ತಾಂಜೇನಿಯಾ: ಫಸ್ಟ್ IIT ಕ್ಯಾಂಪಸ್
Team Udayavani, Jul 7, 2023, 6:21 AM IST
ಹೊಸದಿಲ್ಲಿ: ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೊದಲ ವಿದೇಶ ಕ್ಯಾಂಪಸ್ ತಾಂಜೇನಿಯಾದ ಝಾಂಝಿಬಾರ್ನಲ್ಲಿ ಸ್ಥಾಪನೆಗೊಳ್ಳಲಿದೆ. ಅಕ್ಟೋಬರ್ನಿಂದ ಶೈಕ್ಷಣಿಕ ವರ್ಷಆರಂಭವಾಗಲಿದೆ ಎಂದು ಗುರುವಾರ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಸದ್ಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆ ದೇಶದ ಪ್ರವಾಸದಲ್ಲಿದ್ದಾರೆ. ಅದಕ್ಕೆ ಪೂರ ಕವಾಗಿ ಈ ಬೆಳವಣಿಗೆ ನಡೆದಿದೆ. ಚೆನ್ನೈಯಲ್ಲಿರುವ ಐಐಟಿ ಮದ್ರಾಸ್ ಭಾರತದ ಹೊರಗೆ ಕ್ಯಾಂಪಸ್ ಸ್ಥಾಪಿಸುವ ಹೊಣೆ ಹೊತ್ತುಕೊಂಡಿದೆ. ಕೇಂದ್ರದ ಗ್ಲೋಬಲ್ ಸೌತ್ ಎಂಬ ನಿಲುವಿನ ಅಡಿ ಈ ಕ್ರಮ ಕೈಗೊಳ್ಳಲಾಗಿದೆ. ಭಾರತ ಮತ್ತು ತಾಂಜೇನಿಯಾ ನಡುವಿನ ಬಾಂಧವ್ಯದ ದ್ಯೋತಕವಾಗಿ ಕ್ಯಾಂಪಸ್ ಸ್ಥಾಪನೆಯಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.