ಸ್ವಿಸ್ ಬ್ಯಾಡ್ಮಿಂಟನ್: ಭಾರತದ ಓಟ ಮುಂದುವರಿದೀತೇ?
Team Udayavani, Mar 2, 2021, 6:45 AM IST
ಬಾಸೆಲ್ (ಸ್ವಿಜರ್‌ಲ್ಯಾಂಡ್): ಕೊರೋನೋತ್ತರ ಬ್ಯಾಡ್ಮಿಂಟನ್ ಕೂಟ ಗಳಲ್ಲಿ ತೀರಾ ನಿರಾಶಾದಾಯಕ ಪ್ರದರ್ಶನ ನೀಡಿರುವ ಭಾರತಕ್ಕೆ ಮಂಗಳ ವಾರದಿಂದ ಮತ್ತೂಂದು ಸವಾಲು ಎದುರಾಗಲಿದೆ. ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆರಂಭವಾಗಲಿದ್ದು, ಭಾರತೀಯರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.
ಇದಕ್ಕೆ ಮುಖ್ಯ ಕಾರಣವೆಂದರೆ, ಈ ಕೂಟಗಳಲ್ಲಿ ಭಾರತ ಸಾಧಿಸಿದ ಯಶಸ್ಸು. ಮುಖ್ಯವಾಗಿ ಪುರುಷರ ವಿಭಾಗದಲ್ಲಿ ಸಮೀರ್ ವರ್ಮ, ಎಚ್.ಎಸ್. ಪ್ರಣಯ್, ಕೆ. ಶ್ರೀಕಾಂತ್ ಅವರೆಲ್ಲ ಇಲ್ಲಿ ಚಾಂಪಿಯನ್ ಆದವರೇ. ಬಿ. ಸಾಯಿಪ್ರಣೀತ್ ಕಳೆದ ವರ್ಷ ರನ್ನರ್ ಅಪ್ ಆಗಿದ್ದರು. ಈ ನಾಲ್ವರೂ ಇಲ್ಲಿ ಕಣದಲ್ಲಿದ್ದಾರೆ.
ಈ ಕೂಟದ ತಾಣವಾದ ಬಾಸೆಲ್‌ನ ಸೇಂಟ್ ಜಾಕೋಬ್‌ಶಲ್ಲೆ ಪಿ.ವಿ. ಸಿಂಧು ಪಾಲಿಗೆ ಅದೃಷ್ಟದಾಯಕವೂ ಹೌದು. ಕಳೆದ ವರ್ಷ ಅವರು ವಿಶ್ವ ಚಾಂಪಿಯನ್ ಆಗಿ ಮೂಡಿಬಂದದ್ದು ಇದೇ ತಾಣದಲ್ಲಿ. ಇದು ಕೋವಿಡ್ ಕಾಲಕ್ಕೂ ಮುನ್ನ ಸಿಂಧು ಗೆದ್ದ ಕೊನೆಯ ಪದಕವಾಗಿತ್ತು. ಅವರಿಲ್ಲಿ ಟರ್ಕಿಯ ನೆಸ್ಲಿಹಾನ್ ಯಿಗಿಟ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.
ಥಾಯ್ಲೆಂಡ್‌ನಲ್ಲಿ ನಡೆದ ಕಳೆದ ಮೂರೂ ಪಂದ್ಯಾವಳಿಗಳಲ್ಲಿ ಸಿಂಧು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಸ್ವಿಜರ್‌ಲ್ಯಾಂಡ್‌ನಲ್ಲಿ ಅವರು ವೈಫಲ್ಯವನ್ನು ಹೋಗಲಾಡಿಸಿಕೊಳ್ಳಬೇಕಿದೆ. ಇಲ್ಲಿ ಕ್ವಾರ್ಟರ್ ಫೈನಲ್ ತನಕ ಸಿಂಧು ಹಾದಿ ಸುಗಮ ಎಂದು ಭಾವಿಸಲಾಗಿದೆ.
