ಚೀನದ ಸುಖೋಯ್ ಯುದ್ಧವಿಮಾನವನ್ನು ಹೊಡೆದುರುಳಿಸಿದ ತೈವಾನ್!
Team Udayavani, Sep 4, 2020, 4:31 PM IST
ತೈಪೆ (ತೈವಾನ್ ): ತನ್ನ ಭೂ ಪ್ರದೇಶದತ್ತ ಮುನ್ನುಗ್ಗಿ ಬಂದ ಚೀನದ ಸುಖೋಯ್ ವಿಮಾನವನ್ನು ತೈವಾನ್ ಹೊಡೆದುರುಳಿಸಿದೆ ಎಂದು ಮಾಧ್ಯಮ ವರದಿ ಮಾಡಿವೆ.
ಫೈಟರ್ ಜೆಟ್ ನೆಲಸಮಗೊಂಡಿದ್ದು, ಅದರ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೀಡಾದ ವಿಮಾನದ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆದರೆ ಉಭಯ ದೇಶಗಳು ಅದನ್ನು ದೃಢಪಡಿಸಿಲ್ಲ.
ಕಳೆದ ಕೆಲವು ತಿಂಗಳುಗಳಲ್ಲಿ ಚೀನ ಹಲವಾರು ಬಾರಿ ಸಮುದ್ರ ಮತ್ತು ವಾಯು ಗಡಿಯನ್ನು ಉಲ್ಲಂ ಸಿದೆ. ಈ ಮೂಲಕ ಪರೋಕ್ಷವಾಗಿ ತೈವಾನ್‌ಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆ. ಗುರುವಾರ ಚೀನದ ಫೈಟರ್ ಜೆಟ್ ತೈವಾನ್ ವಾಯು ಶ್ರೇಣಿಯನ್ನು ಪ್ರವೇಶಿಸಿತ್ತು.
ಅಮೆರಿಕ ಕ್ಷಿಪಣಿ ಬಳಕೆ !
ಮಾಧ್ಯಮ ವರದಿಗಳ ಪ್ರಕಾರ, ತೈವಾನ್ ಯುಎಸ್ ಕ್ಷಿಪಣಿಯನ್ನು ಚೀನದ ಸುಖೋಯ್ ವಿಮಾನವನ್ನು ಹೊಡೆದುರುಳಿಸಲು ಬಳಸಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಯಾವ ಕ್ಷಿಪಣಿ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಈ ಘಟನೆ ಬಳಿಕ ಚೀನ ಮತ್ತು ತೈವಾನ್ ನಡುವೆ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಚೀನ ಸಮುದ್ರದಲ್ಲಿ ಅಮೆರಿಕ ಸೈನ್ಯ ಸಕಲ ಸಿದ್ಧತೆಯೊಂದಿಗೆ ಬಲಿಷ್ಠವಾಗಿದ್ದು, ನಿಮಿಟ್ಜ್ ಯುದ್ಧನೌಕೆಯನ್ನು ಅಲ್ಲಿ ನಿಯೋಜಿಸಲಾಗಿದೆ. ಅದರಲ್ಲಿ 120 ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ.
It’s Big & Bold
Chinese fighter Jet shot down by Taiwan….Now China will say
It got crashed due to tech glitch or it’s not true pic.twitter.com/DZ6oxHQAmh— Major Surendra Poonia (@MajorPoonia) September 4, 2020
ಆದರೆ ಇವೆಲ್ಲದರ ನಡುವೆ ದಕ್ಷಿಣ ಚೀನ ಸಮುದ್ರದಲ್ಲಿ ಚೀನದ ಬೆದರಿಕೆಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಸಿಎನ್‌ಎನ್ ವರದಿ ಮಾಡುವ ಪ್ರಕಾರ ರವಿವಾರ, ಅಮೆರಿಕ ತನ್ನ ಮಾರ್ಗದರ್ಶಿ ಕ್ಷಿಪಣಿ ನಾಶಕ (Guided Missile Destroyer) ವನ್ನು ತೈವಾನ್‌ನ ಸ್ಟ್ರಾಟ್ ಎಂಬ ಪ್ರದೇಶದಲ್ಲಿ ನಿಯೋಜಿಸಿತ್ತು. ಅಮೆರಿಕ ಇದನ್ನು ಮೊದಲು ಘೋಷಿಸಿರಲಿಲ್ಲ. ಆದರೆ ಅಮೆರಿಕ ಎರಡು ವಾರಗಳಲ್ಲಿ ಎರಡನೇ ಬಾರಿಗೆ ದಕ್ಷಿಣ ಚೀನ ಸಮುದ್ರಕ್ಕೆ ಈ ಕ್ಷಿಪಣಿಯನ್ನು ಕಳುಹಿಸಿತ್ತು. ತೈವಾನ್ ಮೇಲೆ ದಾಳಿ ನಡೆದರೆ ಅಮೆರಿಕ ಮೌನವಾಗಿ ಕುಳಿತುಕೊಳ್ಳುವುದಿಲ್ಲ ಎಂದು ಯುಎಸ್ ಕಳೆದ ವಾರ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.