ವಿಷಯ-ವಿಶೇಷ: ಇಲ್ಲಿ ಇಂಗ್ಲಿಷ್ ಮಾತನಾಡಿದರೆ ದಂಡ
Team Udayavani, Apr 16, 2023, 7:13 AM IST
ಮಾನವ ಸಂಬಂಧಗಳ ಬೆಳವಣಿ ಗೆಗೆ ಸಂವಹನವೇ ಪ್ರಮುಖ. ಸಂವಹನದಲ್ಲಿ ಮುಖ್ಯ ಪಾತ್ರ ವಹಿಸುವುದು ಭಾಷೆ. ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಪ್ರತೀ ದೇಶಕ್ಕೊಂದು ಅಧಿಕೃತ ಭಾಷೆಯಿದೆ. ಆ ದೇಶದ ಸಂಸ್ಕೃತಿ, ಸೊಗಡನ್ನು ಭಾಷೆ ಹೊಂದಿರುತ್ತದೆ. ಇದು ಆಯಾ ದೇಶದ ಭಾಷೆಯ ವಿಚಾರವಾದರೆ, ಪ್ರಪಂಚದಾದ್ಯಂತ ಇಂಗ್ಲಿಷ್ ಸಾಮಾನ್ಯ ಸಂವಹನ ಭಾಷೆಯಾಗಿ ಹರಡಿಕೊಂಡಿದೆ. ಬೇರೆ ದೇಶಗಳಿಗೆ ಹೋದಾಗ ಆ ದೇಶದ ಭಾಷೆಗಳ ಅರಿವಿಲ್ಲದಿದ್ದರೂ ಇಂಗ್ಲಿಷ್ ವ್ಯಾವಹಾರಿಕ ಭಾಷೆಯಾಗಿ ಬಳಸಲ್ಪಡು ತ್ತದೆ. ಆದರೆ ಕೆಲವೆಡೆ ನೀವು ಇಂಗ್ಲಿಷ್ ಮಾತನಾಡುವಂತಿಲ್ಲ…!
ಹೌದು, ನೀವು ಇಟಲಿ ದೇಶದ ಪ್ರಜೆಯಾಗಿದ್ದರೆ ಆ ದೇಶದ ಭಾಷೆಯನ್ನೇ ಬಳಸಬೇಕೆ ಹೊರತು, ಇಂಗ್ಲಿಷ್ ಮಾತನಾಡಬಾರದು. ಯಾಕೆ ಎಂದರೆ ಇಟಲಿ ದೇಶ ಇಂಗ್ಲಿಷ್ ಭಾಷೆಯನ್ನು ನಿರ್ಬಂಧಿ ಸಿದೆ. ಇಟಲಿಯ ಸರಕಾರ ಅಲ್ಲಿನ ಆಡಳಿತ ಹಾಗೂ ಜನಜೀವನದಲ್ಲಿ ದೇಶದ ಭಾಷೆಯನ್ನೇ ಮಾತನಾಡಬೇಕು ಹೊರತು ಇಂಗ್ಲಿಷ್ ಭಾಷೆಯನ್ನು ಬಳಸಬಾರದು ಎಂಬ ನೀತಿಯನ್ನು ಜಾರಿಗೆ ತಂದಿದೆ.
ಇಂಗ್ಲಿಷ್ ಬಳಸಿದರೆ ದಂಡ
ಇಂಗ್ಲಿಷ್ ಭಾಷೆ ಬಳಕೆಯ ಮೇಲೆ ಇಟಲಿ ಸರಕಾರ ದಂಡವನ್ನು ಹೇರಲು ನಿರ್ಧರಿಸಿದೆ. ಒಂದು ವೇಳೆ ಯಾರಾದರೂ ತಿಳಿದೋ ತಿಳಿಯ ದೆಯೋ ಇಂಗ್ಲಿಷ್ ಪದಬಳಕೆ ಮಾಡಿದರೆ 82 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ. ಆಡಳಿತದಲ್ಲಿರು ವವರು ಇಟಲಿ ಭಾಷೆಯನ್ನು ಓದಲು, ಬರೆ ಯಲು ಕಡ್ಡಾಯವಾಗಿ ತಿಳಿದಿರಬೇಕು. ಜತೆಗೆ ಇಲಾಖೆ, ಖಾತೆಗಳ ಹೆಸರಿನಲ್ಲೂ ಇಟಾಲಿಯನ್ ಭಾಷೆಯನ್ನೇ ಬಳಸಬೇಕು ಎಂದು ನೀತಿಯಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ.
