ಗಂಗಾ ಮಾತಾಜಿ ಹೇಳಿಕೆ ಹಿಂದಿದೆ ಮಠಾಧೀಶರ ಕೈವಾಡ :ಲಿಂಗಾಯತ ಮಹಾಸಭಾ
Team Udayavani, Dec 29, 2021, 6:23 PM IST
ಬೀದರ್ : ಬಸವಣ್ಣನವರ ಅಂಕಿನಾಮ ಕುರಿತಂತೆ ಮಾತೆ ಗಂಗಾ ಮಾತಾಜಿ ಅವರ ಹೇಳಿಕೆ ಹಿಂದೆ ಕೆಲವು ಅಂತರ ದ್ರೋಹಿಗಳ ಹಾಗೂ ಕೆಲವು ಮಠಾಧೀಶರ ಕೈವಾಡ ಇದೆ. ಇದು ಮಾತಾಜಿಯವರ ವಯಕ್ತಿಕ ಹೇಳಿಕೆ ಅಲ್ಲ, ಅವರಿಗೆ ಜೀವ ಬೆದರಿಕೆ ಹಾಕಿ ಹೇಳಿಸಿರುವ ಹೇಳಿಕೆ ಇದಾಗಿದೆ ಎಂದು ರಾಷ್ಟ್ರೀಯ ಬಸವ ದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಹೇಳಿದೆ.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ, ಬಸವ ದಳದ ಜಿಲ್ಲಾ ಉಪಾಧ್ಯಕ್ಷರಾದ ಶಿವಶರಣಪ್ಪ ಪಾಟೀಲ್, ಮಲ್ಲಿಕಾರ್ಜುನ ಶೆಂಬೆಳ್ಳಿ, ಸಂಘಟನಾ ಕಾರ್ಯದರ್ಶಿ ಬಸವರಾಜ ಸಂಗಮದ, ರಾಷ್ಟ್ರೀಯ ಕೋಶಾಧ್ಯಕ್ಷ ರವಿಕಾಂತ ಬಿರಾದಾರ, ಬಸವಂತರಾವ್ ಬಿರಾದಾರ ಅವರು ಸಹಿ ಹಾಕಿದ ಪ್ರಕಟಣೆ ಹೊರಡಿಸಿದ್ದಾರೆ.
ಮಾತಾಜಿ ಹೇಳಿಕೆ ಬಹಳ ಗೊಂದಲದಿಂದ ಕೊಡಿದ್ದು, ಅವರ ಮುಖದಲ್ಲಿ ಭಯ ಮತ್ತು ಆತಂಕ ಎದ್ದು ಕಾಣುತ್ತಿತ್ತು. ಇದೊಂದು ಷಡ್ಯಂತ್ರವಾಗಿದ್ದು, 2018ರ ಡಿಸೆಂಬರನಲ್ಲಿ ದೆಹಲಿ ಲಿಂಗಾಯತ ಧರ್ಮದ ಹೋರಾಟದ ರ‍್ಯಾಲಿಯ ದಿನವೇ ಕೆಲವು ನುಸುಳಿಕೊರಿಂದ ಇದರ ಬುನಾದಿ ಹಾಕಲಾಗಿತ್ತು. ಈ ದ್ರೋಹಿಗಳು 32ನೇ ಶರಣ ಮೇಳದ ನಂತರ ಲಿಂ. ಮಾತೆ ಮಹಾದೇವಿಯರಿಗೆ ಭೇಟಿ ಮಾಡಿ ಬೆದರಿಕೆ ಹಾಕಿದ್ದರೂ ಸಹ ಅವರು ಇದಕ್ಕೆ ಜಗ್ಗಿರಲಿಲ್ಲ. ನಂತರ ಮುಂದಿನ ಕೆಲವೇ ತಿಂಗಳಲ್ಲಿ ಅವರು ಲಿಂಗೈಕ್ಯರಾದರು.
ಈಗ ಅದೇ ದ್ರೋಹಿಗಳು ಅಂದಿನಿಂದಲೂ ಗಂಗಾ ಮಾತಾಜಿಯವರಿಗೆ ಹಂತ ಹಂತವಾಗಿ ಹಿಂಸೆ ಮಾಡುತ್ತಾ ಬಂದಿದ್ದು, ಈಗ ಜೀವ ಬೆದರಿಕೆ ಹಾಕಿ ಈ ಹೇಳಿಕೆ ನೀಡುವಂತೆ ಒತ್ತಾಯ ಮಾಡಿದ್ದಾರೆ. ಇದನ್ನು ಬಸವ ಧರ್ಮ ಪೀಠದ ಅನುಯಾಯಿಗಳು ಹಾಗೂ ರಾಷ್ಟ್ರೀಯ ಬಸವದಳದ ಪ್ರತಿಯೊಬ್ಬ ಕಾರ್ಯಕರ್ತರು ಖಂಡಿಸಿದ್ದು, ದ್ರೋಹಿಗಳ ಮುಖವಾಡವನ್ನು ಶೀಘ್ರದಲ್ಲೇ ಬಯಲಾಗಲಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.