ಕೆವಾಡಿಯಾ-ಅಹಮದಾಬಾದ್ ನಡುವೆ ಸಂಚರಿಸಲಿದೆ ಮೊದಲ ಸಮುದ್ರ-ವಿಮಾನ
Team Udayavani, Oct 27, 2020, 7:08 PM IST
ಮಣಿಪಾಲ: ಗುಜರಾತ್ನ ಕೆವಾಡಿಯಾ ಮತ್ತು ಅಹಮದಾಬಾದ್ ನಡುವಿನ ಮೊದಲ ಸಮುದ್ರ-ವಿಮಾನ ಸೇವೆ ನವೆಂಬರ್ 1ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
ಅಕ್ಟೋಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಈ ಸೇವೆಯನ್ನು ಉದ್ಘಾಟಿಸಲಿದ್ದಾರೆ. ವಿಶೇಷವೆಂದರೆ ಸೀ-ಪ್ಲೇನ್ ಸೇವೆ ದೇಶದಲ್ಲಿ ಮೊದಲ ಬಾರಿಗೆ ಪ್ರಾರಂಭವಾಗಲಿದೆ.
ಇದರಲ್ಲಿ ಬಳಸಿದ ವಿಮಾನವು 50 ವರ್ಷ ಹಳೆಯದು ಎಂಬ ಮಾಹಿತಿ ಇದೆ. ಅದರೆ ಸೇವೆಯನ್ನು ನಿರ್ವಹಿಸುವ ಸಂಸ್ಥೆಯು ವಿಮಾನವು ಸುರಕ್ಷೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ವಿಮಾನ ಹಳೆಯದಾದದೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ.
ಸಮುದ್ರ ವಿಮಾನ ಸೋಮವಾರ ಮಾಲ್ಡೀವ್ಸ್ನಿಂದ ಕೊಚ್ಚಿ ಮತ್ತು ಅನಂತರ ಗೋವಾ ಮೂಲಕ ಕೆವಾಡಿಯಾ (ಗುಜರಾತ್) ತಲುಪಿತು. 19 ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಇದು ಹೊಂದಿದೆ..
45 ನಿಮಿಷಗಳಲ್ಲಿ 136 ಕಿ.ಮೀ.
ಕೆವಾಡಿಯಾದಿಂದ (ನರ್ಮದಾ ಜಿಲ್ಲೆ) ಸಿ-ವಿಮಾನವು 45 ನಿಮಿಷಗಳಲ್ಲಿ ಸಬರಮತಿ ರಿವರ್ಫ್ರಂಟ್-ಅಹಮದಾಬಾದ್ ನಡುವೆ 136 ಕಿ.ಮೀ. ಪ್ರಯಾಣಿಸಲಿದೆ. ಸಮುದ್ರ ವಿಮಾನ ಪ್ರಯಾಣವು ಅಹಮದಾಬಾದ್ನಿಂದ ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭವಾಗಲಿದೆ. ಪ್ರತಿದಿನ ಸಮುದ್ರ-ವಿಮಾನವು ನಿಗದಿತ ಮಾರ್ಗದಲ್ಲಿ ಎಂಟು ಬಾರಿ ಪ್ರಯಾಣಿಸಲಿದೆ. ಪ್ರತಿ ವ್ಯಕ್ತಿಗೆ 4,800 ರೂ. ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಈ ವಿಮಾನದಲ್ಲಿ ಒಮ್ಮೆ 14 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. 5 ಸಿಬಂದಿ ಇರಲಿದ್ದಾರೆ. ವಿದೇಶಿ ಪೈಲಟ್ 6 ತಿಂಗಳ ಕಾಲ ಭಾರತೀಯ ಪೈಲಟ್ಗೆ ತರಬೇತಿ ನೀಡಲಿದ್ದಾರೆ.
ಸ್ಪೈಸ್ ಜೆಟ್ ಸಿ-ಪ್ಲೇನ್
ಈ ಸಮುದ್ರ ವಿಮಾನ ಈಗಾಗಲೇ ಕೆನಡಾ, ಟರ್ಕಿ, ಮಾಲ್ಡೀವ್ಸ್ನಲ್ಲಿ ಸೇವೆ ಸಲ್ಲಿಸಿದೆ. ಇದೀಗ ಗುಜರಾತ್ನಲ್ಲಿ ಸೇವೆ ಸಲ್ಲಿಸಲು ಸನ್ನದ್ಧವಾಗಿದೆ. ಸ್ಪೈಸ್ ಜೆಟ್ ಇದನ್ನು ನಿರ್ವಹಿಸುತ್ತದೆ. ನೋಂದಣಿ ಸಂಖ್ಯೆ 8Q-ISC ಹೊಂದಿರುವ ಈ ಸಮುದ್ರ-ವಿಮಾನವನ್ನು 1971ರಲ್ಲಿ ಕೆನಡಾದ ಡಿ ಹ್ಯಾವಿಲ್ಯಾಂಡ್ ಎಂಬವರು ನಿರ್ಮಿಸಿದ್ದರು. ಕಂಪನಿಯು ತನ್ನ ಮೊದಲ ವಿಮಾನವನ್ನು ಕೆನಡಾದ ಒಟ್ಟಾವಾ ದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರಿಗೆ ನೀಡಿತ್ತು. ಬಳಿಕ 3 ಮಾಲಕರು ವಿಮಾನವನ್ನು ಖರೀದಿಸಿದ್ದರು.
50 ವರ್ಷದ ಸಿ-ಪ್ಲೇನ್ನ ಸುರಕ್ಷತಾ ಅಂಶಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೈಸ್ ಜೆಟ್ ವಕ್ತಾರರು, ಸೆ-ಪ್ಲೇನ್ ಸುರಕ್ಷಿತ ವಿಮಾನಗಳಲ್ಲಿ ಒಂದಾಗಿದೆ. ವಿಮಾನವು ನಿಯಮಿತವಾಗಿ ಸೇವೆ ಸಲ್ಲಿಸುತ್ತಿದ್ದು, ಉನ್ನತ ಸ್ಥಿತಿಯಲ್ಲಿದೆ. ಸ್ಪೈಸ್ ಜೆಟ್ಗೆ ಅದರ ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ಆದ್ಯತೆಯಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.