ಇತರ ದೇಶಗಳಲ್ಲೂ ಇದೆ ಇಂಗ್ಲಿಷ್‌ಗೆ ನಿರ್ಬಂಧ
ಕೇವಲ ಇಟಲಿ ಮಾತ್ರವಲ್ಲ, 2018ರಲ್ಲಿ ಇರಾನ್ ತನ್ನ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ನಿಷೇಧಿಸಿದೆ. ಚಿಕ್ಕ ವಯಸ್ಸಿನಲ್ಲೇ ಪಾಶ್ಚಾತ್ಯ ಸಂಸ್ಕೃತಿಗೆ ಮಕ್ಕಳು ಮರುಳಾಗುತ್ತಾರೆ ಎಂಬ ಭಯದಿಂದ ಇರಾನ್ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಭಾಷೆ ಯನ್ನು ಕಲಿಸುವುದಿಲ್ಲ. ಇರಾನ್ ಜತೆಗೆ ಚೀನವೂ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಕಲಿಸುವುದನ್ನು ವಿರೋಧಿಸಿದೆ. ಅದಲ್ಲದೇ ಚೀನ ವಿದೇಶಿ ಪಠ್ಯ ಪುಸ್ತಕಗಳನ್ನು ದೇಶದಲ್ಲಿ ನಿಷೇಧಿಸಿದೆ. ದೇಶದ ಸಂಸ್ಕೃತಿಯನ್ನು ಕಲಿಯಲು ಇಂಗ್ಲಿಷ್ ಕಲಿಕೆ ಅಡ್ಡಿ ಯಾಗುತ್ತದೆ ಎನ್ನುವ ಕಾರಣದಿಂದ ಚೀನ ಈ ನಿರ್ಧಾರವನ್ನು ಕೈಗೊಂಡಿತ್ತು. ಮಕ್ಕಳನ್ನು ಪಾಶ್ಚಾತ್ಯ ಸಂಸ್ಕೃತಿಯಿಂದ ದೂರವಿರಿಸುವ ಮೂಲಕ ಅವರಲ್ಲಿ ದೇಶೀಯತೆಯ ಭಾವವನ್ನು ಉದ್ದೀಪನಗೊಳಿಸುವ ಇರಾದೆ ಇಲ್ಲಿನ ಸರಕಾರಗಳದ್ದಾಗಿದೆ.
ಯಾಕೆ?
ಇಂಗ್ಲಿಷ್ ಜತೆಗೆ ಇತರ ವಿದೇಶಿ ಭಾಷೆಗಳ ಮೇಲೂ ಇಟಲಿ ನಿಷೇಧ ಹೇರಿದೆ. ಆದರೆ ಇಂಗ್ಲಿಷ್ ಭಾಷೆಯ ಬಳಕೆಯೂ ಇಟಲಿ ದೇಶದ ಭಾಷೆಯ ಬಳಕೆಯ ಮೇಲೆ ಅತಿಯಾದ ಪರಿಣಾಮ ಬೀರುತ್ತಿರುವುದರಿಂದ ಅದನ್ನೇ ಗುರಿಯಾಗಿರಿಸಿಕೊಂಡು ಈ ನೀತಿಯನ್ನು ಜಾರಿಗೊಳಿಸಿದೆ. ಯುರೋಪ್ ಒಕ್ಕೂಟದಿಂದ ಯುಕೆ ಹೊರಹೋದ ಅನಂತರ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಆಂಗ್ಲೋಮೇನಿಯಾದ ಪ್ರಭಾವವನ್ನು ಕಡಿಮೆ ಮಾಡುವುದು ಇಟಲಿಯ ಪ್ರಯತ್ನ. ಆಂಗ್ಲೋಮೇನಿಯಾ ಎಂದರೆ ಆಂಗ್ಲ ಭಾಷೆ ಮತ್ತವರ ಜೀವನ ಕ್ರಮವನ್ನು ಅತಿಯಾಗಿ ಅಳವಡಿಸಿಕೊಳ್ಳುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.