![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 14, 2021, 11:41 AM IST
ಚಿಕ್ಕಮಗಳೂರು: ಕೋಲಾರದಲ್ಲಿ ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ಘಟನೆ ವಿರುದ್ದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಸ್ಲಿಂ ಗುಂಡಾಗಳು, ಮುಸ್ಲಿಂ ಕಿಡಿಗೇಡಿಗಳಿಂದ ಕೃತ್ಯ ನಡೆದಿದೆ. ಭಜನೆ ಮಾಡಿಕೊಂಡು ಬರುವಾಗ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮುಸ್ಲಿಂ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಇನ್ನು ಮೇಲೆ ದಾದಾಗಿರಿ, ತಾಲಿಬಾನೀಕರಣ ಇಲ್ಲಿ ನಡೆಯುವುದಿಲ್ಲ. ಹಲ್ಲೆ ಪ್ರವೃತ್ತಿ ನಿಲ್ಲಿಸದಿದ್ದರೆ, ಒದೆಯುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ:ಮೂಡಿಗೆರೆ: ಗುಂಪುಗಳ ನಡುವೆ ಮಾರಾಮಾರಿ: ಓರ್ವನ ಬಂಧನ
ಡಿಸಿ ಅವರಿಗೆ ಹೇಳುತ್ತೇನೆ ಕೂಡಲೇ ಹದ್ದು ಬಸ್ತಿನಲ್ಲಿಡಬೇಕು. ಅಭಿಯಾನಕ್ಕೆ ಸೂಕ್ಷ್ಮ ಪ್ರದೇಶದಲ್ಲಿ ರಕ್ಷಣೆ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು, ಮುಖ್ಯಮಂತ್ರಿ, ಗೃಹಸಚಿವರಿಗೆ ಆಗ್ರಹಿಸುತ್ತೇನೆ ಎಂದರು.
ಬಂಧಿಸದಿದ್ದರೆ, ನಾನೇ ನಾಳೆ ಕೋಲಾರಕ್ಕೆ ಹೋಗುವುದಕ್ಕೆ ಮುಂದಾಗಿದ್ದೇನೆ ಎಂದರು.
You seem to have an Ad Blocker on.
To continue reading, please turn it off or whitelist Udayavani.