ತಮಿಳಿಗರು ಕನ್ನಡ ವಿರೋಧಿಗಳಲ್ಲ


Team Udayavani, Mar 29, 2021, 7:00 AM IST

ತಮಿಳಿಗರು ಕನ್ನಡ ವಿರೋಧಿಗಳಲ್ಲ

ತಮಿಳಿಗರು ನಮ್ಮ ದೇಶದ ಸಂಸ್ಕೃತಿ ಬಗ್ಗೆ ಹೆಜ್ಜೆ ಹೆಜ್ಜೆಗೂ ನಂಬಿಕೆ ಇಟ್ಟುಕೊಂಡಿದ್ದಾರೆ. ನಾಸ್ತಿಕ ವಾದಿ ಗಳು ಅವರ ನಂಬಿಕೆಯನ್ನು ರಕ್ಷಿಸುತ್ತೇವೆಂದು ಅವ ರನ್ನು ವಂಚಿಸಿದ್ದಾರೆ. ಅವರು ನೂರಾರು ಕಿಲೋಮೀಟರ್‌ ಗಟ್ಟಲೇ ದೇವಸ್ಥಾನಗಳಿಗೆ ಪಾದಯಾತ್ರೆ ಮಾಡುತ್ತಾರೆ. ಪ್ರತೀ ಮನೆಯ ಮುಂದೆ ಪ್ರತೀ ದಿನ ರಂಗೋಲಿ ಹಾಕುವುದು ಅವರ ನಿತ್ಯದ ಸಂಪ್ರದಾಯ.

ತಮಿಳಿಗರು ಕನ್ನಡ ವಿರೋಧಿಗಳಲ್ಲ: ಹಿಂದುತ್ವ ತಮಿಳಿಗರ ರಕ್ತದಲ್ಲಿದೆ. ಭಾಷಾ ಸಮಸ್ಯೆಯನ್ನು ಅಪಹಾಸ್ಯ ಮಾಡಲಿಲ್ಲ: ಪ್ರೋತ್ಸಾಹಿಸಿದರು…. ತಮಿಳುನಾಡಿನಲ್ಲಿ ಜನ ಸಾಮಾನ್ಯರು ಬಹಳ ಒಳ್ಳೆಯವರಿದ್ದಾರೆ. ಸುಸಂಸ್ಕೃತರಿದ್ದಾರೆ.

ತಮಿಳಿಗರು ನಮ್ಮ ದೇಶದ ಸಂಸ್ಕೃತಿ ಬಗ್ಗೆ ಹೆಜ್ಜೆ ಹೆಜ್ಜೆಗೂ ನಂಬಿಕೆ ಇಟ್ಟು ಕೊಂಡಿದ್ದಾರೆ. ನಾಸ್ತಿಕ ವಾದಿ ಗಳು ಅವರ ನಂಬಿಕೆಯನ್ನು ರಕ್ಷಿಸುತ್ತೇವೆಂದು ಅವರನ್ನು ವಂಚಿಸಿದ್ದಾರೆ. ಅವರು ನೂರಾರು ಕಿಲೋಮೀಟರ್‌ಗಟ್ಟಲೇ ದೇವಸ್ಥಾನಗಳಿಗೆ ಪಾದಯಾತ್ರೆ ಮಾಡುತ್ತಾರೆ. ಪ್ರತೀ ಮನೆಯ ಮುಂದೆ ಪ್ರತೀ ದಿನ ರಂಗೋಲಿ ಹಾಕುವುದು ಅವರ ನಿತ್ಯದ ಸಂಪ್ರದಾಯ.

