ಹಿಜಾಬ್ ವಿವಾದಕ್ಕೆ ದ್ರೌಪದಿ ವಸ್ತ್ರಾಪಹರಣ ತುಲನೆ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್
Team Udayavani, Feb 17, 2022, 11:03 AM IST
ಮುಂಬಯಿ: ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೋಲಿಂಗ್ ಪಡೆದ ನಟಿ ಸ್ವರಾ ಭಾಸ್ಕರ್. ಸ್ವರಾ ಏನಾದರೂ ಪೋಸ್ಟ್ ಮಾಡಿದರೆ ಟ್ರೋಲ್ ಗಳ ಸುರಿಮಳೆಯಾಗುತ್ತದೆ.ಈಗ ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿ ಮತ್ತೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
ಸ್ವರಾ ಬರೆದಿದ್ದೇನು ?
‘ಮಹಾಭಾರತದಲ್ಲಿ ದ್ರೌಪದಿಯ ಬಟ್ಟೆಗಳನ್ನು ಬಲವಂತವಾಗಿ ತೆಗೆಸಲಾಯಿತು, ವಿಧಾನಸಭೆಯಲ್ಲಿ ಕುಳಿತಿರುವ ಜವಾಬ್ದಾರಿಯುತ, ಶಕ್ತಿಯುತ, ಕಾನೂನು ರೂಪಿಸುವವರು ಇಂದು ಅದೇ ರೀತಿ ನೆನಪಿಸಿಕೊಂಡಿದ್ದಾರೆ. ಎಂದು ಹಿಜಾಬ್ ವಿವಾದದ ಕುರಿತು ಟ್ವೀಟ್ ಮಾಡಿದ್ದರು.
ಸ್ವರಾ ಅವರ ಟ್ವೀಟ್ ಗೆ ಟೇಕೆಗಳ ಮಹಾಪೂರವೇ ಹರಿದು ಬಂದಿದ್ದು, ಕೆಲವರು ದ್ರೌಪದಿಯ ವಸ್ತ್ರಗಳನ್ನು ಬಲವಂತವಾಗಿ ತೆಗೆದುಹಾಕಲಾಯಿತು ಹೌದು ಆದರೆ ನಿಮ್ಮ ಬಟ್ಟೆಗಳನ್ನು ನೀವೇ ತೆಗೆದಿದ್ದೀರಾ? ನನಗೆ ಇಂದು ಮಿಯಾ ಖಲೀಫಾಳ(ನೀಲಿ ಚಿತ್ರ ನಟಿ) ಭಾರತೀಯ ನೋಟ ನೆನಪಾಯಿತು ಎಂದು ಬರೆದಿದ್ದಾರೆ.
“ನೀವು ಹಿಂದೂ, ಮತ್ತು ನಿಮ್ಮ ಬಗ್ಗೆ ನಮಗೆ ನಾಚಿಕೆಯಾಗುತ್ತಿದೆ” ಎಂದು ಮತ್ತೊಬ್ಬ ವ್ಯಕ್ತಿ ಬರೆದಿದ್ದಾರೆ.” ಟ್ವೀಟ್‌ಗಾಗಿ, ಅವರನ್ನು ಅನೇಕರು ಹಿಂದೂ ವಿರೋಧಿ ಎಂದು ಕರೆದಿದ್ದಾರೆ. ಅನೇಕರು ಆಕೆಗೆ ಹಿಂದೂ ಧರ್ಮವನ್ನು ತ್ಯಜಿಸುವಂತೆ ಸಲಹೆ ನೀಡಿದ್ದಾರೆ.
महाभारत में द्रौपदी के जबरन कपड़े उतारे गए थे.. और सभा में बैठे ज़िम्मेदार, शक्तिशाली, क़ानून बनाने वाले देखते रहे.. ऐसे ही आज याद आया।
— Swara Bhasker (@ReallySwara) February 14, 2022
ಹಿಜಾಬ್ ವಿಷಯದ ಬಗ್ಗೆ ತನ್ನ ಆಲೋಚನೆಗಳನ್ನು ವ್ಯಕ್ತಪಡಿಸಿದ ಮೊದಲ ವ್ಯಕ್ತಿ ಸ್ವರಾ ಅಲ್ಲವಾದರೂ ಅವರ ಅಭಿಪ್ರಾಯಗಳನ್ನು ಹೊರ ಹಾಕಿದಾಗಲೆಲ್ಲಾ ಟ್ರೋಲ್ ಆಗುತ್ತಾರೆ. ಈ ಹಿಂದೆ, ಸ್ವರಾ ಭಾಸ್ಕರ್ ಮುಸ್ಲಿಂ ವಿದ್ಯಾರ್ಥಿನಿಯರ ವಿಡಿಯೋವನ್ನು ಹಂಚಿಕೊಂಡಿದ್ದರು, ಅದರ ಹಿಂದೆ ಕೆಲವು ಹುಡುಗರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.