ಬೆಂಜಮಿನ್ ಲಿಸ್ಟ್, ಮೆಕ್ ಮೆಲನ್‌ರಿಗೆ ಒಲಿದ ರಸಾಯನ ಶಾಸ್ತ್ರ ನೊಬೆಲ್
Team Udayavani, Oct 6, 2021, 8:17 PM IST
ಸ್ಟಾಕ್‌ಹೋಮ್ : 2021 ನೇ ಸಾಲಿನ ರಸಾಯನ ಶಾಸ್ತ್ರ ಕ್ಕಾಗಿ ಕೊಡ ಮಾಡುವ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ಬೆಂಜಮಿನ್ ಲಿಸ್ಟ್ ಮತ್ತು ಯುಎಸ್ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಸ್ಕಾಟ್ಲೆಂಡ್ ಮೂಲದ ಡೇವಿಡ್ ಡಬ್ಲ್ಯೂಸಿ ಮೆಕ್ ಮಿಲನ್ ಅವರಿಗೆ ನೀಡಲಾಗಿದೆ.
ಈ ವಿಚಾರವನ್ನು ನೊಬೆಲ್ ಸಮಿತಿಯು ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದು, ಇಬ್ಬರು ಜೊತೆಯಾಗಿ ಸಂಶೋಧಿಸಿದ ರಾಸಾಯನಿಕ ಟೂಲ್ಕಿಟ್ ಅನ್ನು ಹೊಸ ಔಷಧಿಗಳನ್ನು ಕಂಡುಹಿಡಿಯಲು ಮತ್ತು ಸೌರ ಕೋಶಗಳಲ್ಲಿ ಬೆಳಕನ್ನು ಸೆರೆಹಿಡಿಯಬಲ್ಲ ಅಣುಗಳನ್ನು ತಯಾರಿಸಲು ಬಳಸಲಾಗುತ್ತಿದೆ, ಅವರ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಪ್ರಸಕ್ತ ವರ್ಷ ಅಮೆರಿಕದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೊಶಿಯನ್ ಅವರಿಗೆ ಶರೀರಶಾಸ್ತ್ರ ಮತ್ತು ಔಷಧ ವಿಜ್ಞಾನ ಕ್ಷೇತ್ರದ ಸಾಧಕರಿಗೆ ನೀಡ ಲಾಗುವ ನೊಬೆಲ್ ಬಹುಮಾನ ಘೋಷಿಸಲಾಗಿತ್ತು.
ನೊಬೆಲ್ ಪ್ರಶಸ್ತಿಯ ಮೂಲ
ಸ್ವೀಡನ್‌ನ ವಿಜ್ಞಾನಿ ಆಲ್ಫ್ರೆಡ್ ನೊಬೆಲ್ ಅವರ ಹೆಸರಿನ ಪುರಸ್ಕಾರ ಇದಾಗಿದ್ದು, ತಾನು ಆವಿಷ್ಕರಿಸಿದ್ದ ಡೈನಮೈಟ್ ಸ್ಫೋಟಕ ಯುದ್ಧದಲ್ಲಿ ಮಾಡಿದ ಹಾನಿಯನ್ನು ಕಂಡು ನೊಬೆಲ್ ಕೊರಗಿದ್ದರು. ಈ ನೋವಿನಂದ ಹೊರ ಬರಲು 1895ರಲ್ಲಿ ತನ್ನ ಸಂಪತ್ತಿನ ಶೇ. 94ರಷ್ಟು ಭಾಗವನ್ನು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗೈದಿರುವವರಿಗೆ ಪ್ರಶಸ್ತಿ ರೂಪದಲ್ಲಿ ನೀಡಲು ಉಯಿಲು ಬರೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.