ಭಾಷೆಯ ಅಭಿಮಾನ ಅವರಿಗೆ ಹೆಚ್ಚಿದೆ. ನನಗೆ ಆರಂಭದಲ್ಲಿ ಭಾಷೆಯ ಸಮಸ್ಯೆ ಆಯಿತು. ವಣಕ್ಕಂ, ನಲ್ಲ ಇರ್ಕರಾ ? ಅಂಥ ಹೇಳಿತ್ತಿದ್ದೆ, ಎಣಕು ತಮಿಳು ವರಾದು ಅಂತ ಹೇಳುತ್ತಿದ್ದೆ. ಅದಕ್ಕೆ ಅವರು ಖುಷಿ ಪಡುತ್ತಿದ್ದರು. ಮೊದಲು ಅವರಿಗೆ ನಾನು ಹೃದಯದ (ಮಾತೃ) ಭಾಷೆಯಿಂದ ಮಾತನಾಡಲೇ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಲೋ ಎಂದು ಕೇಳುತ್ತಿದ್ದೆ. ಅವರು ಮಾತೃ ಭಾಷೆಯಲ್ಲಿಯೇ ಹೇಳಿ ನಡೆಯುತ್ತದೆ ಎನ್ನುತ್ತಾರೆ. ನಾನು ಕನ್ನಡದಲ್ಲಿ ಮಾತನಾಡಿ ದಾಗ ಅದನ್ನು ತಮಿಳಿಗೆ ತರ್ಜುಮೆ ಮಾಡಿದಾಗ ಜನರು ಕನ್ನಡವೇ ಅರ್ಥವಾಗುತ್ತದೆ ಎಂದು ಕೂಗುತ್ತಿದ್ದರು. ನಾನು ಬಹುತೇಕವಾಗಿ ಕನ್ನಡ, ತಮಿಳು ಹಾಗೂ ಇಂಗ್ಲಿಷ್‌ ಮಿಶ್ರಿತ ಕಂಗ್ಲಿಷ್‌ನಲ್ಲಿಯೇ ನನ್ನ ಭಾಷಣ ಮಾಡುತ್ತೇನೆ. ಅವರು ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಯಾರೂ ನನ್ನ ಭಾಷೆಯ ಬಗ್ಗೆ ಅಪಹಾಸ್ಯ ಮಾಡಿಲ್ಲ. ಹೊರಗಿನಿಂದ ನೋಡಿದರೆ ತಮಿಳಿಗರು ಕನ್ನಡ ಅಥವಾ ಬೇರೆ ಭಾಷೆಯ ವಿರೋಧಿಗಳು ಎಂದು ಬಿಂಬಿಸಲಾ ಗುತ್ತಿದೆ. ಆದರೆ ತಮಿಳಿಗರು ಕನ್ನಡದ ವಿರೋಧಿಗಳಲ್ಲ. ಅವರು ಕನ್ನಡವನ್ನೂ ಗೌರವಿಸುತ್ತಾರೆ.

ಅದರೊಂದಿಗೆ ತಮಿಳಿಗರ ಬಟ್ಟೆ ಹಾಕುವ ಪದ್ಧತಿ (ಡ್ರೆಸ್‌ ಕಲ್ಚರ್‌) ಜನರನ್ನು ಹತ್ತಿರ ಮಾಡಿಸುತ್ತದೆ. ಅಲ್ಲಿನ ವಾತಾ ವರಣಕ್ಕೆ ಪಂಚೆ ಶರ್ಟ್‌ ಹಾಕುವುದು ಅನಿವಾರ್ಯ, ನನಗೆ ಅವಕಾಶ ಸಿಕ್ಕಾಗಲೆಲ್ಲ ಪಂಚೆ, ಶರ್ಟ್‌ ಹಾಕಿಕೊಂಡು ಚುನಾವಣ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಅದು ಅವರೊಂದಿಗೆ ಹತ್ತಿರವಾಗಲು ನನಗೆ ಸಹಕಾರಿಯಾಗಿದೆ.

ಜನರ ಜತೆ ಭಾವನಾತ್ಮಕವಾಗಿ ಬೆರೆ ಯಲು ಏನು ಬೇಕೋ ಅದನ್ನು ಮಾಡುವ ಪ್ರಯತ್ನ ನಡೆಸುತ್ತಿದ್ದೇನೆ. ನಮ್ಮ ಊರು ಪೊಂಗಲ್‌ ಅಂತ ಪ್ರತೀ ಊರಿನಲ್ಲೂ ಪೊಂಗಲ್‌ ಉತ್ಸವ ಮಾಡಿದೆವು. ಕೆಲವು ಕಡೆಗಳಲ್ಲಿ ಜಲ್ಲಿ ಕಟ್ಟು ಉತ್ಸವ ಸಂಘಟಿಸಿದೆವು. ತಮಿಳುನಾಡಿನ ಸಾಮಾಜಿಕ ಸ್ಥಿತಿ ಅಧ್ಯಯನ ಮಾಡಿ ಕುರುಬ, ಒಕ್ಕಲಿಗ, ಭೋವಿ, ವೀರಶೈವ ಸಮಾಜದ ಸಮಾವೇಶ ಮಾಡಿದೆವು. ಊಟಿ, ಕೊನ್ನೂರು ಪ್ರದೇಶದಲ್ಲಿ ಬಡಗ ಸಮಾವೇಶ ಮಾಡಿದೆವು. ಅದು ನಮ್ಮ ಕೊಡಗಿನ ಭಾಷೆಯ ರೀತಿಯಲ್ಲಿದೆ.

