ಸೋಲಿನ ಸರಣಿಯಲ್ಲಿ ಚೆನ್ನೈ : ಹೈದರಾಬಾದ್ ಪರ ಮಿಂಚಿದ ಅಭಿಷೇಕ್ ಶರ್ಮಾ
Team Udayavani, Apr 9, 2022, 7:45 PM IST
ಮುಂಬಯಿ: ಐಪಿಎಲ್ ನ ಸೆಂಟಿಮೆಂಟಲ್ ಫೇವರಿಟ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು ತನ್ನ ನಾಲ್ಕನೇ ಸತತ ಸೋಲಿಗೆ ಸಿಲುಕಿತು. ಯುವ ಆಟಗಾರ ಅಭಿಷೇಕ್ ಶರ್ಮಾ ಅವರ 50 ಎಸೆತಗಳಲ್ಲಿ 75 ರನ್ ಗಳ ಭರ್ಜರಿ ಆಟದೊಂದಿದೆ ಆವೃತ್ತಿಯ ಪಂದ್ಯಾವಳಿಯಲ್ಲಿ ಹೈದರಾಬಾದ್ ಚೊಚ್ಚಲ ಎಂಟು ವಿಕೆಟ್‌ಗಳ ಜಯ ಸಾಧಿಸಿತು.
21 ವರ್ಷದ ಶರ್ಮಾ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ ಕೂಡಿದ ಬಿರುಸಿನ ಮೊದಲ ಐಪಿಎಲ್ ಅರ್ಧಶತಕದೊಂದಿಗೆ ಸಂಭ್ರಮಿಸಿ ಭರವಸೆ ಮೂಡಿಸಿದರು. ಸನ್‌ರೈಸರ್ಸ್ 155 ರನ್ ಗುರಿಯನ್ನು 14 ಎಸೆತಗಳು ಬಾಕಿ ಇರುವಂತೆಯೇ ಸುಲಭವಾಗಿ ಬೆನ್ನಟ್ಟಲು ಪ್ರಮುಖ ಪಾತ್ರ ವಹಿಸಿದರು.
16 ಅಂಕಗಳಗಳ ಮ್ಯಾಜಿಕ್ ಫಿಗರ್ ಅನ್ನು ತಲುಪಲು ಸಿಎಸ್ ಕೆ ಇನ್ನುಳಿದ 10 ಪಂದ್ಯಗಳಲ್ಲಿ ಕನಿಷ್ಠ ಎಂಟನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಹರಾಜಿನಲ್ಲಿ ಸನ್‌ರೈಸರ್ಸ್‌ನಿಂದ 6.5 ಕೋಟಿ ರೂ.ಗೆ ಖರೀದಿಸಲ್ಪಟ್ಟ ಪಂಜಾಬ್‌ನ ಎಡಗೈ ಆಟಗಾರ ಅಭಿಷೇಕ್ ಶರ್ಮಾ, 2018 ರ ಅಂಡರ್ -19 ವಿಶ್ವಕಪ್ ಪಂದ್ಯಾವಳಿಗೆ ಪೃಥ್ವಿ ಶಾ ಅವರನ್ನು ನಾಯಕನಾಗಿ ಬದಲಿಸುವ ಮೊದಲು, 2016 ರಲ್ಲಿ ಅಂಡರ್ -19 ಏಷ್ಯಾ ಕಪ್‌ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.
ಇದು ಈ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಮೊದಲ ಜಯವಾಗಿದ್ದು, ತಮ್ಮ ಹಿಂದಿನ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿತ್ತು.
ಸ್ಕೋರ್‌ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್
ರಾಬಿನ್ ಉತ್ತಪ್ಪ ಸಿ ಮಾರ್ಕ್‌ರಮ್ ಬಿ ವಾಷಿಂಗ್ಟನ್ 15
ಋತುರಾಜ್ ಗಾಯಕ್ವಾಡ್ ಬಿ ನಟರಾಜನ್ 16
ಮೊಯಿನ್ ಅಲಿ ಸಿ ತ್ರಿಪಾಠಿ ಬಿ ಮಾರ್ಕ್‌ರಮ್ 48
ಅಂಬಾಟಿ ರಾಯುಡು ಸಿ ಮಾರ್ಕ್‌ರಮ್ ಬಿ ವಾಷಿಂಗ್ಟನ್ 27
ಶಿವಂ ದುಬೆ ಸಿ ಮಲಿಕ್ ಬಿ ನಟರಾಜನ್ 3
ರವೀಂದ್ರ ಜಡೇಜ ಸಿ ವಿಲಿಯಮ್ಸನ್ ಬಿ ಭುವನೇಶ್ವರ್ 23
ಎಂ.ಎಸ್. ಧೋನಿ ಸಿ ಮಲಿಕ್ ಬಿ ಜಾನ್ಸೆನ್ 3
ಡ್ವೇನ್ ಬ್ರಾವೊ ಔಟಾಗದೆ 8
ಕ್ರಿಸ್ ಜೋರ್ಡನ್ ಔಟಾಗದೆ 6
ಇತರ 5
ಒಟ್ಟು (7 ವಿಕೆಟಿಗೆ) 154
ವಿಕೆಟ್ ಪತನ: 1-25, 2-36, 3-98, 4-108, 5-110, 6-122, 7-147.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-36-1
ಮಾರ್ಕೊ ಜಾನ್ಸೆನ್ 4-0-30-1
ವಾಷಿಂಗ್ಟನ್ ಸುಂದರ್ 4-0-21-2
ಟಿ. ನಟರಾಜನ್ 4-0-30-2
ಉಮ್ರಾನ್ ಮಲಿಕ್ 3-0-29-0
ಐಡನ್ ಮಾರ್ಕ್‌ರಮ್ 1-0-6-1
ಸನ್‌ರೈಸರ್ ಹೈದರಾಬಾದ್
ಅಭಿಷೇಕ್ ಶರ್ಮ ಸಿ ಜೋರ್ಡನ್ ಬಿ ಬ್ರಾವೊ 75
ಕೇನ್ ವಿಲಿಯಮ್ಸನ್ ಸಿ ಅಲಿ ಬಿ ಚೌಧರಿ 32
ರಾಹುಲ್ ತ್ರಿಪಾಠಿ ಔಟಾಗದೆ 39
ನಿಕೋಲಸ್ ಪೂರಣ್ ಔಟಾಗದೆ 5
ಇತರ 4
ಒಟ್ಟು (17.4 ಓವರ್‌ಗಳಲ್ಲಿ 2 ವಿಕೆಟಿಗೆ) 155
ವಿಕೆಟ್ ಪತನ: 1-89, 2-145.
ಬೌಲಿಂಗ್:
ಮುಕೇಶ್ ಚೌಧರಿ 4-0-30-1
ಮಹೀಶ್ ತೀಕ್ಷಣ 4-0-31-0
ಕ್ರಿಸ್ ಜೋರ್ಡನ್ 3-0-34-0
ರವೀಂದ್ರ ಜಡೇಜ 3-0-21-0
ಮೊಯಿನ್ ಅಲಿ 1-0-10-0
ಡ್ವೇನ್ ಬ್ರಾವೊ 2.4-0-29-1
ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.