ದಾಂಪತ್ಯ ಕಲಹ : 7 ವರ್ಷದ ಮಗನನ್ನು ಸಿಂಗಾಪುರಕ್ಕೆ ಕರೆದೊಯ್ಯಲು ತಾಯಿಗೆ ಸುಪ್ರೀಂ ಸಮ್ಮತಿ
ದಾಂಪತ್ಯ ಕಲಹದಿಂದ ಪ್ರತ್ಯೇಕ ವಾಸಿಸುತ್ತಿರುವ ತಾಯಿ
Team Udayavani, Nov 1, 2020, 11:33 PM IST
ನವದೆಹಲಿ: ಬೆಂಗಳೂರಿನಲ್ಲಿರುವ 7 ವರ್ಷದ ಮಗನನ್ನು ಸಿಂಗಾಪುರಕ್ಕೆ ಕರೆದೊಯ್ಯಲು, ದಾಂಪತ್ಯ ಕಲಹದಿಂದ ಪ್ರತ್ಯೇಕ ವಾಸಿಸುತ್ತಿರುವ ಮಹಿಳೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಇಂದು ಮಲ್ಹೋತ್ರಾ, ಇಂದಿರಾ ಬ್ಯಾನರ್ಜಿ ಒಳಗೊಂಡ ಪೀಠ ವಿಡಿಯೊ ಕಾನ್ಫರೆನ್ಸ್ ನಲ್ಲಿ ಈ ಆದೇಶ ನೀಡಿದೆ.
ಏನಿದು ವಿವಾದ?: 7 ವರ್ಷದ ಮಗನ ತಾಯಿ ಸಿಂಗಾಪುರದಲ್ಲಿ ಉದ್ಯೋಗದಲ್ಲಿದ್ದು, ಮಗ ಬೆಂಗಳೂರಿನ ಅಜ್ಜಿಮನೆಯಲ್ಲಿ ವಾಸವಾಗಿದ್ದಾನೆ. ಮಗನನ್ನು ತನ್ನೊಂದಿಗೆ ಕರೆದೊಯ್ಯಬೇಕೆಂಬ ತಾಯಿಯ ಹಂಬಲಕ್ಕೆ, ಐರ್ಲೆಂಡ್‌ನಲ್ಲಿ ಪ್ರತ್ಯೇಕ ವಾಸವಿರುವ ಪತಿ ಆಕ್ಷೇಪ ತೆಗೆದಿದ್ದರು. ಈ ವಿವಾದ ಸುಪ್ರೀಂನ ಮೆಟ್ಟಿಲೇರಿತ್ತು.
ಇದನ್ನೂ ಓದಿ:5 ವರ್ಷದ ಹಿಂದೆ ಕಳೆದುಕೊಂಡ ಅರಶಿನ-ಕುಂಕುಮವನ್ನು ಮತದ ರೂಪದಲ್ಲಿ ಭಿಕ್ಷೆಯಾಗಿ ನೀಡಿ: ಕುಸುಮಾ
ಬಗೆಹರಿದಿದ್ದು ಹೇಗೆ?: 7 ವರ್ಷದ ಮಗನ ಅಂತರಾಳಕ್ಕೆ ನ್ಯಾಯಪೀಠ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಿವಿಗೊಟ್ಟಿದೆ. ತಾನು ಅಪ್ಪನನ್ನು ಇಷ್ಟಪಡುತ್ತೇನಾದರೂ, ಅಮ್ಮನೊಂದಿಗೆ ಇರಲು ಬಯಸುತ್ತೇನೆ ಎಂದು ಬಾಲಕ ಅನಿಸಿಕೆ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಪೀಠ 142ನೇ ಅನುಚ್ಛೇದದಡಿ ಆದೇಶ ನೀಡಿದೆ.
ತಂದೆಗೆ ನಿಯಮಿತ ಭೇಟಿಗೂ ಕೋರ್ಟ್ ಸಮ್ಮತಿಸಿದೆ. ರಜಾ ದಿನಗಳಲ್ಲಿ ಭೇಟಿಯಾಗಲು, ಶನಿವಾರ- ಭಾನುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಮಗನೊಂದಿಗೆ 10 ನಿಮಿಷ ಮಾತಾಡಲು ತಂದೆಗೆ ಅವಕಾಶ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.