Guru Purnima 2023; “ಪರಮಾತ್ಮಾನುಭೂತಿ”…ತಸ್ಮೈ ಶ್ರೀ ಗುರವೇ ನಮಃ

ಚಾತುರ್ಮಾಸ್ಯ ವ್ರತಾಚರಣೆಯನ್ನು ನಾಡಿನ ವಿವಿಧ ಮಠಾಧೀಶರು ಹಾಗೂ ಸನ್ಯಾಸಿಗಳು ಗುರು ಪೂರ್ಣಿಮೆಯ ಶುಭ ದಿನವಾದ ಸೋಮವಾರ ವ್ಯಾಸ ಪೂಜೆ ನೆರವೇರಿಸುವ ಮೂಲಕ ಕೈಗೊಳ್ಳಲಿದ್ದಾರೆ.

Team Udayavani, Jul 3, 2023, 7:46 AM IST

gurupoornima

ಸನ್ಯಾಸಿಗೆ ಯಾವುದೋ ಜನ್ಮದ ಸಂಸ್ಕಾರ, ಸಾಧನೆಯಿಂದ ಮನದಲ್ಲಿ ಬಿದ್ದ ವೈರಾಗ್ಯದ ಬೀಜವನ್ನು ಜ್ಞಾನ ಎಂಬ ಹೆಮ್ಮರವಾಗಿ ಬೆಳೆಸುವ ಮತ್ತು ಪರಿವ್ರಾಜಕನಾಗಿ ಲೋಕ ಸಂಚಾರ ಮಾಡುವ ಸನ್ಯಾಸಿಗೆ ನಿಂತಲ್ಲೇ ನಿಂತು ಯೋಗ ಸಾಧನೆಯಿಂದ “ಪರಮಾತ್ಮಾನುಭೂತಿ” ಹೊಂದುವ ಕಾಲವೇ ಚಾತುರ್ಮಾಸ್ಯ. ಅಂತಹ ಕಠಿನವಾದ ವ್ರತಾಚರಣೆಯನ್ನು ನಾಡಿನ ವಿವಿಧ ಮಠಾಧೀಶರು ಹಾಗೂ ಸನ್ಯಾಸಿಗಳು ಗುರು ಪೂರ್ಣಿಮೆಯ ಶುಭ ದಿನವಾದ ಸೋಮವಾರ ವ್ಯಾಸ ಪೂಜೆ ನೆರವೇರಿಸುವ ಮೂಲಕ ಕೈಗೊಳ್ಳಲಿದ್ದಾರೆ.

ಶೃಂಗೇರಿ ಉಭಯ ಜಗದ್ಗುರುಗಳು

ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಜು.3ರಂದು ನರಸಿಂಹವನದ ಗುರುನಿವಾಸದಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ. ಜು.3ರಂದು ವ್ಯಾಸಪೂಜೆ ಹಾಗೂ ಚಾತುರ್ಮಾಸ ವ್ರತಾರಂಭ, 4ರಂದು ಉತ್ತರ ಪೂಜಾ, 21ರಂದು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ 31ನೇ ವರ್ಧಂತಿ ಮಹೋತ್ಸವ ಹಾಗೂ ಶ್ರಾವಣ ಸೋಮವಾರ ಪೂಜೆ ನಡೆಯಲಿದೆ. ಆ.17ರಂದು ಬೆಳಗ್ಗೆ  ಮಹಾರುದ್ರಯಾಗಕ್ಕೆ ಸಂಕಲ್ಪ ನೆರವೇ ರಲಿದೆ. 20ರಂದು ಕಾಲ ಭೈರವೇಶ್ವರನಿಗೆ ವಿಶೇಷ ಪೂಜೆ, 21ಕ್ಕೆ ಬೆಳಗ್ಗೆ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳ ಆಹಿ°ಕ ದರ್ಶನ, ಅನಂತರ 10 ಗಂಟೆಗೆ ಅನುಗ್ರಹ ಭಾಷಣ, ಮಧ್ಯಾಹ್ನ ಮಹಾರುದ್ರಯಾಗದ ಪೂರ್ಣಾಹುತಿ, ಶ್ರಾವಣ ಸೋಮವಾರ ಹಾಗೂ ಶ್ರೀ ಚಂದ್ರಮೌಳೇಶ್ವರ ಪೂಜೆ ನಡೆಯಲಿದೆ. ಶ್ರೀಮಠದ ದೂರವಾಣಿ: 08265-295123.

