ಯಾರೀಕೆ ಸುಶಾಂತ್ ಸಖಿ ರಿಯಾ ಚಕ್ರವರ್ತಿ ; ಏನಿದು ಪ್ರಕರಣ: ಇಲ್ಲಿದೆ ಫುಲ್ ಡಿಟೇಲ್ಸ್
ಮಹೇಶ ಭಟ್ ಹಾಗೂ ರಿಯಾ ಚಕ್ರವರ್ತಿ ನಡುವಿನ ಸಂಬಂಧವೇ ಪ್ರಕರಣ ದಾಖಲಿಸಲು ನೆರವಾಯಿತಾ?
Team Udayavani, Jul 28, 2020, 8:29 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಬಾಲಿವುಡ್‌ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ.
ಮಂಗಳವಾರದ ಹೊಸ ಬೆಳವಣಿಗೆಯಲ್ಲಿ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಅವರ ವಿರುದ್ಧ ಸುಶಾಂತ್ ತಂದೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಅವರು ನಟಿ ರಿಯಾ ಚಕ್ರವರ್ತಿ ವಿರುದ್ಧ ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಎಫ್ಐಆರ್‌ನಲ್ಲಿ ಏನಿದೆ?
ರಿಯಾ ಸುಶಾಂತ್ ಅವರಿಂದ ಸಾಲ ರೂಪದಲ್ಲಿ ಹಣವನ್ನು ತೆಗೆದುಕೊಂಡಿದ್ದಾರೆ. ಇದನ್ನು ನೀಡದೇ ರಿಯಾ ಬ್ಲ್ಯಾಕ್‌ಮೇಲ್ ಮಾಡಿ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾಗಿ ಅವರು ಆರೋಪಿಸಿದ್ದಾರೆ. ಜೂನ್ 14ರಂದು ನಟ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಶಾಂತ್ ಮತ್ತು ರಿಯಾ ಸ್ವಲ್ಪ ಸಮಯದ ವರೆಗೆ ಡೇಟಿಂಗ್ ಮಾಡಿದ್ದು ಸುದ್ದಿಯಾಗಿತ್ತು.
ಐಪಿಸಿಯ ಸೆಕ್ಷನ್ 341, 342, 380, 406,420, 306ರಲ್ಲಿ ಪ್ರಕರಣ ದಾಖಲಿಸಲಾಗಿದೆ. ರಿಯಾ ತನ್ನ ಸ್ನೇಹಿತ ಸುಶಾಂತ್‌ಗೆ ದ್ರೋಹ ಬಗೆದಿದ್ದಾರೆ ಎಂದು ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾನೆ. ಜೂನ್‌ನಲ್ಲಿ ಸುಶಾಂತ್ ನೇಣಿಗೆ ಶರಣಾದ ಬಳಿಕ ಸುಶಾಂತ್ ಅವರ ತಂದೆ ಮುಂಬಯಿ ಪೊಲೀಸರಲ್ಲಿ ದೂರು ದಾಖಲಿಸಲಿಲ್ಲ. ಯಾರ ವಿರುದ್ಧವೂ ತಮಗೆ ಅನುಮಾನ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಮಹೇಶ್ ಭಟ್ ಅವರ ವಿಚಾರಣೆ ನಡೆದ ಮರುದಿನ ಈ ಬೆಳವಣಿಗೆ ನಡೆದಿದೆ. ಕರಣ್ ಜೋಹರ್ ಅವರೂ ವಿಚಾರಣೆಯನ್ನು ಎದುರಿಸಲಿದ್ದು, ಈ ವಾರದ ಕೊನೆಯಲ್ಲಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಮಹೇಶ್ ಭಟ್ ವಿಚಾರಣೆ
