ಚೆನ್ನೈ ಜೊತೆ ಸುರೇಶ್ ರೈನಾ ನಂಟು ಬೆಸೆಯುವುದು ಡೌಟು!
Team Udayavani, Aug 31, 2020, 5:28 PM IST
ಚೆನ್ನೈ : ಸುರೇಶ್ ರೈನಾ ದಿಢೀರನೇ ಐಪಿಎಲ್‌ನಿಂದ ಹೊರಬಂದ ಘಟನೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಿಎಸ್‌ಕೆ ತಂಡದ ಸ್ಟಾರ್ ಆಟಗಾರ, ಕಪ್ತಾನ ಧೋನಿಯ ಬಲಗೈ ಬಂಟನಂತಿದ್ದ ರೈನಾ ಯುಎಇಗೆ ಹೋದ ಕೆಲವೇ ದಿನಗಳಲ್ಲಿ ಇಂಥದೊಂದು ನಿರ್ಧಾರಕ್ಕೆ ಬರುತ್ತಾರೆಂದು ಯಾರೂ ಭಾವಿಸಿರಲಿಲ್ಲ.
ಚೆನ್ನೈ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿರುವ ಸುರೇಶ್ ರೈನಾ ಈ ರೀತಿ ವರ್ತಿಸಿದ್ದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯವಾಗಿ ಚೆನ್ನೈ ಫ್ರಾಂಚೈಸಿ ರೈನಾ ಅವರ ಈ ನಡೆಗೆ ಅಚ್ಚರಿ, ಆಘಾತದ ಜತೆಗೆ ಆಕ್ರೋಶವನ್ನೂ ವ್ಯಕ್ತಪಡಿಸಿದೆ. ಸಿಎಸ್‌ಕೆ ಮಾಲಕ, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಇದರಿಂದ ಗರಂ ಆಗಿದ್ದಾರೆ ಎಂಬುದೊಂದು ಸುದ್ದಿ. ಇದನ್ನೆಲ್ಲ ಗಮನಿಸುವವಾಗ ಚೆನ್ನೈ ಮತ್ತು ರೈನಾ ನಂಟು 2020ಕ್ಕಷ್ಟೇ ಅಲ್ಲ, ಶಾಶ್ವತವಾಗಿ ಕಡಿಯುವ ಸೂಚನೆ ಲಭಿಸಿದೆ.
ಗಂಭೀರ ಸಮಸ್ಯೆಯಲ್ಲ…
“ಚೆನ್ನೈ ತಂಡದಲ್ಲಿ ಕೋಚ್, ನಾಯಕ ಮತ್ತು ಮ್ಯಾನೇಜರ್‌ಗೆ ಪ್ರತ್ಯೇಕ ಹೊಟೇಲ್ ಕೊಠಡಿ ನೀಡಲಾಗಿತ್ತು. ರೈನಾಗೂ ಇದರ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಕೊಠಡಿಗೆ ಬಾಲ್ಕನಿ ಇರಲಿಲ್ಲ, ಅಷ್ಟೇ. ಇದು ಭಾರತಕ್ಕೆ ಮರಳುವಷ್ಟು ದೊಡ್ಡ ಸಮಸ್ಯೆಯೇನೂ ಆಗಿರಲಿಲ್ಲ’ ಎಂಬುದಾಗಿ ಮೂಲವೊಂದು ಹೇಳಿದೆ.
ಮರು ಹರಾಜು ವ್ಯಾಪ್ತಿಗೆ
ಹಾಗಾದರೆ ನಿರ್ಧಾರ ಬದಲಿಸಿ, ಪರಿಸ್ಥಿತಿಯನ್ನು ಅವಲೋಕಿಸಿ ಸುರೇಶ್ ರೈನಾ ಪುನಃ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆಯೇ ಎಂಬುದೊಂದು ಪ್ರಶ್ನೆ. “ಇಲ್ಲ. ರೈನಾ ಈ ಐಪಿಎಲ್ ಋತುವಿಗೆ ಲಭ್ಯರಿಲ್ಲ ಎಂದು ಸಿಎಸ್‌ಕೆ ಈಗಾಗಲೇ ಅಧಿಕೃತ ಪ್ರಕಟನೆ ನೀಡಿದೆ. ಈಗಾಗಲೇ ನಿವೃತ್ತಿ ಘೋಷಿಸಿದ, ಯಾವುದೇ ಮಾದರಿಯ ಪಂದ್ಯಗಳನ್ನಾಡದ ಆಟಗಾರನೊಬ್ಬ ಸಿಎಸ್‌ಕೆ ತಂಡಕ್ಕೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ರೈನಾ ಐಪಿಎಲ್‌ನಲ್ಲಿ ಮುಂದುವರಿಯುವುದಾದರೆ ಮರು ಹರಾಜಿಗೆ ಒಳಗಾಗಬೇಕಾಗುತ್ತದೆ. ಆಗ ಯಾವ ಫ್ರಾಂಚೈಸಿ ಬೇಕಾದರೂ ಅವರನ್ನು ಖರೀದಿಸಬಹುದಾಗಿದೆ’ ಎಂದು ಸಿಎಸ್‌ಕೆ ಫ್ರಾಂಚೈಸಿಯ ಮೂಲವೊಂದು ಸ್ಪಷ್ಟಪಡಿಸಿದೆ. ಅಲ್ಲಿಗೆ ಚೆನ್ನೈಗೆ ರೈನಾ ಮೇಲಿನ ಆಸಕ್ತಿ ಹೊರಟು ಹೋಗಿದೆ ಎಂದೇ ತಿಳಿಯಬೇಕಾಗುತ್ತದೆ.
ಸುರೇಶ್ ರೈನಾ ಸಿಎಸ್‌ಕೆ ಪರ 164 ಪಂದ್ಯಗಳನ್ನಾಡಿದ್ದು, ಸರ್ವಾಧಿಕ 4,527 ರನ್ ಪೇರಿಸಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಅತ್ಯಧಿಕ ರನ್ ಗಳಿಸಿದ ದಾಖಲೆ ಈ ಯುಪಿಯ ಎಡಗೈ ಆಟಗಾರನದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.