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಚಾತುರ್ಮಾಸ ವ್ರತ, ಸನಾತನ ಭಾರತೀಯ ಸಂಸ್ಕೃತಿಯ ಸಂವರ್ಧನೆ ಸಂಕಲ್ಪದಿಂದ ಸಂಸ್ಥಾಪಿಸಲ್ಪಟ್ಟ ವಿಷ್ಣುಗುಪ್ತ ವಿಶ್ವವಿದ್ಯಾಪೀಠದದಲ್ಲಿ ಜು.3ರಂದು ವ್ಯಾಸಪೂಜೆಯೊಂದಿಗೆ ಆರಂಭಗೊಂಡು ಸೆ.29ಕ್ಕೆ ಸೀಮೋಲ್ಲಂಘನೆಯೊಂದಿಗೆ ಸಂಪನ್ನಗೊಳ್ಳಲಿದೆ. ಈ ಬಾರಿ ಅಧಿಕ ಶ್ರಾವಣ ಮಾಸ ಇರುವ ಹಿನ್ನೆಲೆಯಲ್ಲಿ ಆಷಾಢ ಹುಣ್ಣಿಮೆಯಿಂದ ಆರಂಭವಾಗುವ ವ್ರತ ಭಾದ್ರಪದ ಹುಣ್ಣಿಮೆಯವರೆಗೆ ಮೂರು ತಿಂಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ ವಿಶೇಷ ಪೂಜೆ-ಹಬ್ಬಗಳ ಆಚರಣೆ ಸೇರಿ ಜು.6ರಂದು ಶ್ರೀಗಳ ವರ್ಧಂತಿ, ವೈದಿಕ ಸಮಾವೇಶ, ಗುರಿಕಾರರ ಸಮಾವೇಶ, ಯುವ ಸಮಾವೇಶ, ಮಾತೃಸಮಾವೇಶ, ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಯಾಗಮಾಲಿಕೆಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಸಮ್ಮಾನ ನೆರವೇರಲಿದೆ. ಮಾಹಿತಿಗೆ ಮೊ.9449595245.

ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ

ಗೌಡ ಸಾರಸ್ವತ ಸಮುದಾಯದ ಕುಲಗುರುಗಳಾದ ಕಾಶಿಮಠದ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಜುಲೈ 7ರಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಕಾಶೀ ಮಠದಲ್ಲಿ ಚಾತುರ್ಮಾಸ ವ್ರತಾಚರಣೆ ಕೈಗೊಳ್ಳಲಿದ್ದಾರೆ.  ಇದೇ ಸಂದರ್ಭದಲ್ಲಿ ಅವರು ಸಾಮೂಹಿಕ ಲಕ್ಷ ತುಳಸೀ ಅರ್ಚನೆ, ಸಾಮೂಹಿಕ ಕಲ್ಯಾಣೋತ್ಸವ, ನಾಗರ ಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಅನಂತನ ಚತುರ್ದಶಿ, ವಿಜಯದಶಮಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವರು.  ಚಾತುರ್ಮಾಸ ವ್ರತಾಚರಣೆಯು ಸೆಪ್ಟಂಬರ್‌ 29ರ ವರೆಗೆ ನಡೆಯಲಿದೆ. ಅದರ ಬಳಿಕವೂ ಸ್ವಾಮೀಜಿಯವರು ನವೆಂಬರ್‌ 25ರ ವರೆಗೆ ಬೆಂಗಳೂರು ಮೊಕ್ಕಾಂನಲ್ಲಿರುತ್ತಾರೆ. ಸಂಪರ್ಕ: 9448361719.

ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ

ಹೊನ್ನಾವರ: ಕರ್ಕಿ ಜ್ಞಾನೇಶ್ವರೀ ಪೀಠದ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳು ತಮ್ಮ ಚಾತುರ್ಮಾಸ್ಯವನ್ನು ಮೂಲಮಠವಾದ ಕರ್ಕಿ­ಯಲ್ಲಿ ಆಚರಿಸಲಿದ್ದಾರೆ. ಜು.3ರಂದು ವ್ಯಾಸಪೂಜೆ­ಯೊಂದಿಗೆ ತಮ್ಮ 38ನೇ ಚಾತುರ್ಮಾಸ್ಯವನ್ನು ಅಧಿಕ ಶ್ರಾವಣ ಮಾಸದೊಂದಿಗೆ ಮೂರು ತಿಂಗಳು ಆಚರಿಸಲಿದ್ದಾರೆ. ಪ್ರತೀ ದಿನ ಬೆಳಗ್ಗೆ 11ರಿಂದ ಪಾದುಕಾ ಪೂಜೆ, ಶ್ರೀಗಳಿಂದ ವ್ಯಾಸಾಕ್ಷತೆ ಪ್ರದಾನ, 12-30ಕ್ಕೆ ಮಹಾಪೂಜೆ, 7ರಿಂದ ಭಜನೆ, ಕಥೋಪದೇಶ, ಶ್ರೀಗಳಿಂದ ದೇವತಾ ಪೂಜೆ ನಡೆಯಲಿದೆ.  “ಅಕಸ್ಯ ಅಕ ಫಲಂ’ ಎಂಬಂತೆ ಅಧಿಕ ಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಸೆ.29ರಂದು ಸೀಮೋಲ್ಲಂಘನ ನಡೆಯಲಿದೆ. (ಗುರು ಭಟ್ಟ-8618244423).

ಶ್ರೀವಿದ್ಯೇಶತೀರ್ಥ ಶ್ರೀಪಾದರು

ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು 44ನೇಯ ಚಾತುರ್ಮಾಸ ವ್ರತ ದೀಕ್ಷೆಯನ್ನು ಜು. 7ರಿಂದ ಸೆ. 29ರ ವರೆಗೆ ಬೆಂಗಳೂರು ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ (ಶಾಖಾ ಮಠ) ಕೈಗೊಳ್ಳುವರು. ಬಡಾವಣೆಗಳಲ್ಲಿ ಭಾಗವತ ಸಂದೇಶ ಸಹಿತ ವಿವಿಧ ಜ್ಞಾನಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮ, ದಾಸ ಸಾಹಿತ್ಯ ಶಿಬಿರಗಳನ್ನು ಆಯೋಜಿಸಲಾಗಿದೆ.  ವಿವಿಧೆಡೆಗಳಲ್ಲಿ ಉಪನ್ಯಾಸ, ಗಣೇಶ ಚತುರ್ಥಿ, ನಾಗರ ಪಂಚಮಿ, ಕೃಷ್ಣಾಷ್ಟಮಿ ಮೊದಲಾದ ಪರ್ವದಿನಗಳ ಪೂಜೆಗಳು ನಡೆಯಲಿವೆ.  ಸಂಪರ್ಕ ಸಂಖ್ಯೆ:   9448381527.

ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾ­ನದ ಮಠಾಧೀಶ­ರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ 33ನೇ ಚಾತುರ್ಮಾಸ ವ್ರತಾ­ಚರಣೆ ಜು.3 ರಿಂದ ಸೆ.29ರ ತನಕ ನಡೆಯಲಿದೆ. ಈ ಸಲ ಶ್ರಾವಣ ಮಾಸ ಅಧಿಕವಾಗಿ­ದ್ದರಿಂದ 3 ತಿಂಗಳು ವ್ರತಾಚರಣೆ ನಡೆಯಲಿದೆ. ಆಷಾಢ ಪೂರ್ಣಿಮೆ­­ಯಂದು ಬೆಳಗ್ಗೆ 10ಕ್ಕೆ ಶ್ರೀಗಳು ಶ್ರೀ ವೇದವ್ಯಾಸರ ಪೂಜೆ ನಡೆಸಿ ವ್ರತ ಸಂಕಲ್ಪ ಮಾಡಲಿದ್ದಾರೆ. ಚಾತುರ್ಮಾಸ್ಯದ ಅವಧಿ­ಯಲ್ಲಿ ನಿತ್ಯವೂ ಒಂದೊಂದು ಸೀಮೆ­ಯಿಂದ ಪಾದಪೂಜೆ ನಡೆಯ­ಲಿದೆ.