ಪರ್ಯಾಯ ಸ್ವೀಕರಿಸುವ ಗುಣವಿದೆ
ನಾವು ರಾಜಕೀಯವಾಗಿ ನಮ್ಮ ಹಿತಾಸಕ್ತಿ ಕಾಪಾಡಿಕೊಂಡು ಜನರಿಗೆ ಹತ್ತಿರ ಆಗುವ ಪ್ರಯತ್ನ ಮಾಡುತ್ತಿದ್ದೇವೆ. ಸುಮಾರು 53 ವರ್ಷದಿಂದ ಎಐಎಡಿಎಂಕೆ ಮತ್ತು ಡಿಎಂಕೆ ಅಧಿಕಾರ ನಡೆಸಿವೆ. 1965ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿ ನಡೆದ ಅನಂತರ ಡಿಎಂಕೆ ಉದಯವಾಯಿತು. ಆಗ ಪರ್ಯಾಯ ರಾಷ್ಟ್ರೀಯ ಪಕ್ಷ ಇಲ್ಲದ ಕಾರಣ ಸ್ಥಳಿಯ ರಾಜ ಕೀಯ ಪಕ್ಷಗಳು ಬಲ ಗೊಂಡವು. ಈಗ ತಮಿಳುನಾ ಡಿನ ಜನರು ಬಲವಾದ ರಾಷ್ಟ್ರೀಯ ಪಕ್ಷವನ್ನು ಹುಡುಕುತ್ತಿ ದ್ದಾರೆ. ಅವರೇನು ರಾಷ್ಟ್ರೀಯ ಪಕ್ಷಗಳ ವಿರೋಧಿಗಳಲ್ಲ. ತಮಿಳಿಗರು ಹಿಂದುತ್ವ ವಿರೋಧಿಗಳಲ್ಲ. ಜಗತ್ತಿನಲ್ಲಿ ಎಷ್ಟು ದೇವಸ್ಥಾನಗ ಳಿವೆಯೋ ಅದರ ಅರ್ಧ ಭಾಗ ತಮಿಳುನಾಡಿನಲ್ಲಿವೆ.

ಭಾಷೆ ಸಮಸ್ಯೆಯಾಗಲಿಲ್ಲ
ತಮಿಳು ಭಾಷೆಯಲ್ಲಿಯೇ ಸುಮಾರು ಮೂವತ್ತು ನಲವತ್ತು ಪದಗಳು ಕನ್ನಡ ಪದಗಳೇ ಇವೆ. ಕರ್ನಾಟಕ ದಲ್ಲಿಯೇ ಉತ್ತರ ಕರ್ನಾಟಕ ಕನ್ನಡ, ಮಂಗ ಳೂರು ಕನ್ನಡ, ಮಂಡ್ಯ ಕನ್ನಡ ಹೇಗೆ ವ್ಯತ್ಯಾಸ ಆಗುತ್ತದೊ ಅದೇ ರೀತಿ ಅಲ್ಲಿಯೂ ಭಾಷೆಯಲ್ಲಿ ವ್ಯತ್ಯಾಸ ಇದೆ.

ಸುಮಾರು ಏಳೆಂಟು ಕ್ಷೇತ್ರಗಳಲ್ಲಿ ಕನ್ನಡ ಭಾಷಿಕರೆ ಇದ್ದಾರೆ. ಹೊಸೂರು, ಊಟಿ, ಥೇಣಿ, ಭವಾನಿ ಕ್ಷೇತ್ರಗಳಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಸಾಂಸ್ಕೃತಿಕವಾಗಿ ಹಾಗೂ ಚಾರಿತ್ರಿಕ ವಾಗಿಯೂ ನಾವು ಅವರಿಗೆ ಬಹಳ ಹತ್ತಿರ ಇದ್ದೇವೆ. ನಾವು ಯುಗಾದಿ ಆಚರಿಸುತ್ತೇವೆ. ಅವರು ಆಚರಿಸುತ್ತಾರೆ. ಅವರು ಸಂಕ್ರಾಂತಿ ಆಚರಿಸುತ್ತಾರೆ. ನಾವೂ ಆಚರಿಸುತ್ತೇವೆ. ಭೇದಗಳನ್ನು ಹುಟ್ಟು ಹಾಕಲು ರಾಜಕೀಯ ಪ್ರೇರಿತ ಪ್ರಯತ್ನ ನಡೆದಿದೆ. ಕನ್ನಡಿಗರು ಮತ್ತು ತಮಿಳು ನಾಡಿನ ವಿರೋಧದ ಬಗ್ಗೆ ಕಾವೇರಿ ಸಂದರ್ಭದಲ್ಲಿ ನಾನು ನೀಡಿದ ಹೇಳಿಕೆಯನ್ನು ಮುಂದಿಟ್ಟು ಅಲ್ಲಿ ಸಂಘರ್ಷ ಹುಟ್ಟು ಹಾಕುವ ಪ್ರಯತ್ನ ನಡೆಸಿದರು.

