Burqas Ban: ಹಿಜಾಬ್, ಬುರ್ಖಾಗೆ ನಿಷೇಧ ಹೇರಿದ ಸ್ವಿಟ್ಜರ್ ಲ್ಯಾಂಡ್
Team Udayavani, Sep 21, 2023, 11:10 AM IST
ಸ್ವಿಟ್ಜರ್ ಲ್ಯಾಂಡ್: ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಮುಸ್ಲಿಮ್ ಮಹಿಳೆಯರು ಹಿಜಾಬ್, ಬುರ್ಖಾ ಧರಿಸಿ ಓಡಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಹಿಜಾಬ್ ಗೆ ನಿಷೇಧ ಹೇರುವ ವಿಧೇಯಕ್ಕೆ ಸ್ವಿಟ್ಜರ್ ಲ್ಯಾಂಡ್ ನ ಪಾರ್ಲಿಮೆಂಟ್ ಬುಧವಾರ (ಸೆ.20) ಅಂಗೀಕಾರ ನೀಡಿದೆ.
ಇದನ್ನೂ ಓದಿ:Manipal Hospital: ಎಎಂಆರ್‌ಐ ಹಾಸ್ಪಿಟಲ್ಸ್‌ನಲ್ಲಿ ಮಣಿಪಾಲ ಹಾಸ್ಪಿಟಲ್ ಶೇ.84 ಪಾಲುದಾರಿಕೆ
ಸ್ವಿಟ್ಜರ್ ಲ್ಯಾಂಡ್ ನ ಬಲಪಂಥೀಯ ಆಡಳಿತದ ಪೀಪಲ್ಸ್ ಪಕ್ಷವು ಈಗಾಗಲೇ ಪಾರ್ಲಿಮೆಂಟ್ ನ ಮೇಲ್ಮನೆಯಲ್ಲಿ ಹಿಜಾಬ್ ನಿಷೇಧದ ವಿಧೇಯಕಕ್ಕೆ ಅಂಗೀಕಾರ ಪಡೆದಿತ್ತು. ಸ್ವಿಸ್ ನ್ಯಾಷನಲ್ ಕೌನ್ಸಿಲ್ ನಲ್ಲಿ ವಿಧೇಯಕಕ್ಕೆ 151-29ರ ಅನುಪಾತದಲ್ಲಿ ಮತ ಚಲಾವಣೆಯೊಂದಿಗೆ ಅಂಗೀಕಾರ ಪಡೆಯಲಾಗಿತ್ತು ಎಂದು ವರದಿ ತಿಳಿಸಿದೆ.
ಹಿಜಾಬ್ ನಿಷೇಧದ ವಿಧೇಯಕಕ್ಕೆ ಕೆಳಮನೆಯಲ್ಲಿ ಅಂಗೀಕಾರ ದೊರೆಕುವ ಮೂಲಕ ಇನ್ಮುಂದೆ ಇದು ಫೆಡರಲ್ ಕಾನೂನು ಆಗಿ ಜಾರಿಗೊಳ್ಳಲಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿ ಹಿಜಾಬ್ ಅಥವಾ ಬುರ್ಖಾ ಧರಿಸಿದರೆ 1,100 ಡಾಲರ್ ವರೆಗೆ ದಂಡ ವಿಧಿಸಲಾಗುವುದು ಎಂದು ಸ್ವಿಸ್ ಸರ್ಕಾರ ತಿಳಿಸಿದೆ.
ಮುಸ್ಲಿಮ್ ವುಮೆನ್ಸ್ ಗ್ರೂಪ್ ನ ವಕ್ತಾರೆ ಇನೆಸ್ ಎಲ್ ಶಿಕ್ ಈ ನಿಷೇಧದ ಬಗ್ಗೆ ಎಎಫ್ ಪಿ ನ್ಯೂಸ್ ಏಜೆನ್ಸಿಗೆ ಪ್ರತಿಕ್ರಿಯೆ ನೀಡಿದ್ದು, ಸ್ವಿಟ್ಜರ್ ಲ್ಯಾಂಡ್ ನಲ್ಲಿ ಕೇವಲ 30 ಮಹಿಳೆಯರು ಹಿಜಾಬ್ ಧರಿಸುತ್ತಾರೆ. ಆದರೆ ಸರ್ಕಾರ ಇಡೀ ದೇಶಾದ್ಯಂತ ಮುಸ್ಲಿಂ ವಿರೋಧಿ ಭಾವನೆಯನ್ನು ಹರಡುವ ನಿಟ್ಟಿನಲ್ಲಿ ನಿಷೇಧ ಕಾನೂನನ್ನು ಜಾರಿಗೆ ತಂದಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಷೇಧ ಕಾಯ್ದೆ ಜಾರಿಯಾಗುವ ಮೂಲಕ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲೂ ಮೂಗು, ಬಾಯಿ ಹಾಗೂ ಕಣ್ಣು ಮುಚ್ಚುವ ಹಿಜಾಬ್ ಧರಿಸಲು ಅವಕಾಶವಿಲ್ಲ. ಪೂರ್ಣ ಪ್ರಮಾಣದ ಬುರ್ಖಾ ಧರಿಸುವ ಪದ್ಧತಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇಲ್ಲ. ಆದರೆ ಬೆಲ್ಚಿಯಂ, ಫ್ರಾನ್ಸ್ ದೇಶಗಳು ಹಿಜಾಬ್ ನಿಷೇಧಿಸಿದಂತೆ ನಾವೂ ಕೂಡಾ ಕೆಲವು ಮಾನದಂಡಗಳನ್ನು ಜಾರಿಗೊಳಿಸಿದ್ದೇವೆ ಎಂದು ಸ್ವಿಟ್ಜರ್ ಲ್ಯಾಂಡ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
MUST WATCH
ಹೊಸ ಸೇರ್ಪಡೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.