ಕಳೆದ 33 ವರ್ಷದಿಂದ ಸ್ವರ್ಣವಲ್ಲೀ ಮಠ­ದಲ್ಲಿಯೇ ಶ್ರೀಗಳು ಚಾತುರ್ಮಾಸ ವ್ರತಾಚರಣೆ ನಡೆಸುತ್ತಿರುವುದು ಸ್ವರ್ಣ­ವಲ್ಲೀಯ ವಿಶೇಷವಾಗಿದೆ. ಸಂಪರ್ಕ ಸಂಖ್ಯೆ. 08384-­296555, 08384-279359

ಹಳದೀಪುರ ಮಠದ ಶ್ರೀ ವಾಮನಾಶ್ರಮ ಸ್ವಾಮೀಜಿ

ಹೊನ್ನಾವರ: ಶ್ರೀ ಸಂಸ್ಥಾನ ಶಾಂತಾಶ್ರಮ ಕಾಶಿ ತಥಾ ಹಳದೀಪುರ ಮಠಾಧಿಪತಿ ಶ್ರೀ ವಾಮನಾಶ್ರಮ ಸ್ವಾಮೀಜಿಯವರ 20ನೇ ಚಾತುರ್ಮಾಸ ವ್ರತ ಜು.3ರಿಂದ ಸೆ.29ರ ವರೆಗೆ ಮಂಗಳೂರಿನ ಡೊಂಗರಕೇರಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಲಿದೆ. ಮಂಗಳೂರಿನ ವೈಶ್ಯ ಸಮಾಜದ ಬಾಂಧವರ ಆಮಂತ್ರಣದಂತೆ ಶ್ರೀಗಳು ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ. ಪ್ರತೀದಿನ ನಾಮಸಂಕೀರ್ತನೆ, ಸ್ವಾಮೀಜಿ ದರ್ಶನ, ಗುರುಸೇವೆ, ನಾಮಸಂಕೀರ್ತನ, ಚಂದ್ರಮೌಳೀಶ್ವರ ಮಹಾಪೂಜೆ ನಡೆಯಲಿದೆ. ಶ್ರಾವಣದ ಪ್ರತೀ ಸೋಮವಾರ ಶ್ರೀ ಚಂದ್ರಮೌಳೀಶ್ವರ ದೇವರ ವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯಲಿವೆ. ಸೆ.29ರಂದು ವ್ರತ ಸಮಾಪ್ತಿಯ ದಿನ 108 ನಾರಿಕೇಳ ಗಣಹವನ, ಗಂಗಾಪೂಜೆ, ಸೀಮೋಲ್ಲಂಘನ ನಡೆಯಲಿದೆ. (ದೂ. 9980092209, 9900118033)

ಸೋದೆ ಶ್ರೀ ವಿಶ್ವವಲ್ಲಭ ತೀರ್ಥರು

ಶಿರಸಿ: ವಾದಿರಾಜರು ಸಶರೀರ­ರಾಗಿ ವೃಂದಾವನಸ್ಥ­ರಾದ ಸೋದೆ ವಾದಿರಾಜ ಮಠದಲ್ಲಿ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದಂಗಳ­ವರು ಜು.3ರಿಂದ ವ್ರತ ಸಂಕಲ್ಪ ಕೈಗೊಳ್ಳಲಿದ್ದಾರೆ. ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಸೋದೆಯಲ್ಲಿ ಶ್ರೀಗಳು 18ನೇ ಚಾತುರ್ಮಾಸ ವ್ರತಾಚರಣೆ ನಡೆಸಲಿದ್ದಾರೆ. ಪಟ್ಟದ ದೇವರಿಗೆ ವಾರ್ಷಿಕ ಮಹಾಭಿಷೇಕ ನಡೆಸಿ ವ್ರತಾಚರಣೆ ಆರಂಭಿಸಲಿದ್ದಾರೆ.

ಸೆ.29ರ ತನಕ ವ್ರತನಿಷ್ಠರಾಗಿರಲಿ­ದ್ದಾರೆ.

ಭಕ್ತರಿಗೆ ಸಂಪರ್ಕ:  9483357005, 08384 279685.

ಪುತ್ತಿಗೆ ಉಭಯ ಮಠಾಧೀಶರು

ಉಡುಪಿ: ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಬೆಂಗಳೂರಿನ ಬಸವನಗುಡಿಯಲ್ಲಿರುವ ಪುತ್ತಿಗೆ ಮಠದಲ್ಲಿ ಜು. 16ರಂದು ಚಾತುರ್ಮಾಸ ವ್ರತ ಕೈಗೊಳ್ಳುವರು.

ಸೆ. 29ರ ವರೆಗೆ ವ್ರತಾಚರಣೆ ನಡೆಯಲಿದೆ. ನಿತ್ಯ ಧಾರ್ಮಿಕ ಪ್ರವಚನ, ವಿಶೇಷ ಪೂಜೆಗಳು ನಡೆಯಲಿವೆ. ನಾಗರಪಂಚಮಿ, ಚೌತಿ, ಕೃಷ್ಣಾಷ್ಟಮಿ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಂಪರ್ಕ ಸಂಖ್ಯೆ: 9845043417.

ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ

ಕಾಪು: ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 19ನೇ ವರ್ಷದ ಚಾತು­ರ್ಮಾಸ ವ್ರತಾಚರಣೆಯು ಜು.3ರಿಂದ ಸೆ.29ರ ವರೆಗೆ ಪಡುಕುತ್ಯಾರಿನಲ್ಲಿ ನಡೆಯಲಿದೆ. ಜು. 3ರಂದು ವಿಶ್ವಕರ್ಮ ಯಜ್ಞ, ವ್ಯಾಸ ಪೂಜೆಯೊಂದಿಗೆ ವ್ರತ ಸಂಕಲ್ಪ ನಡೆಯಲಿದ್ದು ಗುರುಪಾದ ಪೂಜೆಯ ಬಳಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆ­ಗೊಳ್ಳಲಿವೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯ­ಲಿವೆ. ಪ್ರತೀ ದಿನ ಬೆಳಗ್ಗೆ ಭಜನ ಸಂಕೀರ್ತನಾ ಸೇವೆ, ಗುರುಪಾದ ಪೂಜೆ, ಸಾಂಸ್ಕೃತಿಕ  ಕಾರ್ಯಕ್ರಮ, ದುರ್ಗಾ ನಮಸ್ಕಾರ ಪೂಜೆ, ಪಾರಾಯಣ, ರವಿವಾರದಂದು ವಿಶೇಷ ಉಪನ್ಯಾಸ, ವಿಚಾರಗೋಷ್ಠಿಗಳು ನಡೆಯಲಿವೆ. ಸೆ. 29ರಂದು ಚಾತುರ್ಮಾಸ್ಯದ ಸಮಾ­ರೋಪವು ನಡೆಯಲಿದ್ದು ಸೀಮೋಲ್ಲಂಘನ ಧಾರ್ಮಿಕ ಸಭೆಯು ನಡೆಯಲಿದ್ದು ವಿವಿಧ ಸಚಿವರು, ಗಣ್ಯರು, ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಪರ್ತಗಾಳಿ ಶ್ರೀಗಳ ವ್ರತ

ಹುಬ್ಬಳ್ಳಿ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿ ಶ್ರೀಮದ್‌ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಈ ಬಾರಿಯ ಚಾತುರ್ಮಾಸ್ಯ­ವನ್ನು ಮಹಾ­ರಾಷ್ಟ್ರದ ಪನ್ವೇಲ್‌ನ ಶ್ರೀವಿದ್ಯಾಧಿರಾಜ ಚಾರಿಟೆಬಲ್‌ ಟ್ರಸ್ಟ್‌ನಲ್ಲಿ ಜು.9ರಿಂದ ಸೆ.29ರ ತನಕ ಆಚರಿಸಲಿದ್ದಾರೆ. ಈ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆ-ಉತ್ಸವಗಳು ನಡೆಯಲಿವೆ. ಸಂಪರ್ಕ ಸಂಖ್ಯೆ: 9867782425, 9820238867 .

ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಮೈಸೂರು: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಪೀಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಮೈಸೂರಿನಲ್ಲಿ ಜು.3ರಿಂದ ಸೆ.28ರ ವರೆಗೆ ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳುವರು. ಶ್ರೀಗಳು ಶ್ರೀ ಕೃಷ್ಣಧಾಮ ಮಾತ್ರವಲ್ಲದೆ ಜಯಲಕ್ಷ್ಮೀ ಪುರಂನ ರಾಯರ ಮಠ, ಉದಯಗಿರಿಯ ಶ್ರೀರಾಮಧಾಮ, ಜೆ.ಪಿ.ನಗರದ ವಿಠಲಧಾಮ, ಅಗ್ರಹಾರದ ಉತ್ತರಾದಿ ಮಠ, ಉಡುಪಿ ಶ್ರೀ ಕೃಷ್ಣಮಂದಿರ, ಕೃಷ್ಣಮೂರ್ತಿಪುರಂನ ವ್ಯಾಸರಾಯ ಮಠ, ಚಾಮರಾಜ ರಸ್ತೆಯ ವೆಂಕಟಾಚಲಧಾಮ, ಟಿ.ಕೆ.ಲೇಔಟ್‌ನಲ್ಲಿರುವ ರಾಯರ ಮಠದಲ್ಲಿ  ಆಸ್ಥಾನ ಪೂಜೆಯನ್ನು ಕೈಗೊಳ್ಳಲಿ¨ªಾರೆ.

