WTC Final: ಟಾರ್ಗೆಟ್ 444- ಟೀಮ್ ಇಂಡಿಯಾ ಹೋರಾಟ
Team Udayavani, Jun 11, 2023, 7:13 AM IST
ಲಂಡನ್: ನೂತನ ಟೆಸ್ಟ್ ವಿಶ್ವಕಪ್ ಚಾಂಪಿಯನ್ ಯಾರು ಎಂಬ ಕುತೂಹಲಕ್ಕೆ ರವಿವಾರ ರಾತ್ರಿ ತೆರೆ ಬೀಳಲಿದೆ. ಭಾರತ 444 ರನ್ನುಗಳ ಕಠಿನ ಗುರಿ ಪಡೆದಿದ್ದು, 4ನೇ ದಿನನಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಮಾಡಿದೆ. ಗೆಲುವಿಗೆ ಇನ್ನೂ 280 ರನ್ ಅಗತ್ಯವಿದೆ. ಸೋಲಿನಿಂದ ಪಾರಾಗಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು ಸದ್ಯ ಟೀಮ್ ಇಂಡಿಯಾ ಮುಂದಿರುವ ಸವಾಲು. ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ ಹೋರಾಟವನ್ನು ಜಾರಿಯಲ್ಲಿರಿಸಿದ್ದಾರೆ. ಪಂದ್ಯ ಡ್ರಾಗೊಂಡರೆ ಇತ್ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುವುದು.
444 ರನ್ ಕಠಿನ ಗುರಿ
444 ರನ್ನುಗಳ ಕಠಿನ ಗುರಿ ಪಡೆದ ಭಾರತಕ್ಕೆ ನಾಯಕ ರೋಹಿತ್ ಶರ್ಮ-ಶುಭಮನ್ ಗಿಲ್ ಬಿರುಸಿನ ಆರಂಭವನ್ನೇನೋ ಒದಗಿಸಿದರು. ಆದರೆ ಗಿಲ್ ಎಡವಿದರು. ಬೋಲ್ಯಾಂಡ್ ಎಸೆತವನ್ನು ಡಿಫೆನ್ಸ್ ಮಾಡುವಾಗ ಎಜ್ ಆದ ಚೆಂಡನ್ನು ಗಲ್ಲಿ ವಿಭಾಗದಲ್ಲಿದ್ದ ಗ್ರೀನ್ ಕ್ಯಾಚ್ ಪಡೆದರು. ಆದರೆ ಅವರ ಕೈ ನೆಲಕ್ಕೆ ತಾಗಿದ್ದ ಬಗ್ಗೆ ಅನುಮಾನವಿತ್ತು. ಗಿಲ್ ಗಳಿಕೆ ಕೇವಲ 18 ರನ್ (19 ಎಸೆತ, 2 ಬೌಂಡರಿ). ಅಲ್ಲಿಗೆ ಟೀ ವಿರಾಮ ತೆಗೆದುಕೊಳ್ಳಲಾಯಿತು. ಭಾರತ ಒಂದಕ್ಕೆ 41 ರನ್ ಮಾಡಿತ್ತು.
ಟೀ ಬಳಿಕ ರೋಹಿತ್-ಪೂಜಾರ ಆಸೀಸ್ ಬೌಲರ್‌ಗಳನ್ನು ದಂಡಿಸತೊಡಗಿದರು. ಆರರ ಸರಾಸರಿಯಲ್ಲಿ ರನ್ ಹರಿದು ಬರತೊಡಗಿತು. ದ್ವಿತೀಯ ವಿಕೆಟಿಗೆ 51 ರನ್ ಒಟ್ಟುಗೂಡಿತು. ಆದರೆ ಇವರಿಬ್ಬರೂ ಒಟ್ಟೊಟ್ಟಿಗೆ ಪೆವಿಲಿಯನ್ ಸೇರಿದ ಕಾರಣ ತಂಡದ ಮೇಲೆ ಒತ್ತಡ ಬಿತ್ತು. ಆಸ್ಟ್ರೇಲಿಯ 8ಕ್ಕೆ 270 ರನ್ ಗಳಿಸಿ ದ್ವಿತೀಯ ಸರದಿಯನ್ನು ಡಿಕ್ಲೇರ್ ಮಾಡಿತು.
ಏರುತ್ತ ಹೋಯಿತು ಲೀಡ್
3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 123 ರನ್ ಗಳಿಸಿದ್ದ ಆಸ್ಟ್ರೇಲಿಯ ಶನಿವಾರ ಆಟ ಮುಂದುವರಿಸಿ ಲಂಚ್ ವೇಳೆ 6ಕ್ಕೆ 201 ರನ್ ಮಾಡಿತು. ಆದರೆ ಮೊದಲ ಅವಧಿಯ 26 ಓವರ್‌ಗಳ ಬ್ಯಾಟಿಂಗ್ ಆಸೀಸ್‌ಗೆ ಸುಲಭದ್ದೇನೂ ಆಗಿರಲಿಲ್ಲ. ಕೇವಲ 78 ರನ್ ಮಾಡಿದ ಕಾಂಗರೂ ಪಡೆ, 3ನೇ ದಿನದ ನಾಟೌಟ್ ಬ್ಯಾಟರ್‌ಗಳಿಬ್ಬರನ್ನೂ ಕಳೆದುಕೊಂಡಿತ್ತು. ಆದರೆ ಆತಂಕವೇನೂ ಇರಲಿಲ್ಲ. ಆಗಲೇ ಲೀಡ್ 374ಕ್ಕೆ ಏರಿತ್ತು.
