ಜಗತ್ತಿಗೆ ತಾಪಮಾನದ ವಾರ್ನಿಂಗ್:; ದಶಕದಲ್ಲಿ 0.2 ಡಿ.ಸೆ. ಏರಿಕೆ!
ವಿಶ್ವದ 50 ಪ್ರಮುಖ ವಿಜ್ಞಾನಿಗಳಿಂದ ಎಚ್ಚರಿಕೆಯ ಕರೆಗಂಟೆ
Team Udayavani, Jun 9, 2023, 7:33 AM IST
ಲಂಡನ್: ಬೇಸಗೆಯ ಧಗೆಯಿಂದ ಇನ್ನೇನು ಮುಂಗಾರಿನ ಸಿಂಚನದತ್ತ ದೇಶವು ತೆರೆದುಕೊಳ್ಳುತ್ತಿರುವಂತೆಯೇ 50 ವಿಜ್ಞಾನಿಗಳ ತಂಡವೊಂದು ಆಘಾತಕಾರಿ ಸುದ್ದಿಯನ್ನು ನೀಡಿದೆ. ಜಗತ್ತಿನ ತಾಪಮಾನ ಪ್ರತಿ 10 ವರ್ಷಗಳಿಗೆ 0.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗುತ್ತಿದೆ ಎಂಬ ಎಚ್ಚರಿಕೆಯ ಕರೆಗಂಟೆಯನ್ನು ಈ ವಿಜ್ಞಾನಿಗಳು ನೀಡಿದ್ದಾರೆ.
2013ರಿಂದ 2022ರವರೆಗೆ ದಶಕದಲ್ಲಿ 0.2 ಡಿ.ಸೆ.ನಂತೆ ಮಾನವ ಉತ್ತೇಜಿತ ತಾಪಮಾನವು ಹೆಚ್ಚುತ್ತಿದ್ದು, ಇದು ಮಾನವಕುಲಕ್ಕೆ ಮುಂದಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಈ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಜಗತ್ತಿನಾದ್ಯಂತ ತಾಪಮಾನ ಏರಿಕೆಯಾಗಲು ಮಾನವನ ಚಟುವಟಿಕೆಗಳೇ ಕಾರಣ ಎನ್ನುತ್ತದೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್ ಸರ್ಕಾರಿ ಸಮಿತಿ(ಐಪಿಸಿಸಿ) ವರದಿ. ಮನುಷ್ಯರ ಚಟುವಟಿಕೆಗಳು ಹಸಿರುಮನೆ ಇಂಧನಗಳ ಹೊರಸೂಸುವಿಕೆಯನ್ನು ಹೆಚ್ಚಿಸಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಳವಾಗಿದೆ ಎಂದೂ ಈ ವರದಿ ಹೇಳಿದೆ.
ಸಾರ್ವಕಾಲಿಕ ದಾಖಲೆ:
ಕಳೆದ ಒಂದು ದಶಕದಲ್ಲಿ ಪ್ರತಿ ವರ್ಷ ಸರಾಸರಿ 54 ಗಿಗಾ ಟನ್‌ಗಳನ್ನು ಇಂಗಾಲದ ಡೈಆಕ್ಸೆ„ಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತಿದೆ. ಈ ಮೂಲಕ ಹಸಿರುಮನೆ ಇಂಧನ ಹೊರಸೂಸುವಿಕೆಯು ಸಾರ್ವಕಾಲಿಕ ದಾಖಲೆ ಬರೆದಿದೆ ಎಂದೂ ವರದಿ ತಿಳಿಸಿದೆ. ಇದೇ ವರ್ಷದ ಡಿಸೆಂಬರ್‌ನಲ್ಲಿ ಯುಎಇಯಲ್ಲಿ ಕಾಪ್28 ಹವಾಮಾನ ಸಮ್ಮೇಳನ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ವರದಿ ಬಿಡುಗಡೆಯಾಗಿದೆ. 2050ರೊಳಗೆ ಜಾಗತಿಕ ತಾಪಮಾನವನ್ನು 1.5 ಡಿ.ಸೆ.ನಲ್ಲಿ ಮಿತಿಗೊಳಿಸುವ ನಿಟ್ಟಿನಲ್ಲಿ ಇಡಲಾದ ಹೆಜ್ಜೆಗಳ ಕುರಿತು ಈ ಸಮ್ಮೇಳನದಲ್ಲಿ ಪರಿಶೀಲನೆ ಕೈಗೊಳ್ಳಲಾಗುತ್ತದೆ.
ದೇಶಗಳು ಮಾಡಬೇಕಾದ್ದೇನು?
ಜಗತ್ತಿನ ತಾಪಮಾನದ ಮೇಲೆ ಎಂದೆಂದೂ ಸರಿಪಡಿಸಲಾಗದಂಥ ಹಾನಿ ಆಗಿದೆ. ಈಗ ನಮ್ಮ ಮುಂದಿರುವ ದಾರಿಯೆಂದರೆ, 2015ರ ಪ್ಯಾರಿಸ್ ಒಪ್ಪಂದದ ವೇಳೆ ನಿಗದಿಪಡಿಸಲಾದ ತಾಪಮಾನದ ಮಿತಿಯೊಳಗೆ ಇರಲು ಪ್ರಯತ್ನಿಸುವುದು. ಅಂದರೆ,
– 2035ರೊಳಗೆ ವಿಶ್ವವು ಹಸಿರುಮನೆ ಇಂಧನ ಹೊರಸೂಸುವಿಕೆಯನ್ನು ಶೇ.60ರಷ್ಟು ಕಡಿತಗೊಳಿಸಬೇಕು.
– ಇಂಗಾಲದ ಡೈ ಆಕ್ಸೆ„ಡ್, ಮೀಥೇನ್ ಹಾಗೂ ಪಳೆಯುಳಿಕೆ ಇಂಧನದ ಸುಡುವಿಕೆಯು 250 ಶತಕೋಟಿ ಟನ್‌ಗಳ ಮಿತಿ ಮೀರಬಾರದು.
– 2030ರೊಳಗಾಗಿ ಇಂಗಾಲದ ಡೈ ಆಕ್ಸೆ„ಡ್ ಹೊರಸೂಸುವಿಕೆಯನ್ನು ಕನಿಷ್ಠ ಶೇ.40ರಷ್ಟು ತಗ್ಗಿಸುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.