Team India: ಮುಂಬೈಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!
ಚಾಂಪಿಯನ್ ಭಾರತ ತಂಡಕ್ಕೆ 125 ಕೋಟಿ ರೂ.ಬಹುಮಾನ, ವಾಂಖೇಡೆಯಲ್ಲಿ ಕಿಕ್ಕಿರಿದ ಕ್ರಿಕೆಟ್ ಪ್ರೇಮಿಗಳು
Team Udayavani, Jul 4, 2024, 10:52 PM IST
ಮುಂಬೈ: ಎಲ್ಲೆಲ್ಲೂ ನೀಲಿ ಬಣ್ಣದ ಜರ್ಸಿಯ ಕಲರವ, ಕ್ರಿಕೆಟ್ ಪ್ರಿಯರ ಸಂಭ್ರಮ, ಸಮುದ್ರದ ಅಲೆಗಳ ನಡುವೆಯೇ ತ್ರಿವರ್ಣ ಧ್ವಜ ಹಿಡಿದ ಜನರ ಸಡಗರ, ಘೋಷಣೆ… ಇದು ನಗರದ ಮರೀನಾ ಡ್ರೈವ್ ಬಳಿ ಕಂಡು ಬಂದ ದೃಶ್ಯಗಳು..
ಟಿ 20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿ 17 ವರ್ಷ ಬಳಿಕ 2ನೇ ಬಾರಿ ಚಾಂಪಿಯನ್ ಆಗಿ ವೆಸ್ಟ್‌ಇಂಡೀಸ್‌ನ ಬಾರ್ಬೊಡಸ್‌ನಿಂದ ಟ್ರೋಫಿ ಜೊತೆಗೆ ಆಗಮಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಭರ್ಜರಿ ಸ್ವಾಗತವನ್ನೇ ನೀಡಿದ್ದಾರೆ.
ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ಮೆರವಣಿಗೆ
ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಮುಂಬೈಗೆ ಆಗಮಿಸಿದ ಭಾರತ ತಂಡದ ಆಟಗಾರರು ಮರೀನಾ ಡ್ರೈವ್ ಬಳಿ ವಿಶೇಷ ವಿನ್ಯಾಸದ ತೆರೆದ ವಾಹನದಲ್ಲಿ ವಿಶ್ವಕಪ್ ಟ್ರೋಫಿ ಹಿಡಿದು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬೂಮ್ರಾ, ಪಾಂಡ್ಯ, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲ ಆಟಗಾರರು ವಿಜಯಯಾತ್ರೆಯ ಮೆರವಣಿಗೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಸಾವಿರಾರು ಅಭಿಮಾನಿಗಳು ಘೋಷಣೆ ಕೂಗಿ ಅಭಿನಂದನೆಗಳ ಸಲ್ಲಿಸಿದರು. ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಇಬ್ಬರೂ ಅಪ್ಪಿಕೊಂಡು ಸಂಭ್ರಮಿಸಿದ್ದು ಅಭಿಮಾನಿಗಳ ಕಣ್ಣುಸೆಳೆಯಿತು.
#WATCH | Mumbai: Team India conduct its victory parade and celebrate as they head to Wankhede Stadium. #T20WorldCup2024 pic.twitter.com/IOLJX9ugvi
— ANI (@ANI) July 4, 2024
ವಾಂಖೆಡೆಯಲ್ಲಿ ಅಭಿನಂದನಾ ಸಮಾರಂಭ:
ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆಯಿಂದಲೇ ಜಮಾಯಿಸಿ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪರ ಜಯಘೋಷ ಕೂಗಿದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ವಾಂಖೆಡೆ ಕ್ರೀಡಾಂಗಣದ ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ ಮಾತನಾಡಿ ಪಾಂಡ್ಯ ಹಾಕಿದ ಕೊನೆಯ ಓವರ್ ಫೈನಲ್ ಪಂದ್ಯದ ದಿಕ್ಕು ಬದಲಾಯಿಸಲು ನೆರವಾಯಿತು. ಸೂರ್ಯ ಕುಮಾರ್ ಹಿಡಿದ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಅದ್ಬುತವಾಗಿತ್ತು ಎಂದರು.
ರೋಹಿತ್ ಕರೆಯಿಂದ ಕೋಚ್ ಆಗಿ ಮುಂದುವರಿದೆ
ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಮಾತನಾಡಿ ಟಿ-20 ವಿಶ್ವಕಪ್ ಮುಗಿಯವವರೆಗೆ ಭಾರತ ತಂಡಕ್ಕೆ ಕೋಚ್ ಆಗಿ ಮುಂದುವರಿಯಲು ನಾಯಕ ರೋಹಿತ್ ಶರ್ಮಾ ದೂರವಾಣಿ ಕರೆ ಮಾಡಿ ಮನವಿ ಮಾಡಿ ನನ್ನ ಮನವೊಲಿಸಿದ್ದರು ಎಂದು ರಾಹುಲ್ ದ್ರಾವಿಡ್ ಮೆಲುಕು ಹಾಕಿದರು.
ಕೊಹ್ಲಿ ವೇದಿಕೆಗೆ ಬರಲಿ ಎಂದು ಕೂಗು
ಸಮಾರಂಭ ವೇಳೆ ವಿರಾಟ್ ಕೊಹ್ಲಿ ವೇದಿಕೆ ಬರಲಿ ಎಂದು ಅಭಿಮಾನಿಗಳು ಕೂಗಿದರು ಈ ವೇಳೆ ಆಗಮಿಸಿದ ಕೊಹ್ಲಿ ಬಂದು ಮಾತನಾಡಿ ಬೂಮ್ರಾ ಅಂತಹ ಬೌಲರ್ ಪೀಳಿಗೆಗೆ (ಜನರೇಷನ್) ಒಬ್ಬರು ಸಿಗುವುದು ಎಂದರು. ದಕ್ಷಿಣ ಆಫ್ರಿಕ್ರಾ ವಿರುದ್ಧ ನಡೆದ ಫೈನಲ್ ಪಂದ್ಯದ ಕೊನೆಯ ಓವರ್ ನಿಜವಾಗಲೂ ಅದ್ಭುತ, ಈತ ಜಗತ್ತಿನ ೮ನೇ ಅದ್ಭುತ ಎಂದು ಹೊಗಳಿದರು.
ಬಿಸಿಸಿಐಯಿಂದ ಬಹುಮಾನ ಹಸ್ತಾಂತರ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್‌ನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಜಯ್ ಶಾ ಹಸ್ತಾಂತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.