ಟೆಸ್ಟ್ ಸರಣಿ : ಪಾಕಿಸ್ಥಾನ ಕ್ಲೀನ್ ಸ್ವೀಪ್ ಸಾಹಸ
Team Udayavani, Feb 8, 2021, 11:40 PM IST
ರಾವಲ್ಪಿಂಡಿ: ಹದಿನಾಲ್ಕು ವರ್ಷಗಳ ಬಳಿಕ ಪಾಕಿಸ್ಥಾನ ಪ್ರವಾಸ ಕೈಗೊಂಡು ಟೆಸ್ಟ್ ಸರಣಿ ಆಡಿದ ದಕ್ಷಿಣ ಆಫ್ರಿಕಾ ವೈಟ್‌ವಾಶ್ ಅವಮಾನಕ್ಕೆ ಸಿಲುಕಿದೆ. ದ್ವಿತೀಯ ಟೆಸ್ಟ್ ಪಂದ್ಯವನ್ನು 95 ರನ್ನುಗಳಿಂದ ಗೆಲ್ಲುವ ಮೂಲಕ ಪಾಕ್ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆಗೈದಿದೆ.
ಗೆಲುವಿಗೆ 370 ರನ್ನುಗಳ ಗುರಿ ಪಡೆದ ದಕ್ಷಿಣ ಆಫ್ರಿಕಾಕ್ಕೆ ಆರಂಭಕಾರ ಐಡನ್ ಮಾರ್ಕ್‌ರಮ್ ಶತಕದ ಮೂಲಕ ಆಸರೆಯಾಗಿ ನಿಂತಿದ್ದರು. ಒಂದು ಹಂತದಲ್ಲಿ ಹರಿಣಗಳ ಪಡೆ ಕೇವಲ 3 ವಿಕೆಟಿಗೆ 241 ರನ್ ಬಾರಿಸಿ ಮುನ್ನುಗ್ಗುತ್ತಿತ್ತು. ಆದರೆ ಹಸನ್ ಅಲಿ ಮತ್ತು ಶಾಹೀನ್ ಅಫ್ರಿದಿ ದಾಳಿಗೆ ದಿಕ್ಕು ತಪ್ಪಿ 274ಕ್ಕೆ ಸರ್ವಪತನ ಕಂಡಿತು. ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ಥಾನ 7 ವಿಕೆಟ್‌ಗಳಿಂದ ಗೆದ್ದಿತ್ತು. ಇದು 2003ರ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ಥಾನ ಸಾಧಿಸಿದ ಮೊದಲ ಸರಣಿ ಗೆಲುವು.
ಮಾರ್ಕ್‌ರಮ್ 108 ರನ್ ಬಾರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು (243 ಎಸೆತ, 13 ಫೋರ್, 3 ಸಿಕ್ಸರ್). ಟೆಂಬ ಬವುಮ 61 ರನ್ ಮಾಡಿದರು. ಆದರೆ ಉಳಿದವರಿಗೆ ಪಾಕ್ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ. ಹಸನ್ ಅಲಿ 60ಕ್ಕೆ 5, ಅಫ್ರಿದಿ 51ಕ್ಕೆ 4 ವಿಕೆಟ್ ಕಿತ್ತು ಪಾಕಿಸ್ಥಾನದ ಗೆಲುವನ್ನು ಸಾರಿದರು.
ಇತ್ತಂಡಗಳಿನ್ನು 3 ಪಂದ್ಯಗಳ ಟಿ20 ಸರಣಿಯಲ್ಲಿ ಎದುರಾಗಲಿವೆ.
ಇದನ್ನೂ ಓದಿ:ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಬಜೆಟ್ ಮಂಡನೆ, ದಿನಾಂಕ ಇನ್ನೂ ನಿರ್ಧಾರ ಮಾಡಿಲ್ಲ : ಸಿಎಂ
ಸಂಕ್ಷಿಪ್ತ ಸ್ಕೋರ್
ಪಾಕಿಸ್ಥಾನ-272 ಮತ್ತು 298. ದಕ್ಷಿಣ ಆಫ್ರಿಕಾ-201 ಮತ್ತು 274 (ಮಾರ್ಕ್‌ರಮ್ 108, ಬವುಮ 61, ಡುಸೆನ್ 48, ಹಸನ್ ಅಲಿ 60ಕ್ಕೆ 5, ಅಫ್ರಿದಿ 51ಕ್ಕೆ 4).
ಪಂದ್ಯಶ್ರೇಷ್ಠ: ಹಸನ್ ಅಲಿ.
ಸರಣಿಶ್ರೇಷ್ಠ: ಮೊಹಮ್ಮದ್ ರಿಜ್ವಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.