ಮೊದಲ ರಾತ್ರಿಯೇ ತಾಯಿಯಾದ ವಧು!
Team Udayavani, Jun 30, 2023, 7:22 AM IST
ನೊಯ್ಡಾ: ಮದುವೆಯಾದ ಮೊದಲನೇ ರಾತ್ರಿಯೇ ವಧು ಮಗುವಿಗೆ ಜನ್ಮ ನೀಡಿದ ಘಟನೆ ದೆಹಲಿ ಹೊರವಲಯದ ಗ್ರೇಟರ್ ನೊಯ್ಡಾದಲ್ಲಿ ವರದಿಯಾಗಿದೆ. ಗ್ರೇಟರ್ ನೊಯ್ಡಾದ ವರನಿಗೆ ತೆಲಂಗಾಣದ ಸಿಕಂದರಾಬಾದ್ನ ಯುವತಿಯೊಬ್ಬಳ ಜತೆಗೆ ಜೂ.26ರಂದು ಮದುವೆ ನಡೆಯಿತು. ಪ್ರಥಮ ರಾತ್ರಿಯಂದು ವಧು ತನಗೆ ಹೊಟ್ಟೆ ನೋವು ಎಂದು ಹೇಳಿದ್ದಾಳೆ. ಹುಡುಗನ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ತಪಾಸಣೆ ನಡೆಸಿದ ವೈದ್ಯರು, ಆಕೆ 7 ತಿಂಗಳ ಗರ್ಭಿಣಿ ಎಂದು ಹೇಳಿದ್ದಾರೆ. ಮುಂಜಾನೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. “ವಧುವಿಗೆ ಹೊಟ್ಟೆ ಹುಬ್ಬಿದ್ದ ಬಗ್ಗೆ ಪ್ರಶ್ನಿಸಿದಕ್ಕೆ, “ಹೊಟ್ಟೆಯಲ್ಲಿ ಕಲ್ಲಾಗಿದ್ದ ಕಾರಣ, ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ಆಗಿರುವುದರಿಂದ ಹೊಟ್ಟೆ ಹುಬ್ಬಿದೆ’ ಎಂದು ಆಕೆಯ ಮನೆಯವರು ಸಮಜಾಯಿಷಿ ನೀಡಿದ್ದರು. ಆಕೆ ಗರ್ಭಿಣಿಯಾಗಿರುವುದು ತಿಳಿದಿದ್ದರೂ ಆಕೆಯ ಕುಟುಂಬದವರು ವಿಷಯವನ್ನು ಮುಚ್ಚಿಟ್ಟಿದ್ದರು,” ಎಂದು ಹುಡುಗನ ಕುಟುಂಬದವರು ದೂರಿದ್ದಾರೆ. ವಧುವಿನ ಪೋಷಕರು ಬಂದು ತಾಯಿ-ಮಗುವನ್ನು ತಮ್ಮ ಜತೆಗೆ ಸಿಕಂದರಾಬಾದ್ಗೆ ಕರೆದುಕೊಂಡು ಹೋಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.