ನಟ ವಿವೇಕ್‌ಗೆ ಭಾವಪೂರ್ಣ ವಿದಾಯ : ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ
ಕುಟುಂಬಸ್ಥರು, ಸಾವಿರಾರು ಅಭಿಮಾನಿಗಳಿಂದ ಅಂತಿಮ ನಮನ
Team Udayavani, Apr 17, 2021, 10:00 PM IST
ಚೆನ್ನೈ: ಹೃದಯಾಘಾತದಿಂದ ಶನಿವಾರ ನಿಧನರಾದ ತಮಿಳು ಹಾಸ್ಯನಟ ವಿವೇಕ್ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಮೇಟ್ಟುಕುಪ್ಪಂನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಅವರ ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಸಾವಿರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಅಂತ್ಯಸಂಸ್ಕಾರಕ್ಕೂ ಮುನ್ನಸಾಂಪ್ರದಾಯಿಕ ಉಡುಗೆಯಲ್ಲಿದ್ದ ಪೊಲೀಸ್ ತುಕಡಿಯೊಂದು ಸಾಲಾಗಿ ನಿಂತು ನಟರ ಗೌರವಾರ್ಥವಾಗಿ 72 ಬಾರಿ ಗುಂಡು ಹಾರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಪರಿಸರಕ್ಕಾಗಿ ಸೇವೆ
ಪರಿಸರ ಸಂರಕ್ಷಣೆಗಾಗಿ ಅವರು ಗಣ ನೀಯ ಸೇವೆ ಸಲ್ಲಿ ಸಿ ದ್ದ ರು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರವರ ಅಪ್ಪಟ ಅಭಿಮಾನಿಯಾಗಿದ್ದ ಅವರು, 2010ರಲ್ಲಿ ಅವರ ಹೆಸರಿನಲ್ಲಿಯೇ ಕಲಾಂ ಗ್ರೀನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಆ ಮೂಲಕ, ಗಿಡ ನೆಡುವುದು, ಪರಿಸರ ಸ್ವತ್ಛತೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ದಿಗ್ಗಜರ ಅಶ್ರುತರ್ಪಣ
ನಟ ವಿವೇಕ್ ಸಾವಿನಿಂದ ದಿಗ್ಭ್ರಾಂತವಾದ ಇಡೀ ಭಾರತೀಯ ಚಿತ್ರರಂಗದ ದಿಗ್ಗಜರು, ರಾಜಕೀಯ ನೇತಾರರು ಅಗಲಿದ ಕಲಾವಿದನಿಗೆ ಅಶ್ರುನಮನ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಪಳನಿ ಸ್ವಾಮಿ ಅವರು ವಿವೇಕ್ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ನಟರಾದ ರಜನಿಕಾಂತ್, ಕಮಲಹಾಸನ್, ಮೋಹನ್ ಲಾಲ್, ಖ್ಯಾತ ನಿರ್ದೇಶಕ ಶಂಕರ್, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್, ನಟಿಯರಾದ ಕಾಜಲ್ ಅಗರ್ವಾಲ್, ಸುಧಾ ಚಂದ್ರನ್ ಸೇರಿದಂತೆ ಅನೇಕರು ವಿವೇಕ್ ಜತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಅವರ ಆತ್ಮಕ್ಕೆ ಶಾಂತಿ ಕೋರಿದರು.
ವಿವೇಕ್‌ರವರ ಆಕಸ್ಮಿಕ ಸಾವು ದಿಗ್ಭ್ರಮೆ ಉಂಟು ಮಾಡಿದೆ. ಅವರ ನಟನಾ ಕೌಶಲ್ಯ ಕೋಟ್ಯಂತರ ಜನರನ್ನು ನಕ್ಕು ನಲಿಸಿದೆ. ಪರಿಸರಕ್ಕಾಗಿ ಅವರು ಮಾಡಿರುವ ಸೇವೆ ಅನನ್ಯ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿ ದೊರಕಲಿ. ಓಂ ಶಾಂತಿ.
– ನರೇಂದ್ರ ಮೋದಿ, ಪ್ರಧಾನಿ
ಇದನ್ನೂ ಓದಿ :ಮತ್ತೊಂದು ದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ
ಗಳಗಳನೆ ಅತ್ತ ವಡಿವೇಲು
90ರ ದಶಕದ ನಂತರದ ತಮಿಳು ಚಿತ್ರರಂಗ ಕಂಡ ಎರಡು ಹಾಸ್ಯ ರತ್ನಗಳೆಂದರೆ ಅದು ವಡಿವೇಲು ಹಾಗೂ ವಿವೇಕ್. ಇವರಿಬ್ಬರೂ ತೆರೆಯಾಚೆಯೂ ಅತ್ಯುತ್ತಮ ಸ್ನೇಹಿತರು. ಶನಿವಾರ ತಮ್ಮ ಸ್ನೇಹಿತ ಅಗಲಿದ ಸುದ್ದಿಯನ್ನು ಕೇಳಿದ ವಡಿವೇಲು ದುಃಖೀಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ತಿಮ್ಮಕ್ಕನ ಮಾತಿಗೆ ದನಿಯಾಗಿದ್ದ ವಿವೇಕ್
2019ರಲ್ಲಿ ಕರ್ನಾಟಕದ ಹೆಮ್ಮೆಯ ಸಾಲುಮರದ ತಿಮ್ಮಕ್ಕ ಅವರಿಗೆ ಚೆನ್ನೈನಲ್ಲಿ ಜೆಎಫ್ಡಬ್ಲೂé ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಸಮಾರಂಭದಲ್ಲಿ ವಿವೇಕ್ ಕೂಡ ಹಾಜರಿದ್ದು, ಅವರೇ ತಮ್ಮ ಕೈಯ್ನಾರೆ ಪ್ರಶಸ್ತಿಯನ್ನು ತಿಮ್ಮಕ್ಕನವರಿಗೆ ನೀಡಿ ಕಾಲಿಗೆರಗಿ ಆಶೀರ್ವಾದ ಪಡೆದಿದ್ದರು. ಆಗ, ತಿಮ್ಮಕ್ಕ ಅವರು ಕನ್ನಡದಲ್ಲಿ ತಾವು ಮರಗಳನ್ನು ಬೆಳೆಸಿದ ರೀತಿಯನ್ನು ಕನ್ನಡದಲ್ಲಿ ವಿವರಿಸಿದಾಗ ವಿವೇಕ್, ತಿಮ್ಮಕ್ಕನವರ ಪ್ರತಿ ಮಾತನ್ನು ವೇದಿಕೆಯಲ್ಲೇ ತಮಿಳಿಗೆ ಭಾಷಾಂತರಿಸಿ ಸಭಿಕರಿಗೆ ಅರ್ಥವಾಗುವಂತೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.