BJP: ರಾಜ್ಯಾಧ್ಯಕ್ಷರ ಆಯ್ಕೆ ವರಿಷ್ಠರಿಗೆ ಬಿಟ್ಟಿದ್ದು: ಸಿ.ಟಿ. ರವಿ
Team Udayavani, Jul 8, 2023, 7:30 AM IST
ಚಿತ್ರದುರ್ಗ: ಕೆಲವು ಸಂಗತಿಗಳನ್ನು ನಾನು ಹೇಳಲು ಆಗುವುದಿಲ್ಲ. ನನ್ನ ಬಳಿ ಉತ್ತರವೂ ಇಲ್ಲ. ಬಹಳ ಹುಡುಕಾಡಬೇಕಾದ ಸ್ಥಿತಿಯೂ ಇಲ್ಲ. ಬೇರೆನೋ ವಿಷಯ ಇರಬಹುದೇನೋ ನನಗೆ ಗೊತ್ತಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವರಿಷ್ಠರಿಗೆ ಬಿಟ್ಟ ವಿಷಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ವೀಕ್ಷಕರು ಬಂದು ವರದಿ ಪಡೆದುಕೊಂಡು ಹೋಗಿದ್ದಾರೆ.
ನಾನು ಗೋವಾ, ತಮಿಳುನಾಡು, ಮಹಾರಾಷ್ಟ್ರ ಉಸ್ತುವಾರಿ ಆಗಿರುವುದರಿಂದ ಇಲ್ಲಿ ಗಮನ ನೀಡಿಲ್ಲ. ವರಿಷ್ಠರು ಏನಾದರೂ ಕೇಳಿದರೆ ಮಾತ್ರ ಹೇಳುತ್ತೇನೆ. ಆದರೆ, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಮಾಜಿ ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್ ಸೇರಿದಂತೆ ಎಲ್ಲರಿಗೂ ಅಧ್ಯಕ್ಷರಾಗುವ ಅರ್ಹತೆಯಿದೆ. ಆದರೆ, ಸವಾಲಿದೆ. ಸಂಕಷ್ಟ ನಿಭಾ ಯಿಸುವ ಜವಾಬ್ದಾರಿ ಇದಾಗಿದೆ. ಅ ಧಿಕಾರವಲ್ಲ ಎಂದರು.
ಕಾಂಗ್ರೆಸ್‌ಗೆ ಈ ವರ್ಷ ಹನಿಮೂನ್ ಅವಧಿ
ಯಾವುದೇ ಸರಕಾರ ಅಧಿಕಾರಕ್ಕೆ ಬಂದ 6 ತಿಂಗಳಿಂದ 1 ವರ್ಷ ಹನಿಮೂನ್ ಅವಧಿಯಾಗಿರುತ್ತದೆ. ಆದರೆ, ಈ ಸರಕಾರ ಬಂದ ದಿನದಿಂದಲೇ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿಗಳು ಎಲ್ಲರಿಗೂ ಉಚಿತ ಎಂದು ಹೇಳಿದವರು ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ವಿದ್ಯುತ್ ದರ ಹೆಚ್ಚಳ ಮಾಡಿ ಜನರ ಗಮನ ಬೇರೆಡೆ ಸೆಳೆಯಲು ಮತ್ತೂಂದು ವಿಷಯ ಮುನ್ನೆಲೆಗೆ ತರುವ ಬುದ್ಧಿವಂತಿಕೆ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದರು.
ಹೊಂದಾಣಿಕೆ ರಾಜಕಾರಣವಿಲ್ಲ: ರವಿ
ಒಳ್ಳೆಯ ಕೆಲಸ ಮಾಡಿದರೆ ಸರಕಾರಕ್ಕೆ ಶಹಾಬ್ಟಾಸ್‌ಗಿರಿ ಕೊಡುತ್ತೇವೆ. ತಪ್ಪು ಮಾಡಿದಾಗ ಜನರ ಪರವಾಗಿ ನಿಲ್ಲುತ್ತೇವೆ. ಎಚ್.ಡಿ. ಕುಮಾರಸ್ವಾಮಿ ಅವರದ್ದು ಬೇರೆ ರಾಜಕೀಯ ಪಕ್ಷ. ರಾಜಕೀಯವಾಗಿ ಅವರು, ನಾವು ಬೇರೆ ಬೇರೆ. ಜನರ ವಿಷಯ ಬಂದಾಗ, ವಿಷಯ ಒಂದೇ ಇದ್ದಾಗ ಒಟ್ಟಿಗೆ ಮಾತನಾಡುತ್ತೇವೆ. ಇದು ಹೊಂದಾಣಿಕೆ ಅಲ್ಲ. ರಾಜಕಾರಣದಲ್ಲಿ ಪರಸ್ಪರ ಮುಖಾಮುಖೀ ಆಗುವುದು, ಮಾತನಾಡುವುದು ಅಪರಾಧವಲ್ಲ. ಎದುರು ಸಿಕ್ಕಿದಾಗ ಸ್ವಾಭಾವಿಕವಾಗಿ ಮಾತನಾಡುತ್ತೇವೆ. ಇದು ಅಪರಾಧವಲ್ಲ. ಮಾಜಿ ಸಿಎಂ ಬೊಮ್ಮಾಯಿ, ಆರ್. ಅಶೋಕ್ ಹಾಗೂ ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.
ಮತಾಂತರ ಪಿಡುಗು ಚರ್ಚಿಸಲು ಮಹಾ ಪಂಚಾಯತ್ ಆಗಬೇಕು
ಮತಾಂತರ ವಿಚಾರದಲ್ಲಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಕುಟುಂಬದ ಉದಾಹರಣೆ ಜೀವಂತವಾಗಿದೆ. ಮತಾಂತರದ ಪಿಡುಗು ಗೆದ್ದಲಿನಂತೆ ಹಿಂದೂ ಸಮಾಜವನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತದೆ. ಆಸೆ, ಆಮಿಷ, ಬಲಾತ್ಕಾರದಿಂದ ಮತಾಂತರ ಮಾಡುವುದನ್ನು ನಾವು ನಿಷೇಧಿಸಿದ್ದೇವೆ. ಈ ಸರಕಾರ ಇದನ್ನು ಸರಿ ಎಂದು ಹೇಳುತ್ತಾ ಉತ್ತರ ಕೊಡಬೇಕು. ಒಂದು ವೇಳೆ ಸರಿ ಎನ್ನುವುದಾದರೆ ರಾಜಕೀಯ ಪಕ್ಷ ಮಾತ್ರ ಉತ್ತರ ಕೊಡುವುದಲ್ಲ, ಎಲ್ಲ ಧಾರ್ಮಿಕ ಮುಖಂಡರು, ಮಠಾಧೀಶರು ಮಹಾ ಪಂಚಾಯತ್ ಕರೆದು ಸಮಾಜವನ್ನು ಉಳಿಸಿಕೊಳ್ಳಲು ಯೋಚನೆ ಮಾಡಬೇಕಾಗುತ್ತದೆ. ಭಕ್ತರಿದ್ದರೆ ಮಠ. ಅವರು ಇದನ್ನು ಯೋಚನೆ ಮಾಡಬೇಕು ಎಂದು ಸಿ.ಟಿ.ರವಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.