ಒಂದರಿಂದ ಹತ್ತನೇ ತರಗತಿವರೆಗೆ ಪಠ್ಯ ಕಡಿತ ಇನ್ನೂ ಅಂತಿಮವಾಗಿಲ್ಲ: ಸುರೇಶ್ ಕುಮಾರ್

Team Udayavani, Jul 29, 2020, 5:45 PM IST

ಒಂದರಿಂದ ಹತ್ತನೇ ತರಗತಿವರೆಗೆ ಪಠ್ಯ ಕಡಿತ ಇನ್ನೂ ಅಂತಿಮವಾಗಿಲ್ಲ: ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ವಿಷಯಗಳ ವೈಜ್ಞಾನಿಕ ಪಠ್ಯ ಕಡಿತಕ್ಕೆ ಮುಂದಾಗಿದ್ದು, ಇನ್ನೂ ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಹಿನ್ನೆಲೆಯಲ್ಲಿ ಪಠ್ಯಾಂಶಗಳನ್ನು ಅಂತಿಮಗೊಳಿಸಿಲ್ಲ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿದ್ದು, ಈ ಶೈಕ್ಷಣಿಕ ವರ್ಷ ಪ್ರಾರಂಭವಾಗದಿರುವುದರಿಂದ ನಮಗೆ ಎಷ್ಟು ದಿನಗಳು ದೊರೆಯುತ್ತವೆಂಬುದು ಇನ್ನೂ ಅಸ್ಪಷ್ಟವಾಗಿರುವುದರಿಂದ ಸಿಲೆಬಸ್‍ನ್ನು ಅಂತಿಮಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಲಭ್ಯ ಅವಧಿಯ ಆಧಾರದ ಮೇಲೆ ಮಾಡಲಾಗುವ ಪಠ್ಯ ಕಡಿತವು ವೈಜ್ಞಾನಿಕವಾಗಿರಲಿದ್ದು, ಯಾವುದೇ ಪಠ್ಯವನ್ನು ಅನಗತ್ಯವಾಗಿ ಕಡಿತ ಮಾಡುವುದಿಲ್ಲ. ಹಾಗಾಗಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ.

ಈ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗಬಹುದಾದ ಬೋಧನಾ ಅವಧಿ, ಸಮೂಹಮಾಧ್ಯಮಗಳು ಅಥವಾ ತಂತ್ರಜ್ಞಾನಾಧಾರಿತ ಬೋಧನೆಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬಹುದಾದ ಪಠ್ಯಗಳನ್ನು ಗುರುತಿಸಿ ಇಲಾಖೆಯ ತಂತ್ರಜ್ಞಾನಾಧಾರಿತ ಕಲಿಕಾ ನೀತಿಗನುಗುಣವಾಗಿ ಪಠ್ಯ ಬೋಧನೆಯ ಮಾದರಿಗಳನ್ನು ರಚನೆ ಮಾಡಲು ತಾವು ಇಲಾಖಾಧಿಕಾರಿಗಳಿಗೆ ಸೂಚಿಸಿದ್ದು, ಈ ಎಲ್ಲ ಕ್ರಮಗಳು ಅಂತಿಮಗೊಳ್ಳುವ ಪೂರ್ವದಲ್ಲಿಯೇ ಅಚಾತುರ್ಯದಿಂದ ಇಲಾಖೆಯ ಜಾಲತಾಣದಲ್ಲಿ ಅನುಮೋದಿತವಾಗದ ಪಠ್ಯಾಂಶಗಳನ್ನು ಪ್ರಕಟಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ, ದಾಖಲೆಯ, ಸಂಗತಿಯ ಐತಿಹ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರವು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆಯೇ ವಿನಾ ಕೆಡವುವ ಕೆಲಸವನ್ನು ಮಾಡುವುದಿಲ್ಲ. ಇದು ಅನವಶ್ಯಕ ರಾಜಕೀಯ ಗೊಂದಲಗಳಿಗೆ ಅವಕಾಶ ಕಲ್ಪಿಸಬೇಕಿಲ್ಲ ಎಂದು ಸುರೇಶ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಟಾಪ್ ನ್ಯೂಸ್

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.