Thalaivar 171: ರಜಿನಿ ಜೊತೆಗಿನ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ಹಂಚಿಕೊಂಡ ಲೋಕೇಶ್
Team Udayavani, Dec 19, 2023, 12:07 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಇತ್ತೀಚೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಬಹು ನಿರೀಕ್ಷಿತ ಮುಂದಿನ ಸಿನಿಮಾ ಅಂದರೆ 171ನೇ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಟಿಜೆ ಜ್ಞಾನವೇಲ್ ಅವರ ಈ ಸಿನಿಮಾಕ್ಕೆ ‘ವೆಟ್ಟಯ್ಯನ್’ ಎಂದು ಟೈಟಲ್ ಇಡಲಾಗಿದೆ.
ಸೂಪರ್ ಸ್ಟಾರ್ ʼತಲೈವಾʼ ಮತ್ತೆ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ‘ವೆಟ್ಟಯ್ಯನ್’ ನಲ್ಲಿ ಮಿಂಚಲಿದ್ದಾರೆ. ಸಿನಿಮಾದ ಟೈಟಲ್ ರಿವೀಲ್ – ಟೀಸರ್ ವಿಡಿಯೋ ಅಭಿಮಾನಿಗಳ ವಲಯದಲ್ಲಿ ಸದ್ದು ಮಾಡಿದೆ. ಈ ಸಿನಿಮಾದ ಬಳಿಕ ರಜಿನಿಕಾಂತ್ ಲೋಕೇಶ್ ಕನಕರಾಜ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಲೋಕೇಶ್ ಕನಕರಾಜ್ ʼಲಿಯೋʼ ಬಳಿಕ ʼತಲೈವರ್ 171ʼ ಸಿನಿಮಾದತ್ತ ಗಮನ ಹರಿಸುವ ನಿಟ್ಟಿನಲ್ಲಿ ಎಲ್ಲಾ ಸೋಶಿಯಲ್ ಮೀಡಿಯಾಗಳಿಂದ ಅವರು ದೂರ ಉಳಿಯುವುದಾಗಿ ಇತ್ತೀಚೆಗೆ ಕನಕರಾಜ್ ಪೋಸ್ಟ್ ವೊಂದರ ಮೂಲಕ ಹೇಳಿದ್ದರು.
ಲೋಕೇಶ್ – ರಜಿನಿಕಾಂತ್ ಅವರ ಸಿನಿಮಾದಲ್ಲಿ ದೊಡ್ಡಮಟ್ಟದ ಆ್ಯಕ್ಷನ್ ಹಾಗೂ ಮಲ್ಟಿಸ್ಟಾರ್ಸ್ ಪಾತ್ರವರ್ಗ ಇರಲಿದೆ ಎನ್ನಲಾಗಿದೆ. ರಜಿನಿ ಜೊತೆ ನಟಿಸಲು ಶಾರುಖ್ ಜೊತೆ ಲೋಕೇಶ್ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ ಶಾರುಖ್ ನಟಿಸಲು ಒಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ.
ಸಿನಿಮಾ ಯಾವಾಗ ಸಟ್ಟೇರುತ್ತದೆ ಎನ್ನುವುದರ ಬಗ್ಗೆ ಲೋಕೇಶ್ ಸಂದರ್ಶನವೊಂದರಲ್ಲಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಆ್ಯಂಕರ್ ಗೋಪಿನಾಥ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು,“2024 ರ ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭಿಸುವ ಯೋಜನೆಯಿದೆ.ಅಷ್ಟರೊಳಗೆ ಬರವಣಿಗೆ ಪ್ರಕ್ರಿಯೆ ಮುಗಿಯುತ್ತದೆ ಎಂಬ ವಿಶ್ವಾಸ ನನಗಿದೆ. ಹಲವು ವರ್ಷಗಳ ನಂತರ ರಜಿನಿ ಸರ್‌ಗೆ ಇದು ಹೈ-ಆಕ್ಟೇನ್ ಆ್ಯಕ್ಷನ್ ಚಿತ್ರವಾಗಲಿದೆ” ಎಂದು ಲೋಕೇಶ್ ಹೇಳಿದ್ದಾರೆ.
ಇತ್ತೀಚೆಗೆ ನಟ ಕಮಲ್ ಹಾಸನ್ ರಜಿನಿ ಜೊತೆಗಿನ ಲೋಕೇಶ್ ಅವರ ಸಿನಿಮಾಕ್ಕೆ ಶುಭಾಶಯವನ್ನು ಕೋರಿದ್ದರು.
ಸದ್ಯ ರಜಿನಿಕಾಂತ್ ʼ’ವೆಟ್ಟಯ್ಯನ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.