ಲಕ್ಷಾಂತರ ರೂ. ವೆಚ್ಚ: ಜಾತ್ರೆಗಷ್ಟೇ ಎಲ್ಲದರ ಬೆಳಕು! ಸಾಲಿಗ್ರಾಮ ಪ.ಪಂಚಾಯತ್‌ ದಾರಿದೀಪದ ಕಥೆ

Team Udayavani, Apr 27, 2021, 1:58 AM IST

ಲಕ್ಷಾಂತರ ರೂ. ವೆಚ್ಚ: ಜಾತ್ರೆಗಷ್ಟೇ ಎಲ್ಲದರ ಬೆಳಕು! ಸಾಲಿಗ್ರಾಮ ಪ.ಪಂಚಾಯತ್‌ ದಾರಿದೀಪದ ಕಥೆ

ಸಾಲಿಗ್ರಾಮ ಪ.ಪಂ. ದಾರಿದೀಪ ನಿರ್ವಹಣೆಗಾಗಿ ವರ್ಷಕ್ಕೆ ಸುಮಾರು 14 ಲಕ್ಷ ರೂ. ವೆಚ್ಚ ಮಾಡುತ್ತದೆ. ಆದರೂ ಎಲ್ಲ ದೀಪ ಸರಿಯಾಗಿ ಉರಿಯುವುದಿಲ್ಲ. ಹಾಳಾದ ದೀಪಗಳು ದುರಸ್ತಿಗೊಳ್ಳಲು ಹಲವು ತಿಂಗಳು ಬೇಕು. ಈ ಬಗ್ಗೆ ದೂರು ಕೇಳಿಬಂದರೂ ಸಾಮಾನ್ಯ ಸಭೆಯ ಚರ್ಚೆಗಷ್ಟೇ ಸೀಮಿತ. ಆಮೇಲೆ ವ್ಯವಸ್ಥೆ ಸರಿಪಡಿಸಬೇಕಾದ ಅಧಿಕಾರಿಗಳು ತಣ್ಣಗಿರುತ್ತಾರೆ, ಜನರು ಕತ್ತಲೆಯಲ್ಲಿರುತ್ತಾರೆ. ಈ ಬಾರಿಯಾದರೂ ವ್ಯವಸ್ಥೆ ಸರಿಯಾಗುತ್ತದೋ ಕಾದು ನೋಡಬೇಕು.

ಕೋಟ: ಬೀದಿ ದೀಪದ ನಿರ್ವಹಣೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ ನ ವೈಫ‌ಲ್ಯಗಳಲ್ಲಿ ಒಂದು. ಈ ಬಗ್ಗೆ ಹಲವು ಬಾರಿ ದೂರುಗಳು ಕೇಳಿಬಂದಿವೆ. ಸದಸ್ಯರೂ ಹಲವು ಸಾಮಾನ್ಯಸಭೆಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ವ್ಯವಸ್ಥೆ ಇದುವರೆಗೂ ಸುಧಾರಣೆಗೊಂಡಿಲ್ಲ.

ಇದೇ ಕಾರಣಕ್ಕೆ ನಿರ್ವಹಣಾ ಗುತ್ತಿಗೆದಾರರನ್ನು ಮತ್ತೆ-ಮತ್ತೆ ಬದಲಾಯಿಸಲಾಗುತ್ತದೆ. ಇದೀಗ ಎಪ್ರಿಲ್‌ 1ರಿಂದ ಮತ್ತೆ ಗುತ್ತಿಗೆದಾರರನ್ನು ಬದಲಾಯಿಸಿದ್ದು, ಇವರ ಕಾರ್ಯ ನಿರ್ವ ಹಣೆಯನ್ನು ಕಾದು ನೋಡಬೇಕಿದೆ.

ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಒಟ್ಟು 1,308 ದಾರಿದೀಪಗಳಿವೆ. ಪ್ರತಿ ತಿಂಗಳು 55 ಸಾವಿರ ರೂ.ಗಳಂತೆ ಒಟ್ಟು 6.60 ಲಕ್ಷ ರೂ. ಗಳನ್ನು ನಿರ್ವಹಣೆಗಾಗಿ ಗುತ್ತಿಗೆದಾರರಿಗೆ ಪಾವತಿಸಲಾಗುತ್ತದೆ. ಒಂದು ವರ್ಷ ಅಥವಾ ಆರು ತಿಂಗಳ ಅವಧಿಗೆ ನಿರ್ವಹಣೆ ನೀಡಲಾಗುತ್ತದೆ.

ಪ್ರತಿ ತಿಂಗಳು 70 ಸಾವಿರ ರೂಗಳಂತೆ 8.40 ಲಕ್ಷ ರೂ. ಗಳನ್ನು ವಿದ್ಯುತ್‌ ಬಿಲ್‌ಗಾಗಿ ವ್ಯಯಿಸಲಾಗುತ್ತಿದ್ದು, ವಾರ್ಷಿಕವಾಗಿ ಸುಮಾರು 15 ಲಕ್ಷ ರೂ. ಗಳನ್ನು ನಿರ್ವಹಣೆಗಾಗಿ ಖರ್ಚು ಮಾಡಲಾಗುತ್ತದೆ. ಹಾಳಾದ ದೀಪಗಳ ದುರಸ್ತಿ ಮತ್ತು ಬೀದಿದೀಪಗಳನ್ನು ಪ್ರತಿ ದಿನ ಆನ್‌-ಆಫ್‌ ಮಾಡುವ ಹೊಣೆಗಾರಿಕೆ ಗುತ್ತಿಗೆದಾರರದ್ದು.

ಬಿಲ್‌ ತಡೆ ಹಿಡಿಯಿರಿ
ಗುತ್ತಿಗೆದಾರರು ಸರಿಯಾಗಿ ನಿರ್ವಹಿಸದಿದ್ದರೆ ಬಿಲ್‌ ತಡೆ ಹಿಡಿಯಬೇಕು. ಅದರೊಂದಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲೇ ಸರಿಯಾದ ಷರತ್ತುಗಳನ್ನು ವಿಧಿಸಬೇಕು ಎನ್ನುವ ಸಲಹೆಯೂ ಸದಸ್ಯರಿಂದ ಹಿಂದೆ ವ್ಯಕ್ತವಾಗಿದೆ. ಆದರೂ ಅಧಿಕಾರಿಗಳು ಅದಕ್ಕೆ ಮನಸ್ಸು ಮಾಡದಿರುವುದು ನಿಗೂಢವಾಗಿದೆ.

ಪ್ರತಿ ಬಾರಿ ದೂರು
ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ಎಂಬ ಆರೋಪ ಇದೆ. ಹೀಗಾಗಿಯೇ ದಾರಿ ದೀಪಗಳು ಆಗಾಗ್ಗೆ ಹಾಳಾಗುತ್ತವೆ. ಕೂಡಲೇ ಹಾಳಾದ ಟ್ಯೂಬ್‌ಗಳನ್ನು ಬದಲಾಯಿಸುವುದಿಲ್ಲ. ಕೆಲವೊಮ್ಮೆ ನಿರ್ವಹಣೆಗೆ ತಿಂಗಳುಗಟ್ಟಲೆ ತೆಗೆದುಕೊಳ್ಳಲಾಗುತ್ತದೆ ಎನ್ನುವ ದೂರು ಇದೆ. ಈ ಬಗ್ಗೆ ಸಾಮಾನ್ಯ ಸಭೆಗಳಲ್ಲೂ ಚರ್ಚೆ ನಡೆದಿದೆ. ಆದರೂ ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ಮಾಡಿಸುವಲ್ಲಿ ಅಧಿಕಾರಿಗಳು ವಿಫ‌ಲವಾಗಿದ್ದಾರೆ ಎಂಬುದು ಕೇಳಿಬರುತ್ತಿರುವ ಅಭಿಪ್ರಾಯ.

ಟಾಪ್ ನ್ಯೂಸ್

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts

Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರುಕಲಾದ ಬಸ್

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

20-

Burhan Wani; ಬುರ್ಹಾನ್‌ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.