ಟಿಪ್ಪು ಕುರಿತಾಗಿ ಅಪ್ಪಚ್ಚು ರಂಜನ್ ಕೊಟ್ಟ ಪುಸ್ತಕಗಳು: ಅಸತ್ಯಗಳ ಬಗ್ಗೆ ಜೋರಾದ ಚರ್ಚೆ
ಸಮಿತಿ ಪರಿಶೀಲನೆ ಮಾಡುತ್ತದೆ ಎಂದ ಬಿಸಿ ನಾಗೇಶ್
Team Udayavani, Mar 29, 2022, 12:26 PM IST
ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತಾಗಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಕೊಟ್ಟ ಪುಸ್ತಕಗಳಲ್ಲಿ ಬ್ರಿಟಿಷ್ ಲೈಬ್ರರಿಯಲ್ಲಿರುವಂತ ಉಲ್ಲೇಖಗಳು ಇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಮಂಗಳವಾರ ಹೇಳಿಕೆ ನೀಡಿದ್ದಾರೆ.
ವಿಧಾನಸೌದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಅಪ್ಪಚ್ಚು ರಂಜನ್ ಟಿಪ್ಪು ಬಗ್ಗೆ ಒಂದಿಷ್ಟು ಪುಸ್ತಕಗಳನ್ನು ತಂದುಕೊಟ್ಟಿದ್ದಾರೆ. ಬ್ರಿಟಿಷ್ ಲೈಬ್ರರಿಯಲ್ಲಿರುವಂತ ಟಿಪ್ಪು ಬಗ್ಗೆಯ ಉಲ್ಲೇಖಗಳನ್ನೇ ಕೊಟ್ಟಿದ್ದಾರೆ. ಟಿಪ್ಪು ಬಗ್ಗೆಯ ಅಸತ್ಯಗಳನ್ನು ತೆಗೆಯರಿ ಮತ್ತು ನಿಜ ಏನೇನು ಇದೆ ಅದನ್ನು ಹೇಳಿ ಎಂದು ಪುಸ್ತಕಗಳನ್ನ ಕೊಟ್ಟು ಹೋಗಿದ್ದಾರೆ ಎಂದರು.
ಪ್ರಮುಖವಾಗಿ ಟಿಪ್ಪು ಒಳ್ಳೆಯದು ಮಾಡಿದ್ದನ್ನು ಹೇಳಿ, ಸಮಾಜಕ್ಕೆ ಕೆಟ್ಟದ್ದು ಮಾಡಿದ್ದನ್ನೂ ಹೇಳಿ ಎಂದಿದ್ದಾರೆ. ಒನ್ ಸೈಡ್ ಟಿಪ್ಪು ಸುಲ್ತಾನ್ ರನ್ನ ತೋರಿಸಬೇಡಿ ಎಂದು ಪುಸ್ತಕಗಳನ್ನು ಕೊಟ್ಟು ಹೋಗಿದ್ದಾರೆ. ನಾನು ಇದವರೆಗೂ ನೋಡಿಲ್ಲ. ಇದಕ್ಕೆ ಅಧಾರ ಇದೆ ಎನ್ನುವ ಮಾತನ್ನ ಹೇಳಿದ್ದಾರೆ.ಇದನ್ನೆಲ್ಲ ಪಠ್ಯ ಪರಿಶೀಲನಾ ಸಮಿತಿ ಪರಿಶೀಲನೆ ಮಾಡುತ್ತದೆ ಎಂದರು.
6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರವು ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಪಠ್ಯ ಪುಸ್ತಕದಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ತೆಗೆದು ಹಾಕಲು ವರದಿಯಲ್ಲಿ ಉಲ್ಲೇಖ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.