ಶ್ರೀಗಳು ವಿವಿಧ ವಿದ್ಯಾಕೇಂದ್ರ­ಗಳನ್ನು ಸಂದರ್ಶಿಸಿ ವಿದ್ಯಾರ್ಥಿ­ಗಳೊಂದಿಗೆ ಸಂವಾದ ಕಾರ್ಯಕ್ರಮ, ದೀನ ದಲಿತರ ಕೇರಿಗಳಿಗೆ ಭೇಟಿ ಹಾಗೂ ಆಶೀರ್ವಚನ, ಆಸ್ಪತ್ರೆ, ವೃದ್ಧಾಶ್ರಮಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸುವರು. ಚಾತುರ್ಮಾಸ ವ್ರತದ ವೇಳೆ ಪ್ರತೀ ದಿನ ಶ್ರೀಕೃಷ್ಣಧಾಮದಲ್ಲಿ ಸಂಜೆ  5 ರಿಂದ 8.30 ಗಂಟೆವರೆಗೆ ಭಜನೆ, ವಿದ್ವಾಂಸರಿಂದ ಭಾಗವತ ಪ್ರವಚನ, ಶ್ರೀಗಳಿಂದ ಸಮಗ್ರ ರಾಮಾಯಣ ಪ್ರವಚನ ಇರಲಿದೆ. ಮಾಹಿತಿಗೆ 9448271837.

ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ

ಕಾಪು: ಸಮಸ್ತ ಸಾರಸ್ವತ ಮಠ ಪರಂಪರೆಯ ಆದ್ಯಗುರುಪೀಠ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ 77ನೇ ಯತಿಗಳಾದ ಶ್ರೀಮದ್‌ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ ಅವರ 30ನೇ ಚಾತುರ್ಮಾಸ ವ್ರತಾಚರಣೆಯು ಜು. 3ರಿಂದ ಸೆ. 29ರವರೆಗೆ ಗೋವಾ ರಾಜ್ಯದ ಬಾಂದಿವಾಡೆ ಪೋಂಡಾದಲ್ಲಿರುವ ಶ್ರೀ ಮಹಾಲಕೀÒ$¾ ಸಂಸ್ಥಾನದಲ್ಲಿ ನಡೆಯಲಿದೆ. ವ್ರತಾಚರಣೆಯ ಸಂದರ್ಭ ಪ್ರತಿ ದಿನ ವಿವಿಧ ಧಾರ್ಮಿಕ ಅನುಷ್ಠಾನ ಕಾರ್ಯಕ್ರಮಗಳು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಕಾರ್ಯಕ್ರಮಗಳಾದ ನಾಗರ ಪಂಚಮಿ, ನಾಲ್ಕು ಶ್ರಾವಣ ಸೋಮವಾರಗಳು, ಋಗುಪಾಕರ್ಮಾ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಅನಂತ ಚತುದರ್ಶಿ-ನೋಂಪಿ, ಗಣೇಶ ವಿಜರ್ಸನೆ ಕಾರ್ಯಕ್ರಮಗಳು ನಡೆಯಲಿವೆ. ಸಂಪರ್ಕ ಸಂಖ್ಯೆ: 9083837272.

ಶ್ರೀ ರಾಜಶೇಖರಾನಂದ ಸ್ವಾಮೀಜಿ

ಮಂಗಳೂರು: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಜು.12ರಿಂದ ಸೆ.9ರ ವರೆಗೆ 24ನೇ ಚಾತುರ್ಮಾಸ್ಯ ಸಂಕಲ್ಪವನ್ನು ಮಂಗಳೂರು ಹೊರ ವಲಯದ ಗುರುಪುರದ ವಜ್ರದೇಹಿ ಮಠದಲ್ಲಿ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು, ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಮುಖ್ಯವಾಗಿ ಆಟಿ ಅಮಾವಾಸ್ಯೆ, ನಾಗರಪಂಚಮಿ, ವರಮಹಾಲಕ್ಷ್ಮೀ ವ್ರತ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗಳು ಮಠದಲ್ಲಿ ನಡೆಯಲಿವೆ.

ಸಂಪರ್ಕ ಸಂಖ್ಯೆ: ಸ್ವಾಮೀಜಿ- 9448192026, ರಾಜೇಶ್‌ ಆಪ್ತ ಕಾರ್ಯದರ್ಶಿ-9743209418.

ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಸುಬ್ರಹ್ಮಣ್ಯ: ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ್ಯ ಜು.10ರಿಂದ ಸೆ.29ರ ವರೆಗೆ ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ನಡೆಯಲಿದೆ. ಇದು ಮಠದ 26ನೇ ವರ್ಷದ ಚಾತುರ್ಮಾಸ್ಯ­ವಾಗಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ಎಲ್ಲ ಭಕ್ತರಿಗೂ ಅವಕಾಶವಿದೆ. ಮಾಹಿತಿಗಾಗಿ ಗುರುಪ್ರಸಾದ್‌ : 7899812997.

ಶ್ರೀ ನೃಸಿಂಹಾಶ್ರಮ ಸ್ವಾಮೀಜಿ

ಕೋಟ: ಬ್ರಹ್ಮಾವರ ತಾಲೂಕಿನ ಬಾಳೆಕುದ್ರುವಿನಲ್ಲಿರುವ  ಪುರಾಣ ಪ್ರಸಿದ್ಧ ಬಾಳೆಕುದ್ರು ಶ್ರೀಮಠವು ಅದ್ವೈತ ಪ್ರಕಾರ ಭಾಗವತ ಸಂಪ್ರದಾಯವನ್ನು ಅನುಸರಿಸುತ್ತಿದ್ದು, ಶ್ರೀ ಆದಿ ಶಂಕರಾಚಾರ್ಯರು, ಕೈವಲ್ಯಾಶ್ರಮ ಸ್ವಾಮಿಗಳೊಂದಿಗೆ ಸಂಬಂಧವನ್ನು ಹೊಂದಿರುವ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ.  ಶ್ರೀಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು  ಜು.3ರಂದು ಚಾತುರ್ಮಾಸ್ಯವನ್ನು ಆರಂಭಿಸಲಿದ್ದಾರೆ. ಜು.3ರಂದು ಗುರುಪೂರ್ಣಿಮೆ ಪ್ರಯುಕ್ತ ಗುರುಗಳಿಂದ ವ್ಯಾಸಪೂಜೆ ನಡೆಯಲಿದೆ. ಪ್ರತೀ ದಿನ ಬೆಳಗ್ಗೆ – 10.30 ರಿಂದ 12.30ರ ವರೆಗೆ ಸ್ಥಳೀಯ ಹಾಗೂ ಪರವೂರಿನ ಭಜನ ತಂಡಗಳಿಂದ ಭಜನೆ,  ವಿಷ್ಣು ಸಹಸ್ರನಾಮ ಪಠಣ, ಗುರುಕಾಣಿಕೆ ಸಮರ್ಪಣೆ ಜರಗಲಿದೆ ಹಾಗೂ

ಪ್ರತೀ ನಿತ್ಯ ಅನ್ನದಾನ ಸೇವೆಯೂ ಜರಗಲಿದೆ.

ಮಾಹಿತಿಗಾಗಿ 8495839474..

ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ

ಕುಂಬಳೆ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ತಮ್ಮ 20ನೇ ಚಾತುರ್ಮಾಸ ವ್ರತ ಸಂಕಲ್ಪವನ್ನು ಜು. 3 ಕೊಂಡೆವೂರು ಶ್ರೀ ಮಠದಲ್ಲಿ ಕೈಗೊಳ್ಳಲಿದ್ದಾರೆ. ಬೆಳಗ್ಗೆ 8.30ಕ್ಕೆ ಗಣಪತಿ ಹೋಮ, 9.30ಕ್ಕೆ ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, 10.30ಕ್ಕೆ ವ್ಯಾಸಪೂಜೆ ಆರಂಭವಾಗಿ 12.00ಕ್ಕೆ ಮಂಗಳಾರತಿ, 12.30ಕ್ಕೆ ಮಹಾಪೂಜೆ ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7 ಕ್ಕೆ ಶ್ರೀ ಗುರುಪಾದುಕಾ ಪೂಜೆ, ಭಜನೆ ಅನಂತರ ಸತ್ಸಂಗ ನಡೆಸಿ ಅನುಗ್ರಹ ಮಂತ್ರಾಕ್ಷತೆ ನೀಡಲಿದ್ದಾರೆ.