ದಿನದ 3ನೇ ಓವರ್‌ನಲ್ಲೇ ಮಾರ್ನಸ್ ಲಬುಶೇನ್ ವಿಕೆಟ್ ಉದುರಿಸುವಲ್ಲಿ ಭಾರತ ಯಶಸ್ವಿಯಾಯಿತು. ಉಮೇಶ್ ಯಾದವ್ ಎಸೆತವನ್ನು ಪೂಜಾರ ಕೈಗೆ ಕ್ಯಾಚ್ ನೀಡಿ ವಾಪಸಾದರು. ಲಬುಶೇನ್ ತೃತೀಯ ದಿನದ ಮೊತ್ತಕ್ಕೇ ವಿಕೆಟ್ ಒಪ್ಪಿಸಿದರು. 41 ರನ್ನಿಗೆ ಅವರು 126 ಎಸೆತ ತೆಗೆದುಕೊಂಡರು. ಹೊಡೆದದ್ದು 4 ಬೌಂಡರಿ. ಆಸೀಸ್ ಆಗ ತನ್ನ ಮೊತ್ತಕ್ಕೆ ಕೇವಲ 2 ರನ್ ಸೇರಿಸಿತ್ತು.
ಕ್ಯಾಮರಾನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ಸೇರಿಕೊಂಡು 16 ಓವರ್ ಜತೆಯಾಟ ನಿಭಾಯಿಸಿದರು. ಸ್ಕೋರ್ 167ಕ್ಕೆ ಏರಿತು. ಆಗ ರವೀಂದ್ರ ಜಡೇಜ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 95 ಎಸೆತಗಳಿಂದ 25 ರನ್ ಮಾಡಿದ ಕ್ಯಾಮರಾನ್ ಗ್ರೀನ್ ಕ್ಲೀನ್‌ಬೌಲ್ಡ್ ಆದರು (4 ಬೌಂಡರಿ).
ಕೀಪರ್ ಅಲೆಕ್ಸ್ ಕ್ಯಾರಿ ಬಿರುಸಿನ ಆಟವಾಡುತ್ತ ಹೋದರು. ಲಂಚ್ ವೇಳೆ ಅವರು 41 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಜತೆಗಾರ ಮಿಚೆಲ್ ಸ್ಟಾರ್ಕ್ 11 ರನ್ ಮಾಡಿದ್ದರು. ಕೈಬೆರಳಿಗೆ ಏಟು ಮಾಡಿಕೊಂಡಿದ್ದ ಅಜಿಂಕ್ಯ ರಹಾನೆ ಮುನ್ನೆಚ್ಚರಿಕೆಯ ಕ್ರಮವಾಗಿ ಕ್ಷೇತ್ರರಕ್ಷಣೆಗೆ ಇಳಿದಿರಲಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 2 ರನ್ನಿನಿಂದ ಅರ್ಧ ಶತಕ ತಪ್ಪಿಸಿಕೊಂಡಿದ್ದ ಅಲೆಕ್ಸ್ ಕ್ಯಾರಿ, ದ್ವಿತೀಯ ಸರದಿಯಲ್ಲಿ ಇದನ್ನು ಪೂರ್ತಿಗೊಳಿಸಿದರು. ಲಂಚ್ ನಂತರವೂ ಇವರ ಬಿರುಸಿನ ಆಟ ಮುಂದುವರಿಯಿತು. ಇವರಿಗೆ ಮಿಚೆಲ್ ಸ್ಟಾರ್ಕ್ ಉತ್ತಮ ಬೆಂಬಲ ನೀಡಿದರು. 7ನೇ ವಿಕೆಟಿಗೆ 120 ಎಸೆತಗಳಿಂದ 93 ರನ್ ಒಟ್ಟುಗೂಡಿತು. ಆಸೀಸ್ ಲೀಡ್ 400ರ ಗಡಿ ದಾಟಿ ಬೆಳೆಯಿತು.
ಸ್ಟಾರ್ಕ್ 41 ರನ್ ಕೊಡುಗೆ ಸಲ್ಲಿಸಿದರು. 57 ಎಸೆತಗಳ ಈ ಸೊಗಸಾದ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡಿತ್ತು. ಸ್ಟಾರ್ಕ್ ವಿಕೆಟ್ ಮೊಹಮ್ಮದ್ ಶಮಿ ಪಾಲಾಯಿತು. ಆಗಷ್ಟೇ ಭಾರತ ಹೊಸ ಚೆಂಡನ್ನು ಕೈಗೆತ್ತಿಕೊಂಡಿತ್ತು. ನಾಯಕ ಪ್ಯಾಟ್ ಕಮಿನ್ಸ್ (5) ಕೂಡ ಶಮಿ ಮೋಡಿಗೆ ಸಿಲುಕಿದರು. ತಮ್ಮ ವಿಕೆಟ್ ಬಿದ್ದೊಡನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಕ್ಯಾರಿ 66 ರನ್ ಮಾಡಿ ಅಜೇಯರಾಗಿ ಉಳಿದರು (105 ಎಸೆತ, 8 ಬೌಂಡರಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.