Terrorist: ದುಬೈನಿಂದ ಮುಂಬೈಗೆ ನುಗ್ಗಿದ್ದಾರಾ ಪಾಕ್ ಉಗ್ರರು?
ಮುಂಬೈ ಪೊಲೀಸರಿಗೆ ಉಗ್ರನ ಹೆಸರು, ಮೊಬೈಲ್ ಸಂಖ್ಯೆಯನ್ನು ತಿಳಿಸಿದ ಅಪರಿಚಿತ ವ್ಯಕ್ತಿ!
Team Udayavani, Apr 9, 2023, 7:59 AM IST
ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈಗೆ ಮೂವರು ಉಗ್ರರು ನುಗ್ಗಿದ್ದಾರೆ ಎಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಮ್ಗೆ ಶನಿವಾರ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಪಾಕಿಸ್ತಾನದ ಮೂವರು ಉಗ್ರರು, ದುಬೈ ಮೂಲಕ ಮುಂಬೈ ಪ್ರವೇಶಿಸಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಅಲ್ಲದೇ ಉಗ್ರರ ಪೈಕಿ ಒಬ್ಟಾತನ ಹೆಸರು ಮುಜೀದ್ ಸೈಯದ್ ಎಂದು ತಿಳಿಸಿದ ವ್ಯಕ್ತಿ, ಆತನ ಮೊಬೈಲ್ ನಂಬರ್ ಮತ್ತು ವಾಹನದ ನಂಬರ್ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾನೆ!
ಈ ವಿಷಯದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅನೇಕ ಬಾರಿ ಈ ರೀತಿ ನಕಲಿ ಕರೆಗಳು ಬರುತ್ತವೆ. ಇದು ಕೂಡ ಅದೇ ರೀತಿಯ ನಕಲಿ ಫೋನ್ ಕರೆ ಇರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಇದೇ ವೇಳೆ ಕರೆ ಮಾಡಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಮುಂಬೈ ಪೊಲೀಸರಿಗೆ ಈ ರೀತಿಯ ನಕಲಿ ಕರೆಗಳು ಬಂದಿರುವ ಉದಾಹರಣೆಗಳಿವೆ. ಆದಾಗ್ಯೂ, ಪೊಲೀಸರು ಮುಂಬೈ ಆದ್ಯಂತ ಅಲರ್ಟ್ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.