ಸೋಮವಾರಷ್ಟೇ ನಿರ್ದೇಶಕ ಮಹೇಶ್ ಭಟ್ ಮುಂಬಯಿ ಪೊಲೀಸರ ಎದುರು ಹಾಜರಾಗಿದ್ದು, ಶುಶಾಂತ್ ಅವರ ಸಾವಿನ ಕುರಿತಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸುಶಾಂತ್ ಸಿಂಗ್ ಅವರ ಸಾವಿನಲ್ಲಿ ಮಹೇಶ್ ಭಟ್ ಅವರ ಕಾಣದ ಕೈಗಳು ಕೆಲಸ ಮಾಡಿದೆ ಎಂಬ ಆರೋಪಗಳು ಸುಶಾಂತ್ ಆತ್ಮಹತ್ಯೆ ಬಳಿಕ ಬಾಲಿವುಡ್‌ನಲ್ಲಿ ಹರಿದಾಡುತ್ತಿತ್ತು. ಆದರೆ ಸುಶಾಂತ್ ಸಾವಿಗೂ, ರಿಯಾ ಚಕ್ರಬೊರ್ತಿ ಮತ್ತು ಮಹೇಶ್ ಭಟ್‌ಗೆ ಏನು ಸಂಬಂಧ ಎಂಬ ಪ್ರಶ್ನೆ ಉದ್ಬವಾಗಿದೆ. ಹಾಗಾದರೆ ಯಾರಿದು ರಿಯಾ ಚಕ್ರಬೊರ್ತಿ?
ರಿಯಾ ಚಕ್ರಬೊರ್ತಿ ಸುಶಾಂತ್ ಸಿಂಗ್ ಅವರ ಮಾಜಿ ಪ್ರೇಯಸಿ. ಸುಶಾಂತ್ ಅವರ ಮಾಜಿ ಪ್ರೇಯಸಿ ಹಾಗೂ ಮಹೇಶ್ ಭಟ್ ನಡುವೆ ಇದ್ದ ಸಂಬಂಧ ಈ ಬೆಳವಣಿಗೆಗೆ ಕಾರಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮಹೇಶ್ ಭಟ್ ಮತ್ತು ರಿಯಾ ಚಕ್ರಬೊರ್ತಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತುಂಬಾ ಸಲುಗೆಯಿಂದ ಇರುವ ವಿಡಿಯೋಗಳು ವೈರಲ್ ಆಗಿವೆ. ಇದು ಈ ಪ್ರಕರಣಕ್ಕೆ ತುಪ್ಪ ಸುರಿದಂತಾಗಿದೆ.
ಭಟ್ ಮೇಲೆ ಬ್ರೇಕ್ ಅಪ್ ಆರೋಪ
ಹಾಗೆ ನೋಡಿದರೆ ಸುಶಾಂತ್ ಅವರು ಹಾಗೂ ರಿಯಾ ಚೆನ್ನಾಗಿ ಇದ್ದರು. ಇಬ್ಬರು ಜತೆಯಾಗಿಯೇ ವಾಸಿಸುತ್ತಿದ್ದರು. ಸುಶಾಂತ್ ಸಾಯುವ ಕೆಲವು ದಿನಗಳ ಮುಂಚೆಯಷ್ಟೇ ಜಗಳವಾಡಿಕೊಂಡು ಮನೆಬಿಟ್ಟಿದ್ದರು. ಇಲ್ಲಿ ಇವರಿಬ್ಬರು ಜಗಳವಾಡಿ ಲವ್ ಮುರಿದು ಬಿಳಲು ಮಹೇಶ್ ಭಟ್‌ನ ಕೈವಾಡ ಇತ್ತ ಎಂಬ ಹೇಳಿಕೆಗಳು ಬಲವಾಗಿ ಕೇಳಿ ಬರುತ್ತಿದೆ. ಒಂದರ್ಥದಲ್ಲಿ ನೋಡಿದರೆ ಮಹೇಶ್ ಭಟ್ ಸದಾ ವಿವಾದದಲ್ಲಿ ಸುದ್ದಿಯಾಗುತ್ತಿರುವ ನಿರ್ದೇಶಕ. ಇವರ ಆಣತಿಯಂತೆ ರಿಯಾ ನಡೆದುಕೊಳ್ಳುತ್ತಿದ್ದರು ಎಂಬ ಮಾತುಗಳು ಬಾಲಿವುಡ್ ಪಡಸಾಲೆಯಲ್ಲಿ ಹಲವು ಬಾರಿ ಅನುರಣಿಸಿದ್ದೂ ಇದೆ. ಅಂದು ಈ ಕುರಿತು ತಿಳಿದುಕೊಳ್ಳುವ ಆಸಕ್ತಿ ಯಾರಿಗೂ ಅಗತ್ಯವೆನಿಸಿರಲಿಲ್ಲ. ಯಾಕೆಂದರೆ ಬಾಲಿವುಡ್‌ನಲ್ಲಿ ಗಾಸಿಪ್ಪ್‌ಗಳಿಗೇನೂ ಬರವಿಲ್ಲ.
