Supernova ಸೆರೆಹಿಡಿದ ಭಾರತೀಯ ವಿಜ್ಞಾನಿಗಳು
ಭೂಮಿಯಿಂದ 2.1 ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿ ನಕ್ಷತ್ರ ಸ್ಫೋಟ
Team Udayavani, May 26, 2023, 7:18 AM IST
ನವದೆಹಲಿ: ಭೂಮಿಯಿಂದ 2.1 ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ನಕ್ಷತ್ರಪುಂಜ ಒಂದರಲ್ಲಿ ನಕ್ಷತ್ರವೊಂದು ಸ್ಫೋಟಿಸಿ ಉಂಟಾದ “ಸೂಪರ್‌ನೊವಾ’ ಅನ್ನು ಭಾರತೀಯ ಖಗೋಳಶಾಸ್ತ್ರಜ್ಞರು ದೂರದರ್ಶಕದಲ್ಲಿ ಸೆರೆಹಿಡಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳಾದ ಫಹಾದ್ ಬಿನ್ ಅಬ್ದುಲ್ ಹಸಿಸ್, ಕಿರಣ್ ಮೋಹನ್ ಹಾಗೂ ಲಿಕ್ವಿಡ್ ಪ್ರೊಪಲನ್ ಸಿಸ್ಟಮ್ಸ್ ಸೆಂಟರ್(ಎಲ್‌ಪಿಎಸ್‌ಸಿ)ನ ವಿಶಾಖ್ ಶಶಿಧರನ್ ಅವರು “ಸೂಪರ್‌ನೊವಾ”ವನ್ನು ಸೆರೆಹಿಡಿದ್ದಾರೆ.
“ಎಂ101′ ಎಂಬ ನಕ್ಷತ್ರಪುಂಜದಲ್ಲಿ ಈ ಸೂಪರ್‌ನೊವಾ ಉಂಟಾಗಿದೆ. ಮೇ 19 ಮತ್ತು ಮೇ 22ರಂದು ದೂರದರ್ಶಕದಲ್ಲಿ ಎರಡು ಫೋಟೋಗಳು ಸೆರೆಯಾಗಿದೆ. ನಕ್ಷತ್ರವು ತನ್ನ ಜೀವನದ ಅಂತ್ಯವನ್ನು ತಲುಪಿದಾಗ ಮತ್ತು ಅದರ ಮಧ್ಯಭಾಗದಲ್ಲಿ ಪರಮಾಣು ಸಮ್ಮಿಲನಕ್ಕಾಗಿ ಇಂಧನ ಖಾಲಿಯಾದಾಗ ಈ ಸ್ಫೋಟ ಸಂಭವಿಸುತ್ತದೆ. ಈ ಸ್ಫೋಟವು ಇಡೀ ನಕ್ಷತ್ರಪುಂಜವನ್ನು ಆವರಿಸುತ್ತದೆ.
ಈ ಸ್ಫೋಟವನ್ನೇ “ಸೂಪರ್‌ನೊವಾ” ಎಂದು ಕರೆಯಲಾಗುತ್ತದೆ. ಈಗ ಸಂಭವಿಸಿದ ಸ್ಫೋಟ “ಟೈಪ್-2 ಸೂಪರ್‌ನೊವಾ’ ವಿಭಾಗಕ್ಕೆ ಬರಲಿದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ನಮ್ಮ ಸೂರ್ಯನಿಗಿಂತ ಎಂಟು ಪಟ್ಟು ಅಧಿಕ ಗಾತ್ರವಿರುವ ಈ ನಕ್ಷತ್ರವು ಇಂಧನ ಖಾಲಿಯಾಗಿ ಸ್ಫೋಟಗೊಂಡಿದ್ದು, ಜತೆಗೆ ತನ್ನದೇ ಗುರುತ್ವಾಕರ್ಷಣೆಯ ಅಡಿಯಲ್ಲಿ ಸಂಕುಚಿತಗೊಳ್ಳಲು ಪ್ರಾರಂಭಿಸಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.