ಆಲ್ ಇಂಡಿಯನ್ ಶೋ
ಪುರುಷರ ಸಿಂಗಲ್ಸ್‌ನಲ್ಲಿ “ಆಲ್ ಇಂಡಿ ಯನ್ ಶೋ’ ಒಂದು ಕಂಡುಬರಲಿದೆ. ಕೆ. ಶ್ರೀಕಾಂತ್ ಮತ್ತು ಸಮೀರ್ ವರ್ಮ ಮೊದಲ ಸುತ್ತಿನಲ್ಲಿ ಪರಸ್ಪರ ಮುಖಾ ಮುಖೀ ಆಗಲಿದ್ದಾರೆ. ಹೀಗಾಗಿ ಒಬ್ಬರಿಗೆ ಯಶಸ್ಸು, ಮತ್ತೂಬ್ಬರಿಗೆ ನಿರಾಸೆ ಖಾತ್ರಿ!
ಅಜಯ್ ಜಯರಾಮನ್
ಥಾಯ್ಲೆಂಡ್‌ನ ಸಿತ್ತಿಕೋಮ್ ಥಮಸಿನ್ ವಿರುದ್ಧ, ಪಿ. ಕಶ್ಯಪ್ ಸ್ಪೇನ್‌ನ ಪಾಬ್ಲೊ ಅಬಿಯನ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಗಾಯಾಳಾಗಿ ಥಾಯ್ಲೆಂಡ್ ಟೂರ್ನಿಯಿಂದ ಹೊರ ಗುಳಿದಿದ್ದ ಯುವ ಆಟಗಾರ ಲಕ್ಷ್ಯ ಸೇನ್ ಇಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಪ್ರಣವ್ ಜೆರ್ರಿ ಚೋಪ್ರಾ, ಎನ್. ಸಿಕ್ಕಿ ರೆಡ್ಡಿ, ಎಂ.ಆರ್. ಅರ್ಜುನ್, ಧ್ರುವ ಕಪಿಲ ಕೂಡ ಕಣದಲ್ಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಜೋಡಿ ಮೇಲೂ ಭಾರೀ ನಿರೀಕ್ಷೆ ಇಡಲಾಗಿದೆ. ಟೊಯೊಟಾ ಥಾಯ್ಲೆಂಡ್ ಓಪನ್‌ನಲ್ಲಿ ಇವರು ಸೆಮಿಫೈನಲ್ ತನಕ ಸಾಗಿದ್ದರು.
ಈ ಸೂಪರ್ 300 ಪಂದ್ಯಾವಳಿ “ಒಲಿಂಪಿಕ್ಸ್ ಅರ್ಹತೆ’ಯಿಂದಾಗಿ ಹೆಚ್ಚು ಪ್ರಾಮಖ್ಯ ಪಡೆದಿದೆ.
ಸೆಮಿಫೈನಲ್‌ನಲ್ಲಿ ಸಿಂಧು-ಸೈನಾ ಮುಖಾಮುಖೀ?
ಭಾರತದ ಮತ್ತೋರ್ವ ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಮುಂದೆ ಕಠಿನ ಸವಾಲು ಕಾದಿದೆ. ಎರಡು ಬಾರಿಯ ಚಾಂಪಿಯನ್ ಆಗಿರುವ ಸೈನಾ ಕೊರಿಯಾದ 6ನೇ ಶ್ರೇಯಾಂಕಿತೆ ಸುಂಗ್ ಜಿ ಹ್ಯುನ್, ಡೆನ್ಮಾರ್ಕ್‌ನ 4ನೇ ಶ್ರೇಯಾಂಕಿತ ಆಟಗಾರ್ತಿ ಮಿಯಾ ಬ್ಲಿಶ್‌ಫೆಲ್ಟ್ ವಿರುದ್ಧ ಆಡಬೇಕಿದೆ. ಮುಂದೆ ಸಾಗಿ ಸೆಮಿಫೈನಲ್ ತಲುಪಿದರೆ ಅಲ್ಲಿ ಪಿ.ವಿ. ಸಿಂಧು ಎದುರಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.