Taiwan V/s China: ತೈವಾನ್ ಸುತ್ತ ಸೇನೆ ನಿಯೋಜಿಸಿದ ಚೀನಾ !
Team Udayavani, Apr 9, 2023, 7:36 AM IST
ಬೀಜಿಂಗ್: ಚೀನಾದ ವಿರೋಧದ ನಡುವೆಯೂ ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತಿರುವ ತೈವಾನ್‌ಗೆ ಎಚ್ಚರಿಕೆ ನೀಡಲು ಚೀನಾ ತನ್ನ 8 ಯುದ್ಧನೌಕೆಗಳು ಹಾಗೂ 48 ಯುದ್ಧವಿಮಾನಗಳು, ಜೆಟ್‌ಗಳನ್ನು ತೈವಾನ್ ಸುತ್ತ ನಿಯೋಜಿಸಿದೆ. ಅಲ್ಲದೇ, ತೈವಾನ್ ಸುತ್ತಲಿನ ಪ್ರದೇಶದಲ್ಲೇ 3 ದಿನಗಳ ಮಿಲಿಟರಿ ತಾಲೀಮು ಆರಂಭಿಸಿರುವುದಾಗಿ ಹೇಳಿದೆ. ಇತ್ತೀಚೆಗಷ್ಟೇ ತೈವಾನ್ ಅಧ್ಯಕ್ಷೆ ಸೈ-ಇಂಗ್ ವೆನ್ ಅಮೆರಿಕದ ಲಾಸ್ ಏಂಜಲೀಸ್‌ಗೆ ಭೇಟಿ ನೀಡಿದ್ದರು. ಅಲ್ಲದೇ, ಅಮೆರಿಕ ಸಂಸತ್ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರೊಂದಿಗೆ ಮಾತುಕತೆ ನಡೆಸಿದರು. ಬೆನ್ನಲ್ಲೇ ಚೀನಾದ ಈ ಕ್ರಮ ಮಹತ್ವ ಪಡೆದುಕೊಂಡಿದೆ. ಜೊತೆಗೆ ಬಹಳ ಕಾಲದಿಂದ ಈ ಎರಡು ದೇಶಗಳ ನಡುವೆ ಯುದ್ಧಭೀತಿಯುಂಟಾಗಿದ್ದು ಈಗ ಇನ್ನಷ್ಟು ತೀವ್ರಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.