ಸೆ. 29ರಂದು ಸಂಪನ್ನಗೊಳ್ಳಲಿರುವ ಚಾತುರ್ಮಾಸದ ಸಂದರ್ಭದಲ್ಲಿ ವಿವಿಧ ಹೋಮ ಹವನಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತೀದಿನ ಸಂಜೆ ಭಜನೆ ಸೇವೆ, ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಭಜನೆ ಹಾಗೂ ಸತ್ಸಂಗ ನಡೆಯಲಿದೆ.

ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜು. 3ರಿಂದ ಸೆ. 29ರ ವರೆಗೆ ಉಡುಪಿ ಹೊರವಲಯದ ಮಣಿಪುರ ಅದಮಾರು ಶಾಖಾ ಮಠದಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳುವರು. ಶಾಸ್ತ್ರಪಾಠ, ಅನುಷ್ಠಾನ, ಪೂಜೆ, ಪರ್ವದಿನಗಳಂದು ವಿಶೇಷ ಪೂಜೆಗಳು ನಡೆಯಲಿವೆ. ಸಂಪರ್ಕ ಸಂಖ್ಯೆ: 94485 48125.

ಪಲಿಮಾರು ಉಭಯ ಮಠಾಧೀಶರು

ಉಡುಪಿ: ಚೆನ್ನೈಯ ಅಣ್ಣಾನಗರದ‌ಲ್ಲಿರುವ ಪಲಿಮಾರು ಶಾಖಾ ಮಠದಲ್ಲಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಉಡುಪಿ ಜಿಲ್ಲೆ ಕಾಪು ತಾಲೂಕಿನಲ್ಲಿ­ರುವ ಪಲಿಮಾರು ಮೂಲ ಮಠದಲ್ಲಿ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ದಶಮಿ ತಿಥಿ ಜು. 11ರಿಂದ ಆರಂಭಿಸಿ ಸೆ. 29ರ ವರೆಗೆ ಚಾತುರ್ಮಾಸ ವ್ರತ ಕೈಗೊಳ್ಳುವರು. ಪಾಠ-ಪ್ರವಚನ, ಸಂಸ್ಥಾನದ ಪೂಜೆಗಳನ್ನು ನಡೆಸುವರು. ಈ ಅವಧಿಯಲ್ಲಿ ಗಣೇಶ ಚತುರ್ಥಿ, ನಾಗರ ಪಂಚಮಿ, ಕೃಷ್ಣಾಷ್ಟಮಿ ಮೊದಲಾದ ಪರ್ವದಿನಗಳ ಪೂಜೆಗಳು ನಡೆಯಲಿವೆ. ಸಂಪರ್ಕ: 9449934567.

ಶ್ರೀವಿದ್ಯೆಂದ್ರತೀರ್ಥ ಶ್ರೀಪಾದರು

ಮಂಗಳೂರು: ಸುರತ್ಕಲ್‌ ಕುಳಾಯಿ ಸಮೀಪದ ಚಿತ್ರಾಪುರ ಮಠದಲ್ಲಿ ಶ್ರೀವಿದ್ಯೆàಂದ್ರತೀರ್ಥ ಶ್ರೀಪಾದರು ಜು. 7ರಂದು ಚಾತುರ್ಮಾಸ ವ್ರತವನ್ನು ಕೈಗೊಳ್ಳುವರು. ಸೆ. 29ರಂದು ಅನಂತನವ್ರತದ ಮರುದಿನ ಚಾತುರ್ಮಾಸ ವ್ರತ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಚಿತ್ರಾಪುರ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಮಠದಲ್ಲಿ ವಿಶೇಷ ಪೂಜೆ, ಅನುಷ್ಠಾನ, ಉಪನ್ಯಾಸ, ಗಣೇಶ ಚತುರ್ಥಿ, ನಾಗರ ಪಂಚಮಿ, ಕೃಷ್ಣಾಷ್ಟಮಿ ಮೊದಲಾದ ಪರ್ವದಿನಗಳ ಪೂಜೆಗಳು ನಡೆಯಲಿವೆ. ನಿತ್ಯ ಸಂಜೆ ವಾಯುಸ್ತುತಿಯೇ ಮೊದಲಾದ ಕೃತಿಗಳ ಕುರಿತು ಪಾಠ, ಚಿಂತನವನ್ನು ಸ್ವಾಮೀಜಿ ನಡೆಸಿಕೊಡುವರು. ಸಂಪರ್ಕ ಸಂಖ್ಯೆ: 9353455374

ಟಾಪ್ ನ್ಯೂಸ್

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.