Budget 2024; ಸಂಬಳದಾರರಿಗೆ ಭಾರಿ ನೆರವು ಒದಗಿಸಿದ ಬಜೆಟ್‌

ತೆರಿಗೆ ಮಿತಿಯನ್ನು 4 ಲಕ್ಷಕ್ಕೇರಿಸುವ ನಿರೀಕ್ಷೆ ಹುಸಿಯಾಯಿತು

Team Udayavani, Jul 24, 2024, 6:05 AM IST

Budget 2024; ಸಂಬಳದಾರರಿಗೆ ಭಾರಿ ನೆರವು ಒದಗಿಸಿದ ಬಜೆಟ್‌

ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2024ರ ಬಜೆಟ್‌ನಲ್ಲಿ ಯುವ ಜನರ ಸಬಲೀಕರಣಕ್ಕೆ ಒತ್ತು ನೀಡಲಾಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮುಂದಿನ 5 ವರ್ಷಗಳಲ್ಲಿ 4 ಕೋಟಿ ಯುವಕರಿಗೆ ಉದ್ಯೋಗ ಒದಗಿಸುವ ಭರವಸೆಯನ್ನು ಬಜೆಟ್‌ನಲ್ಲಿ ನೀಡಲಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಿರುವುರಿಂದ ಇದು ತೆರಿಗೆ ಪಾವತಿದಾರರಿಗೆ ಸಿಹಿ ಬಜೆಟ್‌ ಆಗಿದೆ. ಈ ಬಜೆಟ್‌ನಲ್ಲಿ ತೆರಿಗೆ ಸರಳೀಕರಣ ಮಾಡಲಾಗಿದ್ದು, 3 ಲಕ್ಷ ರೂ.ವರೆಗೆ ಯಾವುದೇ ತೆರಿಗೆಯನ್ನು ಪಾವತಿಸುವ ಅವಶ್ಯಕತೆ ಇಲ್ಲ. ಕಳೆದ ಬಾರಿಯೂ ಸಹ ತೆರಿಗೆ ಪದ್ಧತಿಯಲ್ಲಿ ಇದನ್ನೇ ಮುಂದುವರಿಸಲಾಗಿತ್ತು. ಈ ಮಿತಿಯನ್ನು 4 ಲಕ್ಷ ರೂ.ಗೆ ಏರಿಕೆ ಮಾಡಿದ್ದರೆ ಮತ್ತಷ್ಟು ಅನುಕೂಲವಾಗುತ್ತಿತ್ತು.

ಆದರೆ ಈ ಬಾರಿ ಶೇ.5ರಷ್ಟು ತೆರಿಗೆ ಪಾವತಿ ಮಾಡುವವರಿಗೆ ಮಿತಿಯನ್ನು ಹೆಚ್ಚಳ ಮಾಡಲಾಗಿದ್ದು, ಇದನ್ನು 7 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಶೇ.10ರಷ್ಟು ತೆರಿಗೆ ಪಾವತಿ ಮಾಡಲಾಗುತ್ತಿದ್ದ ಮಿತಿಯನ್ನು ಸಹ 10 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಇದು ತೆರಿಗೆದಾರರಿಗೆ ಅನುಕೂಲ ಒದಗಿಸಲಿದೆ.

ಹೂಡಿಕೆದಾರರಿಗಿದ್ದ ಏಂಜಲ್‌ ತೆರಿಗೆಯನ್ನು ರದ್ದು ಮಾಡಲಾಗಿದೆ. ಈ ಬಜೆಟ್‌ನಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ, ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಪೂರಕವಾದ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ವಿವಿಧ ಪಾವತಿಗಳಿಗೆ ಶೇ.5ರಷ್ಟು ಟಿಡಿಎಸ್‌ ಬದಲಿಗೆ ಶೇ.2ಟಿಡಿಎಸ್‌ನ್ನು ಒದಗಿಸಲಾಗುತ್ತಿದೆ.

ಮ್ಯುಚುವಲ್‌ ಫ‌ಂಡ್‌ ಅಥವಾ ಯುಟಿಐ ಮರು ಖರೀದಿಯಲ್ಲಿ ಟಿಡಿಎಸ್‌ನನ್ನು ಶೇ.20ರಷ್ಟು ಹಿಂಪಡೆಯಲಾಗಿದೆ. ಈ- ಕಾಮರ್ಸ್‌ ಆಪರೇಟರ್‌ಗಳಿಗೆ ತೆರಿಗೆಯನ್ನು ಶೇ.1ರಿಂದ 0.1ಕ್ಕೆ ಇಳಿಸಲಾಗಿದೆ. ಅಲ್ಲದೆ ಟಿಡಿಎಸ್‌ ತುಂಬುವಲ್ಲಿ ವಿಳಂಬವಾದಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಇವೆಲ್ಲವೂ ತೆರಿಗೆದಾರರಿಗೆ ಅನುಕೂಲ ಒದಗಿಸಲಿದೆ.

ಪ್ರಸ್ತಕ ಬಜೆಟ್‌ನಲ್ಲಿ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50,000 ರೂ.ನಿಂದ 75,000ರೂ.ಗೆ ಏರಿಕೆ ಮಾಡಿದ್ದು, ಇದರಿಂದ 4 ಕೋಟಿ ವೇತನದಾರರರಿಗೆ ಅನುಕೂಲವಾಗಿದೆ. ಪಿಂಚಣಿದಾರರಿಗೆ 5,000ರೂನಿಂದ 25,000ರೂ.ಗೆ ಏರಿಕೆ ಮಾಡಲಾಗಿದ್ದು ಇದರಿಂದ 4 ಕೋಟಿ ತೆರಿಗೆದಾರರು ಲಾಭ ಪಡೆದುಕೊಳ್ಳಲಿದ್ದಾರೆ. ಸದ್ಯ ಮೂರನೇ 2 ಭಾಗದಷ್ಟು ಜನರು ಹೊಸ ತೆರಿಗೆ ಪದ್ದತಿಯನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ಹೊಸ ತೆರಿಗೆ ಪದ್ಧತಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು 17500 ರೂ.ವರೆಗೆ ಈಗ ಉಳಿತಾಯ ಮಾಡಬಹುದಾದ ಅವಕಾಶ ಹೆಚ್ಚಾಗಿದೆ.

ರಮೇಶ್‌ ಕಟ್ಟ
ರಮೇಶ್‌ ಆ್ಯಂಡ್‌ ಕಂಪನಿ, ಬೆಂಗಳೂರು.
[email protected]

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

7

Crime: ಸೈನೈಡ್ ಮಿಶ್ರಿತ ಜ್ಯೂಸ್‌ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್‌ ಅರೆಸ್ಟ್

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.