ ಕಂಡಿದೆ.
ಇದಕ್ಕೂ ಮೊದಲು ಷೇರುಪೇಟೆ ಸಂವೇದಿ ಸೂಚ್ಯಂಕ 1,000ಕ್ಕೂ ಅಧಿಕ ಅಂಕಗಳಷ್ಟು ಭಾರೀ ಕುಸಿತ ಕಂಡಿದ್ದು, 80,000 ಅಂಕಗಳಿಗೆ ಇಳಿಕೆಯಾಗಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 300 ಅಂಕಗಳಷ್ಟು ಇಳಿಕೆಯಾಗಿ 24,200 ಅಂಕಗಳಿಗೆ ಕುಸಿದಿತ್ತು.
ಸೋಮವಾರ ಷೇರುಪೇಟೆ ಸಂವೇದಿ ಸೂಚ್ಯಂಕ 80,502.08 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ 23,537.85 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.
ಷೇರುಪೇಟೆ ಸೂಚ್ಯಂಕ, ನಿಫ್ಟಿ ಇಳಿಕೆಯ ನಡುವೆಯೂ ಟೈಟಾನ್, ಐಟಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಪವರ್ ಗ್ರಿಡ್, ಬಜಾಜ್ ಫೈನಾನ್ಸ್, ಲಾರ್ಸನ್ ಆಂಡ್ ಟರ್ಬೋ ಷೇರುಗಳು ನಷ್ಟ ಕಂಡಿವೆ.
ಇದನ್ನೂ ಓದಿ:Union Budget 2024: ಕೇಂದ್ರ ಬಜೆಟ್ ನಲ್ಲಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?
ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ದೀರ್ಘಾವಧಿ ಬಂಡವಾಳದ ಮೇಲಿನ ತೆರಿಗೆ ಮಿತಿಯನ್ನು ಶೇ.10ರಿಂದ 12.5ಕ್ಕೆ ಹೆಚ್ಚಳ ಮಾಡಿದ್ದು, ಅಲ್ಪಾವಧಿ ಬಂಡವಾಳದ ಮೇಲಿನ ತೆರಿಗೆಯನ್ನು ಶೇ.15ರಿಂದ 20ಕ್ಕೆ ಏರಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.