ಆದರೆ ಯಾವಾಗ ಸುಶಾಂತ್ ಹಾಗೂ ರಿಯಾ ನಡುವಿನ ಸಂಬಂಧ ಹಳಿತಪ್ಪಿತೋ ಅದಕ್ಕೆ ಮಹೇಶ್ ಭಟ್ ನೇರ ಕಾರಣ ಎಂಬ ಆರೋಪಗಳು ಬಲವಾಯಿತು. ಅದಕ್ಕೆ ಪುಷ್ಠಿ ನೀಡುವಂತಹ ಸಲಿಗೆ ರಿಯಾ ಹಾಗೂ ಮಹೇಶ್ ಭಟ್ ನಡುವೆ ಇತ್ತು. ಈ ಕುರಿತಾದ ಗೋಜಲು ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಮಹೇಶ್ ಭಟ್ ಮುಂಬಯಿ ಪೊಲೀಸರ ಎದುರು ಹಾಜರಾಗಿದ್ದರು. ಸೋಮವಾರ ಹೇಳಿಕೆ ದಾಖಲಿಸಿರುವ ಕೆಲವು ಮಾಹಿತಿಗಳು ಹೊರಬಿದ್ದಿವೆ. ಸುಶಾಂತ್ ಅವರನ್ನು 2018-2019ರ ಅವಧಿಯಲ್ಲಿ ಕೇವಲ ಎರಡೇ ಬಾರಿ ಭೇಟಿ ಮಾಡಿರುವುದಾಗಿ ಮಹೇಶ್ ಭಟ್ ಹೇಳಿದ್ದಾರೆ. ರಿಯಾ ಚಕ್ರಬೊರ್ತಿಯನ್ನು ಜಲೇಬಿ ಚಿತ್ರಕ್ಕೆ ಹಾಕಿಕೊಂಡ ಬಳಿಕ ಸುಶಾಂತನ್ನು ಭೇಟಿಯಾಗಿದ್ದೆ ಎಂದಿದ್ದಾರೆ.
ಮಹೇಶ್-ರಿಯಾ ಸಂಬಂಧ!
ಮಹೇಶ್ ಭಟ್ ನಿರ್ದೇಶಿಸಿದ್ದ “ಜಲೇಬಿ’ ಚಿತ್ರದಲ್ಲಿ ಅವಕಾಶ ನೀಡಿದ್ದಾಗಿನಿಂದ ರಿಯಾ ಅವರೊಂದಿಗಿನ ಸಂಬಂದ ಉತ್ತಮವಾಗಿದೆ. ಆ ಸಿನಿಮಾದ ಕಾರಣದಿಂದಾಗಿ ರಿಯಾ ಜತೆ ಉತ್ತಮ ಬಾಂಧವ್ಯ ನಿರ್ಮಾಣವಾಗಿತ್ತು ಎಂದು ಮಹೇಶ್ ಭಟ್ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ
Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.