Taipei Open: ಪ್ರಣಯ್ ಕ್ವಾರ್ಟರ್ ಫೈನಲಿಗೆ
Team Udayavani, Jun 23, 2023, 6:24 AM IST
ತೈಪೆ: ಭಾರತದ ಖ್ಯಾತ ಶಟ್ಲರ್ ಎಚ್.ಎಸ್. ಪ್ರಣಯ್ ಸುಲಭ ಜಯದೊಂದಿಗೆ ತೈಪೆ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಕೂಟದಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ.
ಕೇವಲ 36 ನಿಮಿಷಗಳ ಹೋರಾಟ ದಲ್ಲಿ ಪ್ರಣಯ್ ಎದುರಾಳಿ ಇಂಡೋ ನೇಷ್ಯಾದ ಟಾಮಿ ಸುಗಿಯಾತೊì ಅವರನ್ನು 21-9, 21-17 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಪ್ರಣಯ್ ಹಾಂಕಾಂಗ್‌ನ ಐದನೇ ಶ್ರೇಯಾಂಕದ ಆ್ಯಂಗಸ್ ಎನ್‌ಜಿ ಕಾ ಲಾಂಗ್ ಅವರನ್ನು ಎದುರಿಸಲಿದ್ದಾರೆ.
ಕಳೆದ ತಿಂಗಳು ನಡೆದ ಮಲೇಷ್ಯಾ ಮಾಸ್ಟರ್ ಸೂಪರ್ 300 ಕೂಟದ ಪ್ರಶಸ್ತಿ ಜಯಿಸಿದ್ದ ಪ್ರಣಯ್ ಇತ್ತೀ ಚೆಗಿನ ದಿನಗಳಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ವಾರ ನಡೆದ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಕೂಟದಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಅವರು ಸೆಮಿಫೈನಲ್ ತಲು ಪಿದ ಸಾಧನೆ ಮಾಡಿದ್ದರು. ಅಲ್ಲಿ ಅವರು ವಿಶ್ವದ ನಂಬರ್ ವನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರಿಗೆ ಶರಣಾಗಿದ್ದರು. ಅಕ್ಸೆಲ್ಸೆನ್ ಅಂತಿಮವಾಗಿ ಪ್ರಶಸ್ತಿ ಜಯಿಸಿದ್ದರು.
ಪ್ರಣಯ್ ಕಣದಲ್ಲಿ ಉಳಿದ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. ಈ ಮೊದಲು ಪಾರುಪಳ್ಳಿ ಕಶ್ಯಪ್ ಸ್ಥಳೀಯ ಫೇವರಿಟ್ ಸು ಲೀ ಯಾಂಗ್ ಅವರಿಗೆ 16-21, 17-21 ಗೇಮ್‌ಗಳಿಂದ ಶರಣಾಗಿದ್ದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಮತ್ತು ರೋಹನ್ ಕಪೂರ್ ಕೂಡ ಸೋಲನ್ನು ಕಂಡಿದ್ದಾರೆ. ಅವರು ತೈಪೆಯ ಚಿಯು ಸಿಯಾಂಗ್ ಚೀಹ್- ಲಿನ್ ಕ್ಸಿಯಾವೊ ಮಿನ್ ಅವರಿಗೆ 13-21, 18-21 ಗೇಮ್‌ಗಳಿಂದ ಶರಣಾದರು.
ತನ್ಯಾ ಕಾಮತ್ ಕೂಡ ಯಾವುದೇ ಪ್ರತಿರೋಧ ನೀಡದೇ ಎದುರಾಳಿ ವಿಶ್ವ ಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ ಬೆಳ್ಳಿ ವಿಜೇತೆ ತೈ ಟಿಝು ಯಿಂಗ್ ಅವರಿಗೆ 11-21, 6-21 ಗೇಮ್‌ಗಳಿಂದ ಶರಣಾಗಿ ಹೊರಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
ICC ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.