ಆಗ ನಾನೊಂದು ಪ್ರಶ್ನೆ ಕೇಳಿದೆ. ನಿಮ್ಮ ಹಾಗೂ ನಿಮ್ಮ ಪಕ್ಕದ ಮನೆಯವರ ನಡುವೆ ಜಗಳ ನಡೆದಾಗ ನೀವು ಯಾರ ಪರ ವಹಿಸುತ್ತೀರಿ ಎಂದೆ. ಅವರು ನಮ್ಮ ಮನೆ ಪರ ಅಂದರು, ನಿಮ್ಮ ಊರು ಹಾಗೂ ಪಕ್ಕದ ಊರಿನವರ ನಡುವೆ ಕಬಡ್ಡಿ ಪಂದ್ಯ ನಡೆದಾಗ ಯಾರ ಪರ ನಿಲ್ಲುತ್ತೀರಿ ಎಂದೆ, ನಮ್ಮ ಊರಿನ ಪರ ನಿಲ್ಲುತ್ತೇವೆ ಎಂದರು. ನಾನೂ ಹಾಗೆ, ನಮ್ಮ ರಾಜ್ಯದ ವಿಷಯ ಬಂದಾಗ ಕರ್ನಾಟಕದ ಪರ ನಿಲ್ಲುತ್ತೇನೆ. ದೇಶದ ವಿಷಯ ಬಂದಾಗ ತಮಿಳುನಾಡು, ಕರ್ನಾಟಕ ಎಲ್ಲರ ಪರವಾಗಿ ನಿಲ್ಲುತ್ತೇನೆ. ತಮಿಳುನಾಡಿ ಗಾಗಲಿ, ಕರ್ನಾಟಕಕ್ಕಾಗಲಿ ಅನ್ಯಾಯವಾಗುವು ದನ್ನು ನಾನು ಬೆಂಬಲಿಸುವುದಿಲ್ಲ ಎಂದು ಹೇಳಿದೆ. ನನ್ನ ವಾದವನ್ನು ಮೆಚ್ಚಿ ಚಪ್ಪಾಳೆ ಹೊಡೆದರು. ಭಾಷೆ ಜಗಳ ಆಡುವ ವಿಷಯವಲ್ಲ. ಅದು ಸಂಬಂಧ ಬೆಸೆಯುವ ವಿಷಯ ಎಂದು ಹೇಳಿದಾಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಾಟಾಳ್‌ ನಾಗರಾಜರನ್ನು ನೋಡಿದಾಗ ತಮಿಳಿಗರಿಗೆ ಕನ್ನಡಿಗರೆಲ್ಲ ಹೀಗೇನಾ ಅಂತ ಅನಿಸುತ್ತದೆ. ವೈಕೋನನ್ನು ನೋಡಿದಾಗ ಕನ್ನಡಿಗರಿಗೂ ತಮಿಳಿಗರೆಲ್ಲ ಹೀಗೇನಾ ಅಂತ ಅನಿಸುತ್ತದೆ. ಆದರೆ ಎಲ್ಲ ಕನ್ನಡಿಗರೂ ಹಾಗೂ ಎಲ್ಲ ತಮಿಳಿಗರು ಹಾಗಿಲ್ಲ ಅನ್ನುವುದು ವಾಸ್ತವ. ಭೇದ ಹುಟ್ಟು ಹಾಕುವವರಿಗೆ ಬೇಧ ಕಾಣಿಸುತ್ತದೆ. ಒಟ್ಟಾಗಿ ನೋಡು ವವರಿಗೆ ಒಟ್ಟಾಗಿ ಕಾಣಿಸುತ್ತದೆ. ನಾವು ತಮಿಳುನಾಡಿನ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿಲ್ಲ. ಕೇವಲ 20 ಕ್ಷೇತ್ರಗಲ್ಲಿ ಸ್ಪರ್ಧಿಸಿದ್ದೇವೆ. ನಾವು ಅವರ ಭಾವನೆ ಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದ್ದೇವೆ.

ಅರ್ಥವಾಗುತ್ತಿಲ್ಲ..
ನಾವು ತಾಯಿ ಭುವನೇಶ್ವರಿಯನ್ನು ಆರಾಧಿಸುತ್ತೇವೆ. ಭುವನೆೇಶ್ವರಿಯನ್ನು ಆರಾಧಿಸುತ್ತಿರುವವರು ವಿಜಯನಗರದ ಅರಸರು. ವಿಜಯ ನಗರ ಸಾಮ್ರಾಜ್ಯ ಹುಟ್ಟಿಕೊಂಡಿದ್ದೇ ಹಿಂದುತ್ವ ರಕ್ಷಿಸಲು. ಅದು ನಮಗೆ ಅರ್ಥವಾಗುತ್ತದೆ. ಆದರೆ ಸಿದ್ದರಾಮಯ್ಯನವರಿಗೆ ಅದು ಅರ್ಥವಾಗುತ್ತಿಲ್ಲ.

– ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ

ಟಾಪ್ ನ್ಯೂಸ್

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.